ಈ ರಾಶಿಯವರ ಮಲಗಿರುವ ಅದೃಷ್ಟವನ್ನು ಬಡಿದೆಬ್ಬಿಸುತ್ತಾನೆ ರಾಹು ! ಸೋಲೇ ಇಲ್ಲದೆ ಮುನ್ನಡೆಸುತ್ತಾನೆ

Thu, 27 Apr 2023-5:18 pm,

ರಾಹು ಜನರಿಗೆ ಅಶುಭವನ್ನು ಮಾತ್ರ ಮಾಡುತ್ತಾನೆ ಎನ್ನುವುದು ಸುಳ್ಳು. ಇತರ ಗ್ರಹಗಳಂತೆ, ರಾಹುವಿನ ರಾಶಿಯ ಬದಲಾವಣೆ ಕೂಡಾ ಎಲ್ಲಾ ರಾಶಿಯವರ ಮೇಲೆ ಶುಭ ಮತ್ತು ಅಶುಭ ಪರಿಣಾಮಗಳನ್ನು ಬೀರುತ್ತದೆ. ರಾಹು ಸುಮಾರು ಒಂದೂವರೆ ವರ್ಷಗಳ ಕಾಲ ಒಂದು ರಾಶಿಯಲ್ಲಿ ಇರುತ್ತಾನೆ. ಪಂಚಾಂಗದ ಪ್ರಕಾರ, ಅಕ್ಟೋಬರ್ 30, 2023 ರಂದು ಮಧ್ಯಾಹ್ನ 1.33 ಕ್ಕೆ ರಾಹುವು ಮೇಷ ರಾಶಿಯನ್ನು ತೊರೆದು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಮೀನ ರಾಶಿಯಲ್ಲಿ ರಾಹುವಿನ ಸಂಚಾರವು ಕೆಲವು ರಾಶಿಯವರ ಅದೃಷ್ಟವನ್ನು ಬಡಿದೆಬ್ಬಿಸುತ್ತದೆ. 

ರಾಹು ಮೇಷ ರಾಶಿಯಿಂದ ಹೊರಬಂದು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಕಾರಣದಿಂದ ಮೇಷ ರಾಶಿಯವರ ಜೀವನದಲ್ಲಿ ಒಳ್ಳೆಯ ಸಮಯ ಪ್ರಾರಂಭವಾಗಲಿದೆ. ಈ ರಾಶಿಯ ಜನರು ರಾಹು ಸಂಚಾರದಿಂದ ಹಣಕಾಸಿನ ಲಾಭವನ್ನು ಪಡೆಯುತ್ತಾರೆ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ವ್ಯಾಪಾರ ಮತ್ತು ವೃತ್ತಿಯಲ್ಲಿ ವಿಶೇಷ ಲಾಭಗಳಿರುತ್ತವೆ.

ಮೀನ ರಾಶಿಯಲ್ಲಿ ರಾಹುವಿನ ಸಂಚಾರವು ಕರ್ಕಾಟಕ ರಾಶಿಯವರಿಗೆ ಅದೃಷ್ಟವನ್ನು ತರುತ್ತದೆ. ಆದರೂ ಇವರು ತಾಳ್ಮೆಯಿಂದ ಕೆಲಸ ಮಾಡಬೇಕಾಗುತ್ತದೆ. ರಾಹು ಸಂಕ್ರಮಣದ ಪ್ರಭಾವದಿಂದ ಅವರು ತಮ್ಮ ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ವ್ಯಾಪಾರದಲ್ಲಿ ಅಭಿವೃದ್ದಿ ಕಂಡು ಬರಲಿದೆ. ಮನೆ, ವಾಹನ ಖರೀದಿಗೆ ಅವಕಾಶವಿದೆ. 

ರಾಹುವಿನ ರಾಶಿಯ ಬದಲಾವಣೆಯಿಂದಾಗಿ, ಹಣದ ಹರಿವು ಹೆಚ್ಚಾಗಲಿದೆ. ಹೂಡಿಕೆ ಮಾಡಲು ಇದು ಉತ್ತಮ ಸಮಯ. ಸಾಲ ಕೊಟ್ಟ ಹಣವನ್ನು ಹಿಂತಿರುಗಿ ನಿಮ್ಮ ಕೈ ಸೇರಬಹುದು. ವೃತ್ತಿಜೀವನದಲ್ಲಿ ಯಶಸ್ಸು ಸಿಗಲಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link