Rahu-Surya Yuti 2024: ಹದಿನೆಂಟು ವರ್ಷಗಳ ಬಳಿಕ ರಾಹುವಿನ ಹಿಡಿತಕ್ಕೆ ಸಿಕ್ಕ ಸೂರ್ಯ, ಈ ಜನರ ಮೇಲೆ ಅಪಾರ ಕನಕವೃಷ್ಟಿ!
ಜೋತಿಷ್ಯ ಶಾಸ್ತ್ರದ ಪ್ರಕಾರ ರಾಹು ಒಂದು ರಾಶಿಯಲ್ಲಿ ಸುಮಾರು 16 ತಿಂಗಳುಗಳ ಕಾಲ ವಾಸವಾಗುತ್ತಾನೆ. ಹೀಗಿರುವಾಗ ಒಂದು ರಾಶಿಗೆ ಪುನಃ ಆತನ ಆಗಮನಕ್ಕೆ ಸುಮಾರು 18 ತಿಂಗಳುಗಳ ಕಾಲ ಬೇಕಾಗುತ್ತದೆ. ಹೀಗಾಗಿ ರಾಹು ಹಾಗೂ ಶುಕ್ರರ ಯುತಿ ಸುಮಾರು 18 ವರ್ಷಗಳ ಬಳಿಕ ನೆರವೇರುತ್ತಿದೆ. ಎರಡು ಗ್ರಹಗಳು ಪರಸ್ಪರ ಶತ್ರು ಭಾವದ ಸಂಬಂಧ ಹೊಂದಿವೆ.
ವೃಷಭ ರಾಶಿ: ನಿಮ್ಮ ಜಾತಕದ ಏಕಾದಶ ಭಾವದಲ್ಲಿ ಈ ಮೈತ್ರಿ ನೆರವೇರುತ್ತಿದೆ. ಈ ಅವಧಿಯಲ್ಲಿ ಆಸೆ-ಆಕಾಂಕ್ಷೆಗಳು ಪ್ರಬಲವಾಗಲಿದ್ದು, ಅವುಗಳ ಪೂರ್ತಿಗಾಗಿ ನೀವು ಸಾಕಷ್ಟು ಪರಿಶ್ರಮ ಪಡುವಿರಿ. ವೈಯಕ್ತಿಕ ಹಾಗೂ ವೃತ್ತಿಪರ ಜೀವನದಲ್ಲಿ ನಿಮಗೆ ಸಾಕಷ್ಟು ಯಶಸ್ಸು ಸಿಗಲಿದೆ. ನಿಮ್ಮ ವಿಚಾರಗಳು ಬೇರೊಬ್ಬರ ಜೀವನದಲ್ಲಿ ಉತ್ತಮ ಎಂದು ಸಾಬೀತಾಗಲಿವೆ. ಈ ಅವಧಿಯಲ್ಲಿ ನಿಮಗೆ ಸಾಕಷ್ಟು ಪ್ರಾಜೆಕ್ಟ್ ಗಳು ಸಿಗಲಿವೆ. ಕಾರ್ಯಸ್ಥಳದಲ್ಲಿ ವರಿಷ್ಠರಿಂದ ನಿಮ್ಮ ಕೆಲಸಕ್ಕೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಲಿದ್ದು, ಮುಂಬರುವ ದಿನಗಳಲ್ಲಿ ಬಡ್ತಿ, ಇಂಕ್ರಿಮೆಂಟ್ ಅಥವಾ ವೇತನ ವೃದ್ಧಿಯ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿವೆ. ಇದಲ್ಲದೆ ಮಕ್ಕಳ ಕಡೆಯಿಂದ ನಿಮಗೆ ಹಲವು ಸಿಹಿ ಸುದ್ದಿಗಳು ಸಿಗಲಿವೆ.
ಸಿಂಹ ರಾಶಿ: ನಿಮ್ಮ ಜಾತಕದ ಶಷ್ಟಮ ಭಾವದಲ್ಲಿ ಈ ಮೈತ್ರಿ ನೆರವೇರುತ್ತಿದೆ ಮತ್ತು ಈ ಮೈತ್ರಿ ನಿಮ್ಮ ಪಾಲಿಗೆ ಒಂದು ವರದಾನ ಎಂದರೆ ತಪ್ಪಾಗಲಾರದು, ಈ ಅವಧಿಯಲ್ಲಿ ನೀವು ಸಾಕಷ್ಟು ದೊಡ್ಡ ನಿರ್ಣಯಗಳನ್ನು ಸುಲಭವಾಗಿ ತೆಗೆದುಕೊಳ್ಳುವಿರಿ. ನಿಮ್ಮ ಬುದ್ಧಿಯ ಸಹಾಯದಿಂದ ಹಲವು ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಸಾಧಿಸುವಿರಿ. ಶಕ್ತಿಯ ಮಟ್ಟ ಆತ್ಮವಿಶ್ವಾಸದ ಶಿಖರದ ಕಾಣಿಸಲಿದೆ. ಬಿಸ್ನೆಸ್ ನಲ್ಲಿ ಅಪಾರ ಯಶಸ್ಸಿನ ಜೊತೆಗೆ ಧನ ಸಂಪಾದಿಸುವಲ್ಲಿ ಯಶಸ್ವಿಯಾಗುವಿರಿ. ಪಾಟ್ನರ್ಶಿಪ್ ವ್ಯವಹಾರದಲ್ಲಿ ನಿಮಗೆ ಸಾಕಷ್ಟು ಹಣ ಹರಿದುಬರಲಿದೆ. ದೀರ್ಘಾವಧಿಯಿಂದ ಸಂಬಂಧಗಳಲ್ಲಿ ಕಾಣಿಸಿಕೊಂಡ ಬಿರುಕುಗಳು ಇನ್ಮುಂದೆ ಇರಲ್ಲ. ಕೌಟುಂಬಿಕ ಸಮಸ್ಯೆಗಳಿಂದ ನಿಮಗೆ ಮುಕ್ತಿ ಸಿಗಲಿದೆ. ಹೊಸದಾಗಿ ನೀವು ನಿಮ್ಮ ಸಂಬಂಧಗಳನ್ನು ಪುನರಾರಂಭ ಮಾಡುವಿರಿ.
ಮಕರ ರಾಶಿ: ನಿಮ್ಮ ಜಾತಕದ ತೃತೀಯ ಭಾವದಲ್ಲಿ ರಾಹು-ಸೂರ್ಯರ ಮೈತ್ರಿ ನೆರವೇರುತ್ತಿದೆ. ಇದು ಇಮೋಷ್ಣಲ್ ಹೀಲಿಂಗ್ ರೀತಿಯಲ್ಲಿ ನಿಮ್ಮ ಮೇಲೆ ಪ್ರಭಾವ ಬೀರಲಿದೆ. ಜೀವನದಲ್ಲಿ ಹೊಸ ಆರಂಭವನ್ನು ನೀವು ಮಾಡುವ ಸಾಧ್ಯತೆ ಇದೆ. ಭೂತಕಾಲದಲ್ಲಿ ನೀವು ಮಾಡಿದ ಪರಿಶ್ರಮದ ಫಲ ಇದೀಗ ನಿಮಗೆ ಸಿಗಲು ಆರಂಭಿಸಲಿದೆ. ಹಲವು ರೀತಿಯ ಖುಷಿಗಳು ನಿಮ್ಮ ಜೀವನದಲ್ಲಿ ಕದ ತಟ್ಟಲಿವೆ. ಇದರ ಜೊತೆಗೆ ಆದಾಯದ ಹೊಸ ಮೂಲಗಳು ತೆರೆದುಕೊಳ್ಳಲಿವೆ. ವ್ಯಾಪಾರದಲ್ಲಿ ಸ್ವಲ್ಪ ರಿಸ್ಕ್ ತೆಗೆದುಕೊಳ್ಳಬಹುದು ಮತ್ತು ಅದರಿಂದ ನಿಮಗೆ ಧನಲಾಭದ ಯೋಗ ರಚನೆಯಾಗುತ್ತಿದೆ. ಕಾರ್ಯಕ್ಷೇತ್ರದ ಕುರಿತು ಹೇಳುವುದಾದರೆ, ಹೊಸ ನೌಕರಿಯ ಅವಕಾಶ ಕೂಡ ನಿಮಗೆ ಒದಗಿಬರಲಿದೆ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)