ಒಂದೂವರೆ ವರ್ಷ ಈ ರಾಶಿಯವರಿಗೆ ರಾಹುವೇ ಶ್ರೀ ರಕ್ಷೆ ! ಧನಿಕರಾಗುವ ಯೋಗ

Mon, 08 May 2023-4:51 pm,

ಅಕ್ಟೋಬರ್ 30 ರಂದು  ಮಧ್ಯಾಹ್ನ 12.30 ಕ್ಕೆ ರಾಹು ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ.  ರಾಹುವಿನ ಈ ಸಂಚಾರದಿಂದ 3 ರಾಶಿಯವರ ಅದೃಷ್ಟದ  ಬಾಗಿಲು ತೆರೆಯಲಿದೆ.   

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೇಷ ರಾಶಿಯಿಂದ ಮೀನ ರಾಶಿಗೆ ರಾಹುವಿನ ಪ್ರವೇಶವು ಮೇಷ ರಾಶಿಯವರಿಗೆ ಮಂಗಳಕರ ಮತ್ತು ಫಲಪ್ರದವಾಗಲಿದೆ. ಈ ರಾಶಿಯವರು ವಿಶೇಷವಾಗಿ ವಿತ್ತೀಯ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಯಿದೆ. ಈ ಸಮಯದಲ್ಲಿ ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ಆದಾಯ ಹೆಚ್ಚಳದಿಂದ ಉದ್ಯೋಗದಲ್ಲಿ ಪ್ರಗತಿ ಕಾಣಬಹುದು. ಸಮಾಜದಲ್ಲಿ ಗೌರವ ಸಿಗಲಿದೆ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ರಾಹುವಿನ ರಾಶಿ ಬದಲಾವಣೆ ಕರ್ಕಾಟಕ ರಾಶಿಯವರಿಗೆ ಪ್ರಯೋಜನಕಾರಿಯಾಗಿರಲಿದೆ. ಈ ಸಮಯದಲ್ಲಿ ವ್ಯಾಪಾರವು ಲಾಭದಾಯಕವಾಗಿರಲಿದೆ. ಅಷ್ಟೇ ಅಲ್ಲ ಹೊಸ ಮನೆ, ವಾಹನ ಖರೀದಿಸುವ ಯೋಗ ಕೂಡಿ ಬರಲಿದೆ. ತಾಳ್ಮೆ ಮತ್ತು ಸಂಯಮದಿಂದ ಇರುವ ಅವಶ್ಯಕತೆಯಿದೆ.   

ಮೀನ ರಾಶಿಯವರಿಗೆ ವಿಶೇಷ ಲಾಭ ದೊರೆಯಲಿದೆ. ಆರ್ಥಿಕ ಪ್ರಗತಿಯನ್ನು ಪಡೆಯುವ ಎಲ್ಲಾ ಸಾಧ್ಯತೆಗಳಿವೆ. ಸಾಲ ನೀಡಿರುವ ಹಣ ಮತ್ತೆ ನಿಮ್ಮ ಕೈ ಸೇರುವುದು. ವೃತ್ತಿಯಲ್ಲಿ ಪ್ರಗತಿಯ ಸಾಧ್ಯತೆಗಳಿವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಯವರಿಗೆ ಒಳ್ಳೆಯ ಸುದ್ದಿ ಸಿಗುತ್ತದೆ. ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link