Rahul Gandhi Birthday: 53ನೇ ವಸಂತಕ್ಕೆ ಕಾಲಿಟ್ಟ ರಾಹುಲ್, ಇಲ್ಲಿದೆ ಅವರ ಅಪರೂಪದ ಬಾಲ್ಯದ ಫೋಟೋಗಳು
ರಾಹುಲ್ ಗಾಂಧಿ 19 ಜೂನ್ 1970 ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನೆಹರು ಅವರ ಕುಟುಂಬದಲ್ಲಿ ಜನಿಸಿದರು. ರಾಹುಲ್ ಗಾಂಧಿ ಅವರು ದೇಶದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಮೊದಲ ಮಗು.
ರಾಹುಲ್ ಗಾಂಧಿ ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿಯವರ ಮೊಮ್ಮಗ. ರಾಹುಲ್ ಗಾಂಧಿ ಎಂದರೆ ಅವರ ತಂದೆ ರಾಜೀವ್ ಗಾಂಧಿ ಹಾಗೂ ಅಜ್ಜಿ ಇಂದಿರಾ ಗಾಂಧಿ ಅವರಿಗೆ ಅಚ್ಚುಮೆಚ್ಚು.
ಅಜ್ಜಿ ಇಂದಿರಾ ಗಾಂಧಿಯವರೊಂದಿಗೆ ತುಂಬಾ ಆತ್ಮೀಯರಾಗಿದ್ದ ರಾಹುಲ್ ಗಾಂಧಿ ತಮ್ಮ 14 ನೇ ವಯಸ್ಸಿನಲ್ಲಿ 1984 ಅಕ್ಟೋಬರ್ 31 ರಂದು ತಮ್ಮ ಅಜ್ಜಿಯನ್ನು ಕಳೆದುಕೊಂಡರು. ಗಮನಾರ್ಹವಾಗಿ, 1984 ಅಕ್ಟೋಬರ್ 31 ರಂದು ದೆಹಲಿಯಲ್ಲಿ ಇಂದಿರಾ ಗಾಂಧಿಯವರನ್ನು ಹತ್ಯೆಗೈಯಲಾಯಿತು.
ಅಜ್ಜಿಯ ಹತ್ಯೆಯ ನಂತರ, ಮೇ 21, 1991 ರಂದು ಅವರ ತಂದೆ ರಾಜೀವ್ ಗಾಂಧಿ ಹತ್ಯೆಯಾದಾಗ ರಾಹುಲ್ ಗಾಂಧಿಗೆ ಕೇವಲ 21 ವರ್ಷ.
ರಾಹುಲ್ ಗಾಂಧಿ ದೆಹಲಿಯ ಮಾಡರ್ನ್ ಸ್ಕೂಲ್‌ನಲ್ಲಿ ಆರಂಭಿಕ ಅಧ್ಯಯನ ಮಾಡಿದ ನಂತರ ಡೂನ್ ಶಾಲೆಗೆ ಹೋದರು. ಇದರ ನಂತರ, 1989 ರಲ್ಲಿ, ಅವರು ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಪ್ರವೇಶ ಪಡೆದರು, ಆದರೆ ಭದ್ರತಾ ಕಾರಣಗಳಿಂದ ಹೆಚ್ಚಿನ ಅಧ್ಯಯನಕ್ಕಾಗಿ ಅವರನ್ನು ಯುಎಸ್ ಗೆ ಕಳುಹಿಸಲಾಯಿತು. ಭದ್ರತಾ ಕಾರಣಗಳಿಂದಾಗಿ, ರಾಹುಲ್ ಗಾಂಧಿ 1991 ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯವನ್ನು ತೊರೆಯಬೇಕಾಯಿತು ಮತ್ತು ಫ್ಲೋರಿಡಾದ ರೋಲಿನ್ಸ್ ಕಾಲೇಜಿನಲ್ಲಿ ಪ್ರವೇಶ ಪಡೆದರು. ಬಳಿಕ 1994 ರಲ್ಲಿ ಅವರು ಕಲಾ ವಿಭಾಗದಲ್ಲಿ ಪದವಿ ಪಡೆದರು ಮತ್ತು 1995 ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಟ್ರಿನಿಟಿ ಕಾಲೇಜಿನಿಂದ ಎಂಫಿಲ್ ಪದವಿಯನ್ನೂ ಕೂಡ ಪಡೆದಿದ್ದಾರೆ.
2004ರಲ್ಲಿ ರಾಜಕೀಯಕ್ಕೆ ಎಂಟ್ರಿ ನೀಡಿದ ರಾಹುಲ್ ಗಾಂಧಿ 2004ರ ಸಾರ್ವತ್ರಿಕ ಚುನಾವಣೆಯಲ್ಲಿ ಅಮೇಥಿ ಲೋಕಸಭಾ ಕ್ಷೇತ್ರದಿಂದ ಗೆದ್ದು ಲೋಕಸಭೆಗೆ ಪ್ರವೇಶಿಸಿದ್ದರು. ಗಮನಾರ್ಹವಾಗಿ, ಇದು ಈ ಹಿಂದೆ ರಾಹುಲ್ ಗಾಂಧಿಯವರ ತಂದೆ ರಾಜೀವ್ ಗಾಂಧಿಯವರ ಲೋಕಸಭಾ ಕ್ಷೇತ್ರವಾಗಿತ್ತು.