ರಾಹು ಕೃಪೆಯಿಂದಲೇ ಬೆಳಗುವುದು ಈ ರಾಶಿಯವರ ಭಾಗ್ಯ!ಇನ್ನು ಇಟ್ಟ ಹೆಜ್ಜೆಯಲ್ಲಿ ಸೋಲಿಲ್ಲ! ಧನಿಕರಾಗುವ ಕಾಲ ದೂರವಿಲ್ಲ
ನಿಮ್ಮನ್ನು ಕಾಡುತ್ತಿದ್ದ ಹಣದ ಸಮಸ್ಯೆಯಿಂದ ಮುಕ್ತಿ ಸಿಗಲಿದೆ.ಸಾಲದ ಹೊರೆಯಿಂದ ಹೊರ ಬರುವಿರಿ. ಬೆನ್ನು ಬಿಡದೆ ಕಾಡುತ್ತಿದ್ದ ಆರೋಗ್ಯ ಸಮಸ್ಯೆಯೂ ನಿವಾರಣೆಯಾಗುವುದು. ನಿಮ್ಮ ಆಯ್ಕೆಯ ಕಂಪನಿಯಲ್ಲಿ ಕೆಲಸ ಮಾಡಲು ನಿಮಗೆ ಅವಕಾಶ ಸಿಗುತ್ತದೆ.
ರಾಹುವಿನ ಕೃಪೆಯಿಂದ ಹಣಕಾಸಿನ ಸ್ಥಿತಿ ಬಲಗೊಳ್ಳುವುದು.ಕೈ ಹಾಕಿದ ಕೆಲಸಗಳೆಲ್ಲಾ ಕೈ ಹಿಡಿಯುವುದು. ಯಾವುದೇ ಕೆಲಸ ಮಾಡುವುದಕ್ಕೂ ಮುಂದೆ ಹಿಂದೆ ಯೋಚಿಸಬೇಕಿಲ್ಲ.ದೈಹಿಕ ಆರೋಗ್ಯ ಉತ್ತಮವಾಗಿರುತ್ತದೆ.
ನೀವು ಮಾಡುವ ಪ್ರತಿ ಕೆಲಸಕ್ಕೂ ಮೇಲಾಧಿಕಾರಿಗಲಿಂಡಾ ಮೆಚ್ಚುಗೆ ವ್ಯಕ್ತವಾಗಲಿದೆ.ಮೀನ ರಾಶಿಯ ವಿದ್ಯಾರ್ಥಿಗಳು ಈಗ ಅನೇಕ ಯಶಸ್ಸನ್ನು ಪಡೆಯುತ್ತಾರೆ.ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗುವುದು.
ಶೀಘ್ರದಲ್ಲೇ ವಿದೇಶಕ್ಕೆ ಹೋಗುವ ಅವಕಾಶ ದೊರೆಯಲಿದೆ.ಈ ವಿದೇಶಿ ಪ್ರಯಾಣಗಳು ಅನುಕೂಲಕರ ಲಾಭವನ್ನು ತರುತ್ತವೆ.ನ್ಯಾಯಾಲಯದ ಪ್ರಕರಣಗಳಲ್ಲಿ ಯಶಸ್ಸು ಸಿಗುವುದು.
ಮನೆ,ವಾಹನ ಖರೀದಿ ಯೋಗವಿರುತ್ತದೆ.ಉದ್ಯಮಿಗಳು ಹೊಸ ದೊಡ್ಡ ಒಪ್ಪಂದಗಳಿಗೆ ಸಹಿ ಹಾಕುವರು. ವ್ಯಾಪಾರದಲ್ಲಿ ಲಾಭ ಹೆಚ್ಚಾಗುತ್ತದೆ. ಆದಾಯದಲ್ಲಿಯೂ ಹಠಾತ್ ಹೆಚ್ಚಳವಾಗುವುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee ಮಾಧ್ಯಮವು ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.