ಮುಂದಿನ ಒಂದೂವರೆ ವರ್ಷ ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ ! ಇಟ್ಟ ಹೆಜ್ಜೆಯಲ್ಲಿ ಸೋಲೆಂಬುದೇ ಇಲ್ಲ

Mon, 03 Jul 2023-10:04 am,

ಈ ವರ್ಷ ಇಲ್ಲಿಯವರೆಗೆ, ಅನೇಕ ದೊಡ್ಡ ಗ್ರಹಗಳು ತಮ್ಮ ರಾಶಿಯನ್ನು   ಬದಲಾಯಿಸಿವೆ. ಇದೀಗ ಅಕ್ಟೋಬರ್ 30 ರಂದು ರಾಹು  ಮೀನ ರಾಶಿಯನ್ನು ಪ್ರವೇಶಿಸಲಿದೆ. ಅಕ್ಟೋಬರ್ 30 ರಂದು ಮಧ್ಯಾಹ್ನ 12.30 ಕ್ಕೆ ರಾಹು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ರಾಹುವಿನ ಈ ರಾಶಿ ಬದಲಾವಣೆಯೊಂದಿಗೆ  4 ರಾಶಿಯವರು ಭಾರೀ ಶ್ರೀಮಂತರಾಗುತ್ತಾರೆ. ಇವರ ಜೀವನದ ಅದೃಷ್ಟದ  ಬಾಗಿಲು ಈ ದಿನದಿಂದ ತೆರೆಯಲಿದೆ.    

ಮೀನ ರಾಶಿಯಲ್ಲಿ ರಾಹು ಸಂಚಾರದಿಂದ ಮೇಷ ರಾಶಿಗೆ ಲಾಭವಾಗಲಿದೆ. ಈ ಸಂಚಾರದಿಂದ ಮೇಷ ರಾಶಿಯವರಿಗೆ ಹಣಕಾಸಿನ ಲಾಭವಾಗುವುದು.  ಈ ಸಮಯದಲ್ಲಿ, ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಗುವುದು.  ಉದ್ಯೋಗದಲ್ಲಿ ಪ್ರಗತಿಯ ಜೊತೆಗೆ ಆದಾಯವೂ ಹೆಚ್ಚಾಗುತ್ತದೆ. ಇದರೊಂದಿಗೆ ಸಮಾಜದಲ್ಲಿ ಗೌರವವೂ ಹೆಚ್ಚುತ್ತದೆ. 

ಮೀನ ರಾಶಿಯಲ್ಲಿ ರಾಹುವಿನ ಸಂಚಾರವು ವೃಷಭ ರಾಶಿಯವರಿಗೆ ಆರ್ಥಿಕ ಲಾಭವನ್ನು ತರುತ್ತದೆ. ರಾಹು ಸಂಕ್ರಮಣದಿಂದ ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ದೀರ್ಘ ಪ್ರಯಾಣಕ್ಕೆ ಹೋಗುವ ಅವಕಾಶ ಎದುರಾಗಬಹುದು. ಈ ಪ್ರಯಾಣ ಫಲಪ್ರದವಾಗಿರುತ್ತದೆ. ವಿದೇಶ ಪ್ರವಾಸದ ಸಾಧ್ಯತೆಗಳೂ ಕಂಡುಬರುತ್ತಿವೆ. ವೃತ್ತಿ ಜೀವನದಲ್ಲಿ ಉತ್ತುಂಗಕ್ಕೆ ಏರುವ ಸಮಯವಿದು. 

ಮೀನ ರಾಶಿಯಲ್ಲಿ ರಾಹುವಿನ ಸಂಚಾರವು ಕರ್ಕಾಟಕ ರಾಶಿಯವರ ಅದೃಷ್ಟ ಬೆಳಗಲಿದೆ. ವೃತ್ತಿಜೀವನದಲ್ಲಿ ಹೊಸ ಎತ್ತರಕ್ಕೆ  ಏರುವ ಸಾಧ್ಯತೆ ಇದೆ.  ಆದಾಯದಲ್ಲಿ ಹೆಚ್ಚಳವಾಗಲಿದೆ. ಉದ್ಯೋಗವನ್ನು ಬದಲಾಯಿಸುವುದಾದರೂ ಇದು ಸರಿಯಾದ ಸಮಯ. ಅದರೊಂದಿಗೆ  ಜವಾಬ್ದಾರಿಯೂ ಹೆಚ್ಚಲಿದೆ.

ಮೀನ ರಾಶಿಯಲ್ಲಿ ರಾಹುವಿನ ಸಂಚಾರವಾಗುತ್ತಿದ್ದಂತೆಯೇ ತುಲಾ ರಾಶಿಯವರ ಜೀವನದಲ್ಲಿ ಹಣದ ಹೊಳೆ ಹರಿಯಲಿದೆ.  ಬಹುಕಾಲದಿಂದ  ಅಪೂರ್ಣವಾಗಿ ನಿಂತಿದ್ದ ಕೆಲಸಗಳು ಈಗ ಪೂರ್ಣವಾಗಲಿದೆ. ಎಲ್ಲಾ ಕಡೆಯಿಂದ ಹಣ ಹರಿದು ಬರಲಿದೆ. ಕಚೇರಿ ಕೆಲಸ ಕಾರ್ಯಗಳಲ್ಲಿ ಉತ್ತಮ ಯಶಸ್ಸು ಸಿಗಲಿದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ.

ಅಕ್ಟೋಬರ್ 30 ರಂದು ರಾಹು ಮೇಷ ರಾಶಿಯಿಂದ ಮೀನ ರಾಶಿಗೆ ಸಾಗಲಿದ್ದಾನೆ. ಮೀನ ರಾಶಿಯವರಿಗೆ ರಾಹುವಿನ ಆಗಮನದಿಂದ ಹೆಚ್ಚಿನ ಲಾಭವಾಗಲಿದೆ. ಈ ಸಮಯದಲ್ಲಿ ಆದಾಯವೂ ಹೆಚ್ಚಾಗುತ್ತದೆ. ಸಾಲವಾಗಿ ಕೊಟ್ಟ ಹಣ ಮರಳಿ ಕೈ ಸೇರಲಿದೆ. ಉದ್ಯೋಗದಲ್ಲಿ ಉತ್ತಮ ಪ್ರಗತಿ ಕಂಡುಬರಲಿದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link