ಎಂಟು ತಿಂಗಳುಗಳ ಬಳಿಕ ರೇವತಿ ನಕ್ಷತ್ರಕ್ಕೆ ರಾಹು ಪ್ರವೇಶ, ಹೊಸ ವರ್ಷದಲ್ಲಿ ಈ ರಾಶಿಗಳ ಜನರಿಗೆ ಅಪಾರ ಧನ-ಸಂಪತ್ತು ಪ್ರಾಪ್ತಿ ಯೋಗ!
ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಅಕ್ಟೋಬರ್ 30, 2023ರಂದು ಮದ್ಯಾಹ್ನ 1 ಗಂಟೆ 33 ನಿಮಿಷಕ್ಕೆ ರಾಹು ಅಶ್ವಿನಿ ನಕ್ಷತ್ರದಿಂದ ಹೊರಬಂದು ರೇವತಿ ನಕ್ಷತ್ರವನ್ನು ಪ್ರವೇಶಿಸಿದೆ. ಇಲ್ಲಿ ಆತ ಜುಲೈ 8, 2024ರ ಸಂಜೆ 4 ಗಂಟೆ 11 ನಿಮಿಷದವರೆಗೆ ಇರಲಿದ್ದು, ಬಳಿಕ ಉತ್ತರಾ ಭಾದ್ರಪದ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ. ಈಗ ಅದೃಷ್ಟವಂತ ರಾಶಿಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ ,
ಮಿಥುನ ರಾಶಿ: ರಾಹು ನಿಮ್ಮ ಜಾತಕದ ದಶಮ ಭಾವದಲ್ಲಿ ರೇವತಿ ನಕ್ಷತ್ರಕ್ಕೆ ಪ್ರವೇಶಿಸಿದ್ದಾನೆ. ಇದರಿಂದ ಈ ರಾಶಿಗಳ ಜನರಿಗೆ ವಿಶೇಷ ಲಾಭ ಸಿಗಲಿದೆ. ಮಿಥುನ ರಾಶಿಗೆ ಬುಧ ಅಧಿಪತಿಯಾಗಿರುವ ಕಾರಣ ರಾಹು ನಿಮಗೆ ಲಾಭವೋ ಲಾಭ ಕರುಣಿಸಲಿದ್ದಾನೆ, ಏಕೆಂದರೆ, ಬುಧ ಹಾಗೂ ರಾಹುವಿನ ನಡುವೆ ಸ್ನೇಹ ಭಾವದ ಸಂಬಂಧವಿದೆ. ದೀರ್ಘಾವಧಿಯಿಂದ ನೆನೆಗುದಿಗೆ ಬಿದ್ದ ಕೆಲಸ ಕಾರ್ಯಗಳು ಈ ಅವಧಿಯಲ್ಲಿ ಪೂರ್ಣಗೊಳ್ಳಲಿವೆ. ಬಿಸ್ನೆಸ್ ನಲ್ಲಿ ಅಪಾರ ಯಶಸ್ಸಿನ ಜೊತೆಗೆ ಧನಲಾಭ ಉಂಟಾಗಲಿದೆ. ಕುಟುಂಬ ಸದಸ್ಯರ ಜೊತೆಗೆ ಉತ್ತಮ ಕಾಲವನ್ನು ಕಳೆಯುವಿರಿ. ಆರ್ಥಿಕ ಸ್ಥಿತಿ ಬಲಿಷ್ಠವಾಗಿರಲಿದೆ. ಇದಲ್ಲದೆ ಸಮಾಜದಲ್ಲಿ ನಿಮ್ಮ ಘನತೆ-ಗೌರವದ ಜೊತೆಗೆ ಸ್ಥಾನಮಾನ ಪ್ರತಿಷ್ಠೆ ಪ್ರಾಪ್ತಿಯಾಗಲಿದೆ.
ಕರ್ಕ ರಾಶಿ: ರಾಹು ನಿಮ್ಮ ಗೋಚರ ಜಾತಕದ ನವಮ ಭಾವದಲ್ಲಿ ರೇವತಿ ನಕ್ಷತ್ರಕ್ಕೆ ಪ್ರವೇಶಿಸಿದ್ದಾನೆ. ಹೀಗಿರುವಾಗ ನಿಮಗೆ ವಿದೇಶಯಾತ್ರೆಯ ಯೋಗ ಕೂಡಿಬರುವ ಸಾಧ್ಯತೆ ಇದೇ. ವಿದೇಶಕ್ಕೆ ಹೋಗಿ ವ್ಯಾಸಂಗ ಮಾಡಲು ಇಚ್ಚಿಸುವವರ ಆಸೆ ಈಡೇರಲಿದೆ. ಹೊಸ ನೌಕರಿಯ ಹುಡುಕಾಟದಲ್ಲಿರುವ ಜನರಿಗೆ ಹಲವು ಅವಕಾಶಗಳು ಒದಗಿ ಬರಲಿವೆ. ಒಂದು ವೇಳೆ ನಿಮ್ಮ ಜಾತಕದಲ್ಲಿ ರಾಹುವಿನ ಸ್ಥಾನ ಉತ್ತಮವಾಗಿದ್ದಾರೆ. ವೃತ್ತಿಜೀವನದ ಮೇಲೆ ರಾಹು ಸಕಾರಾತ್ಮಕ ಪ್ರಭಾವ ಬೀರಳಿದ್ದಾನೆ. ಹೀಗಿರುವಾಗ ಒಳ್ಳೆಯ ನೌಕರಿಯ ಅವಕಾಶ ನಿಮಗೆ ಒದಗಿಬರುವ ಸಾಧ್ಯತೆ ಇದೇ. ಆದರೆ, ಮಾನಸಿಕ ಚಿಂತೆ ಎದುರಾಗುವ ಸಾಧ್ಯತೆ ಇದೆ. ಇಷ್ಟ ದೇವರನ್ನು ಧ್ಯಾನಿಸುವುದು ಉತ್ತಮ.
ಕನ್ಯಾ ರಾಶಿ: ನಿಮ್ಮ ಗೋಚರ ಜಾತಕದ ಸಪ್ತಮ ಭಾವದಲ್ಲಿ ರಾಹು ರೇವತಿ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. ರೇವತಿ ನಕ್ಷತ್ರ ಹಾಗೂ ಕನ್ಯಾ ರಾಶಿ ಎರಡಕ್ಕೂ ಬುಧ ಅಧಿಪತಿಯಾಗಿದ್ದಾನೆ. ಹೀಗಾಗಿ ನಿಮಗೆ ವಿಶೇಷ ಲಾಭ ಸಿಗಲಿದೆ. ಬಿಸ್ನೆಸ್ ಮಾಡುವವರಿಗೆ ಅಪಾರ ಧನ ಪ್ರಾಪ್ತಿಯಾಗಲಿದೆ. ಈ ಅವಧಿಯಲ್ಲಿ ನೀವು ಸಾಕಷ್ಟು ಉತ್ಸಾಹದಿಂದ ತುಂಬಿರುವಿರಿ. ಇದರಿಂದ ನೀವು ನಿಮ್ಮ ಗುರಿಯನ್ನು ಸಾಧಿಸುವಲ್ಲಿ ಸಾಕಷ್ಟು ಪ್ರಯತ್ನಿಸುವಿರಿ, ವೃತ್ತಿ ಜೀವನದ ಕುರಿತು ಹೇಳುವುದಾದರೆ, ನಿಮ್ಮ ಕೆಲಸವನ್ನು ನೋಡಿ ಹಿರಿಯ ಅಧಿಕಾರಿಗಳು ನಿಮಗೆ ಪದೋನ್ನತಿ ಹಾಗೂ ಇಂಕ್ರಿಮೆಂಟ್ ಭಾಗ್ಯ ಕರುಣಿಸಲಿದ್ದಾರೆ. ಇದರ ಜೊತೆಗೆ ದೊಡ್ಡ ಜವಾಬ್ದಾರಿಯೂ ಕೊಡ ನಿಮ್ಮ ಹೆಗಲಿಗೇರಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)