Rahul Dravid: ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ರಾಹುಲ್ ದ್ರಾವಿಡ್ ಅವರ 5 ದೊಡ್ಡ ವಿವಾದಗಳು

Thu, 11 Jan 2024-1:42 pm,

ಟೀಂ ಇಂಡಿಯಾದ ಮಾಜಿ ಆಟಗಾರ ಮತ್ತು ಪ್ರಸ್ತುತ ಮುಖ್ಯ ಕೋಚ್ ಆಗಿರುವ ರಾಹು ದ್ರಾವಿಡ್ ಇಂದು ತಮ್ಮ 51ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.  11 ಜನವರಿ 1973 ರಂದು ಜನಿಸಿದ ರಾಹುಲ್ ದ್ರಾವಿಡ್ ಸ್ವಭಾವತಃ ಸೌಮ್ಯ ಸ್ವಭಾವದವರು. ಆದರೂ ಅವರ ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಕೆಲವು ವಿವಾದಗಳನ್ನು ಹೊಂದಿದ್ದಾರೆ. ಅಂತಹ 5 ವಿವಾದಗಳೆಂದರೆ... 

ಸೌರವ್ ಗಂಗೂಲಿ ಜೊತೆಗಿನ ವಿವಾದ:  ಗ್ರೆಗ್ ಚಾಪೆಲ್ ಭಾರತ ಕ್ರಿಕೆಟ್ ತಂಡದ ಕೋಚ್ ಆಗಿದ್ದಾಗ, ಸೌರವ್ ಗಂಗೂಲಿ ಜೊತೆಗಿನ ಭಿನ್ನಾಭಿಪ್ರಾಯಗಳು ಮುನ್ನೆಲೆಗೆ ಬಂದವು. ಗ್ರೆಗ್ ಚಾಪೆಲ್ ತನ್ನ ಕೋಚಿಂಗ್ ಶಕ್ತಿಯನ್ನು ಬಳಸಿಕೊಂಡು ಸೌರವ್ ಗಂಗೂಲಿಯನ್ನು ತಂಡದಿಂದ ಹೊರಹಾಕಿದರು. ವರದಿಗಳ ಪ್ರಕಾರ, ಸೌರವ್ ಗಂಗೂಲಿಯೊಂದಿಗೆ ಗ್ರೆಗ್ ಚಾಪೆಲ್ ಅವರ ವಿವಾದದ ಸಂದರ್ಭದಲ್ಲಿ ರಾಹುಲ್ ದ್ರಾವಿಡ್ ಮೌನವಾಗಿದ್ದರಲ್ಲದೆ  ಚಾಪೆಲ್ ಅವರ ನಿರ್ಧಾರಗಳನ್ನು ಪ್ರಶ್ನಿಸುತ್ತಿರಲಿಲ್ಲ. ಈ ಕುರಿತಂತೆ ಹಲವು ಸಂದರ್ಭಗಳಲ್ಲಿ ಮಾತನಾಡಿರುವ ಸೌರವ್ ಗಂಗೂಲಿ, ಗ್ರೆಗ್ ಚಾಪೆಲ್ ಅವರ ನಿರ್ಧಾರಗಳ ವಿರುದ್ಧ ಮಾತನಾಡದೆ ರಾಹುಲ್ ದ್ರಾವಿಡ್ ತಪ್ಪು ಮಾಡಿದ್ದಾರೆ ಎಂದು ಹೇಳಿದ್ದಾರೆ.  

ಶೋಯೆಬ್ ಅಖ್ತರ್ ಜೊತೆಗಿನ ಜಗಳ:  ರಾಹುಲ್ ದ್ರಾವಿಡ್ ತನ್ನ 16 ವರ್ಷಗಳ ಸುದೀರ್ಘ ಕ್ರಿಕೆಟ್ ವೃತ್ತಿಜೀವನದಲ್ಲಿ ಎಂದಿಗೂ ತಾಳ್ಮೆ ಕಳೆದುಕೊಂಡದ್ದನ್ನು ನೋಡಿಯೇ ಇಲ್ಲ ಎಂತಲೇ ಹೇಳಲಾಗುತ್ತದೆ. ಆದರೆ 2004 ರಲ್ಲಿ ಪಾಕಿಸ್ತಾನ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಅವರು ತಮ್ಮ ತಾಳ್ಮೆ ಕಳೆದುಕೊಂಡರು. ವಾಸ್ತವವಾಗಿ, ರಾಹುಲ್ ದ್ರಾವಿಡ್ ರನ್ ತೆಗೆದುಕೊಳ್ಳುತ್ತಿದ್ದಾಗ, ಅವರು ಶೋಯೆಬ್ ಅಖ್ತರ್‌ಗೆ ಡಿಕ್ಕಿ ಹೊಡೆದರು. ಘರ್ಷಣೆಯ ನಂತರ, ಅಖ್ತರ್ ರಾಹುಲ್ ದ್ರಾವಿಡ್ ಅವರಿಗೆ ಏನೋ ಹೇಳಲು ಪ್ರಾರಂಭಿಸಿದರು. ಇಂತಹ ಪರಿಸ್ಥಿತಿಯಲ್ಲಿ ತಾಳ್ಮೆ ಕಳೆದುಕೊಂಡ ದ್ರಾವಿಡ್ ಶೋಯೆಬ್ ಅಖ್ತರ್ ಜೊತೆಗೆ ಮೈದಾನದಲ್ಲೇ ವಾಗ್ವಾದ ನಡೆಸಿದರು. ಈ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್‌ಗಳಿಂದ ಸೋಲು ಅನುಭವಿಸಬೇಕಾಯಿತು.

ದ್ವಿಶತಕದಿಂದ ವಂಚಿತರಾದ ಸಚಿನ್:  2004ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಮುಲ್ತಾನ್ ಟೆಸ್ಟ್ ಪಂದ್ಯದಲ್ಲಿ ವೀರೇಂದ್ರ ಸೆಹ್ವಾಗ್ ತ್ರಿಶತಕ ಸಿಡಿಸಿದ ಬಳಿಕವೇ ನಾಯಕ ರಾಹುಲ್ ದ್ರಾವಿಡ್ ಇನ್ನಿಂಗ್ಸ್ ಡಿಕ್ಲೇರ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದರು. ಆಗ ಸಚಿನ್ ತೆಂಡೂಲ್ಕರ್ 194 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು ಮತ್ತು ದ್ವಿಶತಕ ಗಳಿಸಲು ಕೇವಲ 6 ರನ್‌ಗಳ ಅಗತ್ಯವಿತ್ತು. ವೀರೇಂದ್ರ ಸೆಹ್ವಾಗ್ ಅವರ ತ್ರಿಶತಕದ ನಂತರ ರಾಹುಲ್ ದ್ರಾವಿಡ್ ಭಾರತದ ಮೊದಲ ಇನ್ನಿಂಗ್ಸ್ ಅನ್ನು 5 ವಿಕೆಟ್‌ಗೆ 675 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡರು. ಇದನ್ನು ನೋಡಿದ ಸಚಿನ್ ತೆಂಡೂಲ್ಕರ್ ಕೂಡ ಅಚ್ಚರಿಗೊಂಡಿದ್ದರು. ಆದರೆ ಈ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಹಾಗೂ 52 ರನ್‌ಗಳ ಜಯ ಸಾಧಿಸಿತು. ಆದರೆ, ಈ ಪಂದ್ಯದ ಬಳಿಕ ಸಚಿನ್ ದ್ವಿಶತಕದಿಂದ ವಂಚಿತರಾಗಲು ರಾಹುಲ್ ದ್ರಾವಿಡ್ ಅವರೇ ಕಾರಣ ಎಂದು ಸಾಕಷ್ಟು ಟೀಕೆಗಳು ವ್ಯಕ್ತವಾಗಿತ್ತು. 

2004 ರಲ್ಲಿ ಜಿಂಬಾಬ್ವೆ ವಿರುದ್ಧ ಬಾಲ್ ಟ್ಯಾಂಪರಿಂಗ್:  ಕ್ರಿಕೆಟ್ ನಲ್ಲಿ ಯಾವುದೇ ರೀತಿಯ ಮೋಸವನ್ನು ತಡೆಯಲು ಐಸಿಸಿ ಕೆಲವು ಕಾನೂನುಗಳನ್ನು ರೂಪಿಸಿದೆ. ಅದರಲ್ಲೂ ಕ್ರಿಕೆಟ್ ಚೆಂಡಿಗೆ ಸಂಬಂಧಿಸಿದಂತೆ ಕಠಿಣ ಕಾನೂನುಗಳೂ ಇವೆ. ಈ ಕಾನೂನಿನ ಪ್ರಕಾರ, ಯಾವುದೇ ಆಟಗಾರನು ಚೆಂಡಿನ ಗಾತ್ರ ಮತ್ತು ಆಕಾರವನ್ನು ಹಾಳುಮಾಡುವಂತಿಲ್ಲ. ಅಂತಹ ಯಾವುದೇ ಘಟನೆ ಕಂಡುಬಂದರೆ, ಅದನ್ನು ಬಾಲ್ ಟ್ಯಾಂಪರಿಂಗ್ ಎಂದು ಕರೆಯಲಾಗುತ್ತದೆ. 2004 ರಲ್ಲಿ, ಆಸ್ಟ್ರೇಲಿಯಾದಲ್ಲಿ ನಡೆದ ತ್ರಿಕೋನ ಸರಣಿಯ ಸಂದರ್ಭದಲ್ಲಿ, ಬ್ರಿಸ್ಬೇನ್‌ನಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ODI ಪಂದ್ಯದಲ್ಲಿ ರಾಹುಲ್ ದ್ರಾವಿಡ್ ಅವರು ಚೆಂಡಿನ ಮೇಲೆ ಲಾಲಾರಸ(ಜೊಲ್ಲನ್ನು) ಅನ್ವಯಿಸಿದರು ಎಂಬ ಆರೋಪಗಳು ಕೇಳಿಬಂದಿವೆ. ಈ ವೇಳೆ ಮ್ಯಾಚ್ ರೆಫರಿ ಕ್ಲೈವ್ ಲಾಯ್ಡ್ ದಂಡ ವಿಧಿಸಿದ್ದರು. ಈ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ಕೂಡ 106 ಎಸೆತಗಳಲ್ಲಿ 84 ರನ್ ಸಿಡಿಸಿದ್ದರು. ಈ ಇನ್ನಿಂಗ್ಸ್ ಆಧಾರದಲ್ಲಿ ಭಾರತ 255 ರನ್ ಗಳಿಸಲಷ್ಟೇ ಶಕ್ತವಾಯಿತು. ಉತ್ತರವಾಗಿ ಜಿಂಬಾಬ್ವೆ ತಂಡ ಕೇವಲ 231 ರನ್ ಗಳಿಸಲಷ್ಟೇ ಶಕ್ತವಾಗಿ ಟೀಂ ಇಂಡಿಯಾ ಜಯಭೇರಿ ಬಾರಿಸಿತು.

ಐ‌ಪಿ‌ಎಲ್ ಸ್ಪಾಟ್ ಫಿಕ್ಸಿಂಗ್ ಸಮಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕರಾಗಿದ್ದ ದ್ರಾವಿಡ್:  ಐಪಿಎಲ್ 2013 ರಲ್ಲಿ, ಭಾರತೀಯ ತಂಡದ ವೇಗದ ಬೌಲರ್‌ಗಳಾದ ಎಸ್ ಶ್ರೀಶಾಂತ್, ಅಜಿತ್ ಚಾಂಡಿಲಾ ಮತ್ತು ಅಂಕಿತ್ ಚವಾಣ್ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದರು. ಇದರಿಂದಾಗಿ ಅವರು ಕೆಲವು ದಿನ ಜೈಲಿನಲ್ಲಿಯೂ ಕಳೆಯಬೇಕಾಯಿತು. 2013 ರ ಐಪಿಎಲ್‌ನಲ್ಲಿ, ಎಸ್ ಶ್ರೀಶಾಂತ್ ಜೊತೆಗೆ ಅಜಿತ್ ಚಾಂಡಿಲಾ ಮತ್ತು ಅಂಕಿತ್ ಚವಾಣ್ ಅವರನ್ನು ಹೋಟೆಲ್‌ನಿಂದ ದೆಹಲಿ ಪೊಲೀಸರು ಬಂಧಿಸಿದ್ದರು. ನಂತರ ಮೂವರ ವಿರುದ್ಧ ಸ್ಪಾಟ್ ಫಿಕ್ಸಿಂಗ್ ಪ್ರಕರಣವನ್ನು ದಾಖಲಿಸಲಾಯಿತು. ಮೂವರೂ ಕೆಲಕಾಲ ಜೈಲಿನಲ್ಲಿ ಕಳೆದಿದ್ದರು. ಬಿಸಿಸಿಐ ಈ ಮೂವರು ಆಟಗಾರರನ್ನು ಕ್ರಿಕೆಟ್‌ನಿಂದ ಆಜೀವ ನಿಷೇಧಿಸಿತ್ತು. ಆ ಸಮಯದಲ್ಲಿ, ರಾಹುಲ್ ದ್ರಾವಿಡ್ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿದ್ದರು ಮತ್ತು ಕೆಲವು ಸಮಯ ಅವರ ಹೆಸರು ಕೂಡ ವಿವಾದಗಳಲ್ಲಿ ಸಿಲುಕಿತ್ತು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link