ಹೊಸ ವರ್ಷದಲ್ಲಿ ಈ ರಾಶಿಯವರನ್ನು ಅತಿಯಾಗಿ ಕಾಡುತ್ತಾನೆ ರಾಹು.! ಅತ್ಯಂತ ಎಚ್ಚರದಿಂದ ಇರಬೇಕು
ಮೇಷ ರಾಶಿ : ರಾಹುವು ಮೇಷ ರಾಶಿಯವರ ಬುದ್ದಿಯನ್ನು ಸ್ವಲ್ಪ ಮಟ್ಟಿಗೆ ಗೊಂದಲಗೊಳಿಸುತ್ತಾನೆ. ಕೆಲಸದಲ್ಲಿ ತೆಗೆದುಕೊಳ್ಳುವ ಆತುರದ ನಿರ್ಧಾರದಿಂದ ಸಮಸ್ಯೆಗಳು ಉಂಟಾಗಬಹುದು. ಜನರ ಪಿತೂರಿಗೆ ಬಲಿಯಾಗಬೇಕಾಗಬಹುದು. ಕೆಲಸದ ಸ್ಥಳದಲ್ಲಿ ಜಗಳಗಳು ಮತ್ತು ಚರ್ಚೆಗಳು ನಡೆಯಬಹುದು.
ವೃಷಭ ರಾಶಿ : ಈ ಅವಧಿಯಲ್ಲಿ ರಾಹು ದೈಹಿಕ ನೋವನ್ನು ನೀಡಬಹುದು. ನಿಷ್ಪ್ರಯೋಜಕ ಕೆಲಸಗಳಿಗೆ ಹಣ ವ್ಯಯವಾಗಲಿದೆ. ಈ ಸಮಯದಲ್ಲಿ ಮಾನಸಿಕವಾಗಿ ತೊಂದರೆಗೊಳಗಾಗಬಹುದು. ಶಾರ್ಟ್‌ಕಟ್ ರೀತಿಯಲ್ಲಿ ಯಶಸ್ಸನ್ನು ಸಾಧಿಸಲು ಬಯಸಿದರೆ, ತೊಂದರೆಗೊಳಗಾಗಬಹುದು.
ತುಲಾ ರಾಶಿ : ಉದ್ಯೋಗಸ್ಥರು ಈ ಅವಧಿಯಲ್ಲಿ ಜಾಗರೂಕರಾಗಿರಬೇಕು. ಕಚೇರಿಯಲ್ಲಿ ಜನರೊಂದಿಗೆ ವಾಗ್ವಾದ ಉಂಟಾಗಬಹುದು. ಪಾಲುದಾರರೊಂದಿಗೆ ವ್ಯಾಪಾರ ಮಾಡುವವರೂ ಜಾಗರೂಕರಾಗಿರಬೇಕು. ಯೋಚಿಸದೆ ನಿರ್ಧಾರಗಳನ್ನು ತೆಗೆದುಕೊಂಡರೆ ನಷ್ಟವನ್ನು ಉಂಟುಮಾಡುತ್ತದೆ. ಜನರೊಂದಿಗೆ ವೈಮನಸ್ಸು ಉಂಟಾಗಬಹುದು. .
ಮಕರ ರಾಶಿ : ವೈವಾಹಿಕ ಜೀವನದಲ್ಲಿ ತೊಡಕುಗಳು ಹೆಚ್ಚಾಗಲಿವೆ. ಹೊಂದಾಣಿಕೆ ಮಾಡಿಕೊಳ್ಳಲು ಸಾಕಷ್ಟು ಶ್ರಮ ಪಡಬೇಕಾಗುತ್ತದೆ. ಶಾಂತಚಿತ್ತದಿಂದ ಇರಿ. ವಿಷಯಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಮನೆಯಲ್ಲಿ ಅಹಿತಕರ ವಾತಾವರಣ ನೆಲೆಯಾಗಬಹುದು. ಜೀವನದಲ್ಲಿ ಏರಿಳಿತಗಳಿರಬಹುದು.
ಮೀನ ರಾಶಿ : ಈ ಅವಧಿ ಎರಡು ಅಲಗಿನ ಕತ್ತಿಯಂತೆ ಇರುತ್ತದೆ. ಅಪಾರ ಹಣ ಸಿಗುತ್ತದೆ. ಆದರೆ ಹಣಕ್ಕೆ ಹತ್ತಿರವಾಗುತ್ತಿದ್ದಂತೆ ಕುಟುಂಬದಿಂದ ದೂರವಾಗಬೆಕಾಗುತ್ತದೆ. ಸೇವಿಸುವ ಆಹಾರ ಪಾನೀಯದ ಬಗ್ಗೆ ಗಮನ ಹರಿಸಿ. ಇಲ್ಲದಿದ್ದರೆ ಆರೋಗ್ಯ ಹದಗೆಡಬಹುದು. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ.