Shukra Gochar 2022: ರಾಹು-ಶುಕ್ರರ ಸಂಯೋಗ- ಈ ರಾಶಿಯವರು ಎಚ್ಚರದಿಂದಿರಿ

Mon, 23 May 2022-9:54 am,

ರಾಹು-ಶುಕ್ರ ಸಂಯೋಜನೆಯು ಮೇಷ ರಾಶಿಯವರಿಗೆ ಸ್ವಭಾವವನ್ನು ವೇಗಗೊಳಿಸುತ್ತದೆ. ನಿಮ್ಮ ಕೋಪವನ್ನು ನಿಯಂತ್ರಿಸಿ. ನಿಕಟ ಜನರೊಂದಿಗೆ ವಾದ ಮಾಡಬೇಡಿ. ಜೀವನ ಸಂಗಾತಿ ಅಥವಾ ಪ್ರೀತಿಯ ಸಂಗಾತಿಯೊಂದಿಗಿನ ಸಂಬಂಧವು ಹದಗೆಡಬಹುದು. 

ರಾಹು-ಶುಕ್ರ ಸಂಯೋಗವು ವೃಷಭ ರಾಶಿಯವರಿಗೆ ಸಂಬಂಧಗಳು ಮತ್ತು ಹಣದಲ್ಲಿ ಸಮಸ್ಯೆಗಳನ್ನು ನೀಡುತ್ತದೆ. ಬುದ್ಧಿವಂತಿಕೆಯಿಂದ ಖರ್ಚು ಮಾಡಿ, ಇಲ್ಲದಿದ್ದರೆ ನೀವು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು. ನಿಮ್ಮ ಇಮೇಜ್ ಅನ್ನು ನೋಡಿಕೊಳ್ಳಿ. ಜನರೊಂದಿಗೆ ಸಂಯಮದಿಂದ ವರ್ತಿಸಿ, ವಿವಾದಗಳಿಂದ ದೂರವಿರಿ. 

ರಾಹು-ಶುಕ್ರ ಸಂಯೋಜನೆಯು ಸಿಂಹ ರಾಶಿಯ ಜನರ ಪ್ರೀತಿಯ ಜೀವನದಲ್ಲಿ ನಕಾರಾತ್ಮಕ ಪರಿಣಾಮವನ್ನು ಉಂಟುಮಾಡುಲಿದೆ. ಸಂಗಾತಿಯೊಂದಿಗೆ ವಿವಾದ ಉಂಟಾಗಬಹುದು. ನಿಮ್ಮ ಸಂಗಾತಿಯೊಂದಿಗೆ ಸಂಯಮದಿಂದ ನಡೆಯುವುದು ಉತ್ತಮ, ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದರಿಂದ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ.

ತುಲಾ ರಾಶಿಯವರಿಗೆ ರಾಹು-ಶುಕ್ರರ ಸಂಯೋಗದಿಂದ ಉಂಟಾಗುವ ಕೋಪ ಯೋಗವು ದಾಂಪತ್ಯ ಜೀವನದಲ್ಲಿ ತೊಂದರೆಯನ್ನು ನೀಡುತ್ತದೆ. ಈ ಸಮಯದಲ್ಲಿ ಜಾಗರೂಕರಾಗಿರಿ. ಸಂಬಂಧವನ್ನು ಗಟ್ಟಿಗೊಳಿಸಲು ಪ್ರೀತಿ ವಿಶ್ವಾಸದಿಂದ ತಾಳ್ಮೆಯಿಂದ ಇರಲು ಪ್ರಯತ್ನಿಸಿ. 

ರಾಹು-ಶುಕ್ರ ಸಂಯೋಗವು ಕುಂಭ ರಾಶಿಯವರಲ್ಲಿ ಕೋಪವನ್ನು ಹೆಚ್ಚಿಸುತ್ತದೆ. ಅವರಿಗೆ ಏಕಾಗ್ರತೆ ಇರಲು ಸಾಧ್ಯವಾಗುವುದಿಲ್ಲ. ಹಲವಾರು ಆಸೆಗಳು ನಿಮ್ಮನ್ನು ವಿಚಲಿತಗೊಳಿಸಬಹುದು. ಸವಾಲುಗಳು ಎದುರಾಗಬಹುದು ಅಥವಾ ಆತ್ಮೀಯರೊಂದಿಗೆ ವಾಗ್ವಾದ ಉಂಟಾಗಬಹುದು. ಆದಷ್ಟು, ಯೋಚಿಸಿ ಕೆಲಸ ಮಾಡಿ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link