ನಾಳೆ ಮೇಷ ರಾಶಿಯಲ್ಲಿ ರಾಹು-ಚಂದ್ರರ ಮೈತ್ರಿಯಿಂದ `ಗ್ರಹಣ ದೋಷ ಯೋಗ`, ಈ ರಾಶಿಗಳ ಜನರಿಗೆ ಎಚ್ಚರಿಕೆ!

Wed, 22 Mar 2023-6:47 pm,

ವೃಶ್ಚಿಕ ರಾಶಿ- ಗ್ರಹಣ ಯೋಗವು ವೃಶ್ಚಿಕ ರಾಶಿಯವರಿಗೆ ಪ್ರತಿಕೂಲ ಸಾಬೀತಾಗಲಿದೆ. ಏಕೆಂದರೆ ನಿಮ್ಮ ರಾಶಿಯಿಂದ ಷಷ್ಟಮ ಭಾವದಲ್ಲಿ ರಾಹು ಮತ್ತು ಚಂದ್ರರ ಮೈತ್ರಿಯು ರೂಪುಗೊಳ್ಳಲಿದೆ. ಹೀಗಾಗಿ ರಹಸ್ಯ ಶತ್ರುಗಳು ಈ ಅವಧಿಯಲ್ಲಿ  ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ಪ್ರಮುಖ ಕೆಲಸ ನಿಂತು ಹೋಗಬಹುದು. ನಿಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ. ಈ ಅವಧಿಯಲ್ಲಿ ಆದಷ್ಟು ವಾಗ್ವಾದ ತಪ್ಪಿಸಿ. ಸಾಲ ನೀಡುವುದನ್ನು ಸಹ ತಪ್ಪಿಸಿ. ವಾಹನ ಚಲಾಯಿಸುವಾಗ ಜಾಗರೂಕರಾಗಿರಿ, ಇಲ್ಲದಿದ್ದರೆ ಅಪಘಾತ ಸಂಭವಿಸಬಹುದು.  

ಮಕರ ರಾಶಿ- ಗ್ರಹಣ ಯೋಗದ ರೂಪಗೊಳ್ಳುವಿಕೆ ಮಕರ ರಾಶಿಯ ಜನರಿಗೆ ಹಾನಿಕಾರಕ ಸಾಬೀತಾಗಬಹುದು. ಏಕೆಂದರೆ ಈ ಮೈತ್ರಿಯು ನಿಮ್ಮ ರಾಶಿಯಿಂದ ಚತುರ್ಥ ಭಾವದಲ್ಲಿ ರಚನೆಯಾಗುತ್ತಿದೆ. ಮನದಲ್ಲಿ ಯಾವುದೋ ಒಂದು ಚಿಂತೆ ನಿಮ್ಮನ್ನು ಕಾಡಲಿದೆ. ಇದರೊಂದಿಗೆ ಕುಟುಂಬದಲ್ಲಿ ಯಾರೊಂದಿಗಾದರೂ ಜಗಳಗಳ ಉಂಟಾಗುವ ಸಾಧ್ಯತೆ ಇದೇ. ಏಕೆಂದರೆ ಪ್ರಸ್ತುತ ನಿಮ್ಮ ಮೇಲೆ ಸಾಡೇಸಾತಿ ನಡೆಯುತ್ತಿದೆ. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬೇಡಿ.  

ವೃಷಭ ರಾಶಿ- ಗ್ರಹಣ ಯೋಗವು ನಿಮಗೆ ಸ್ವಲ್ಪ ಹಾನಿಕಾರಕವೆಂದು ಸಾಬೀತಾಗಲಿದೆ. ಏಕೆಂದರೆ ನಿಮ್ಮ ರಾಶಿಯಿಂದ ದ್ವಾದಶ ಭಾವದಲ್ಲಿ ಈ ಮೈತ್ರಿಯು ರೂಪುಗೊಳ್ಳಲಿದೆ. ಈ ಅವಧಿಯಲ್ಲಿ ನೀವು ಅನಗತ್ಯ ವೆಚ್ಚಗಳನ್ನು ತಪ್ಪಿಸಬೇಕು, ಏಕೆಂದರೆ ಅದರಿಂದ ನಿಮ್ಮ ಬಜೆಟ್ ಹದಗೆಡಬಹುದು. ಜೊತೆಗೆ ಮಾನಸಿಕ ಒತ್ತಡವೂ ಎದುರಾಗಬಹುದು. ಈ ಅವಧಿಯಲ್ಲಿ ಯಾವುದೇ ಹೊಸ ಒಪ್ಪಂದಕ್ಕೆ ಸಹಿ ಹಾಕಬೇಡಿ ಅಥವಾ ಮಾಡಿಕೊಳ್ಳಬೇಡಿ, ಜೊತೆಗೆ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬೇಡಿ. ಅದೇ ಸಮಯದಲ್ಲಿ, ನೀವು ಪ್ರಯಾಣಿಸಬಹುದು, ಆದರೆ ಅದು ವ್ಯರ್ಥವಾಗುತ್ತದೆ. ಅಲ್ಲದೆ, ಈ ಅವಧಿಯಲ್ಲಿ ದಾಖಲೆಗಳು ಕಳೆದುಹೋಗುವ ಸಾಧ್ಯತೆ ಇದೆ. ಇನ್ನೊಂದೆಡೆ ವಾಹನ ಚಲಾಯಿಸುವಾಗ ಜಾಗರೂಕರಾಗಿರಿ. ಆದಷ್ಟು ಕೋಪವನ್ನು ತಪ್ಪಿಸಲು ಯತ್ನಿಸಿ.  

ಕನ್ಯಾ ರಾಶಿ- ಗ್ರಹಣ ಯೋಗವು ನಿಮ್ಮ ಪಾಲಿಗೆ ಹಾನಿಕಾರಕವೆಂದು ಸಾಬೀತುಪಡಿಸಬಹುದು. ಏಕೆಂದರೆ ನಿಮ್ಮ ಸಂಕ್ರಮಣದ ಜಾತಕದ ಅಷ್ಟಮ ಭಾವದಲ್ಲಿ ರಾಹು ಮತ್ತು ಚಂದ್ರರ ಈ ಮೈತ್ರಿ ಇರಲಿದೆ. ಹೀಗಾಗಿ ಈ ಅವಧಿಯಲ್ಲಿ ನೆಗಡಿ, ಶೀತ, ಜ್ವರ ಬರಬಹುದು. ಇದರೊಂದಿಗೆ ಮನಸ್ಸಿನಲ್ಲಿ ಚಂಚಲತೆ ಇರಲಿದೆ, ಯಾವುದೇ ಕೆಲಸದಲ್ಲಿ ತೊಡಗಿಸಿಕೊಳ್ಳಲು ನಿಮ್ಮಿಂದ ಸಾಧ್ಯವಾಗದಿರಬಹುದು. ಆದ್ದರಿಂದ ಈ ಸಮಯದಲ್ಲಿ ಕೆಲಸ ಬದಲಾಯಿಸಬೇಡಿ. ಈ ಅವಧಿಯಲ್ಲಿ ಮಾನಸಿಕ ಒತ್ತಡವೂ ಉಂಟಾಗಬಹುದು. ಇದೇ ವೇಳೆ, ವ್ಯಾಪಾರಿಗಳು ಯಾವುದೇ ಒಪ್ಪಂದಕ್ಕೆ ಸಹಿ ಹಾಕಬಾರದು. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ  ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ, ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link