Rahu-Surya Yuti: ರಾಹು-ಸೂರ್ಯರ ಯುತಿಯಿಂದ ಹೆಚ್ಚಾಗಲಿದೆ ಈ ರಾಶಿಯವರ ಬ್ಯಾಂಕ್ ಬ್ಯಾಲೆನ್ಸ್

Mon, 05 Feb 2024-6:44 am,

ಸೂರ್ಯ ಗೋಚರ:  ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಜ ಸೂರ್ಯನು ಮಾರ್ಚ್ 14, 2024 ರಂದು, ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ. 

ರಾಹು ಗ್ರಹ:  ವೈದಿಕ ಜ್ಯೋತಿಷ್ಯದ ಪ್ರಕಾರ, 18 ತಿಂಗಳುಗಳ ಕಾಲ ಒಂದೇ ರಾಶಿಯಲ್ಲಿ ಸಂಚರಿಸುವ ಪಾಪ ಗ್ರಹ ರಾಹು ಈಗಾಗಲೇ ಮೀನ ರಾಶಿಯಲ್ಲಿ ಇದ್ದಾನೆ. 

ಸೂರ್ಯ ರಾಹು ಯುತಿ:  ಸೂರ್ಯನ ಜೊತೆಗೆ ರಾಹುವಿನ ಸಂಯೋಗವು ಹಲವು ಶುಭ ಯೋಗಗಳನ್ನು ಸೃಷ್ಟಿಸುತ್ತಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬರೋಬ್ಬರಿ 18 ವರ್ಷಗಳ ನಂತರ ಮೀನ ರಾಶಿಯಲ್ಲಿ ಸೂರ್ಯ ರಾಹು ಸಂಯೋಗವು ರೂಪುಗೊಳ್ಳಲಿದೆ. 

ಸೂರ್ಯ-ರಾಹು ಯುತಿ ಪ್ರಭಾವ:  ಸೂರ್ಯ-ರಾಹು ಯುತಿಯು ಎಲ್ಲಾ 12 ರಾಶಿಯವರ ಜೀವನದ ಮೇಲೆ ಮಹತ್ವದ ಪ್ರಭಾವವನ್ನು ಬೀರಲಿದೆ. ಆದರೂ, ಈ ಸಮಯವನ್ನು ಕೆಲವು ರಾಶಿಯ ಜನರು ಬಾರೀ ಧನಲಾಭವನ್ನು ಗಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 

ವೃಷಭ ರಾಶಿ:  ಸೂರ್ಯ-ರಾಹು ಯುತಿ ವೃಷಭ ರಾಶಿ ಜನರಿಗೆ ವಿಶೇಷ ಪ್ರಯೋಜನವನ್ನು ನೀಡಲಿದೆ. ಈ ಸಮಯದಲ್ಲಿ ನಿಮ್ಮ ಇಷ್ಟಾರ್ಥ ಸಿದ್ಧಿಯಾಗಲಿದ್ದು, ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಪ್ರಗತಿ ಕಾಣುವಿರಿ. ಉದ್ಯೋಗದಲ್ಲಿ ಬಡ್ತಿ ಸಾಧ್ಯತೆ ಇದ್ದು, ಮಕ್ಕಳಿಂದಲೂ ಶುಭ ಸುದ್ದಿಗಳನ್ನು ನಿರೀಕ್ಷಿಸಬಹುದು. 

ಸಿಂಹ ರಾಶಿ:  ಸೂರ್ಯ-ರಾಹು ಸಂಯೋಗವು ಸಿಂಹ ರಾಶಿಯವರಿಗೆ ನಿಮ್ಮ ಬುದ್ಧಿವಂತಿಕೆಯ ಆಧಾರದ ಮೇಲೆ ನೀವು ಪ್ರಗತಿಯನ್ನು ಸಾಧಿಸಲು ಸಹಕಾರಿಯಾಗಿದೆ. ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದ್ದು ವ್ಯವಹಾರದಲ್ಲಿ ಬಂಪರ್ ಲಾಭವನ್ನು ಗಳಿಸುವಿರಿ. ಪ್ರೀತಿಯ ಸಂಬಂಧ ಧನಾತ್ಮಕವಾಗಿರಲಿದೆ. 

ಮಕರ ರಾಶಿ:  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯ-ರಾಹು ಯುತಿಯು ಮಕರ ರಾಶಿಯ ಜನರಿಗೆ ಮಾನಸಿಕ ನೆಮ್ಮದಿಯನ್ನು ನೀಡುತ್ತದೆ. ಈ ಸಮಯದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಫಲ ದೊರೆಯಲಿದ್ದು, ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ. ವ್ಯವಹಾರದಲ್ಲಿ ದಿಢೀರ್ ಲಾಭವು ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link