“ಏಕೆಂದರೆ ನಾನು…”- 53 ವರ್ಷ ವಯಸ್ಸಾದ್ರೂ ಮದುವೆಯಾಗದಿರಲು ಇದೇ ಕಾರಣ ಎಂದ ರಾಹುಲ್ ಗಾಂಧಿ

Thu, 30 Nov 2023-6:00 pm,

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಪ್ರಸ್ತುತ 53 ವರ್ಷ ವಯಸ್ಸು, ಆದ್ರೆ ಇನ್ನೂ ಕೂಡ ಮದುವೆಯಾಗಿಲ್ಲ. ಈ ಹಿಂದೆ ಕೆಲ ನಟಿಯರ ಜೊತೆ ರಾಹುಲ್ ಹೆಸರು ತಳುಕು ಹಾಕಿದ್ರೂ ಕೂಡ, ಇದುವರೆಗೆ ವಿವಾಹಬಂಧಕ್ಕೆ ಒಳಗಾಗಿಲ್ಲ.

ಅಷ್ಟೇ ಅಲ್ಲದೆ, ರಾಹುಲ್ ಗಾಂಧಿಯವರ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಆಗಾಗ್ಗೆ ಪ್ರಶ್ನೆಗಳು ಕೂಡ ಉದ್ಭವಿಸುತ್ತವೆ. ಜೊತೆಗೆ ಅನೇಕು ವ್ಯಂಗ್ಯಗಳನ್ನು ಕೂಡ ಮಾಡುತ್ತಿರುತ್ತಾರೆ.

ಜೈಪುರದ ಮಹಾರಾಣಿ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ರಾಹುಲ್ ಗಾಂಧಿ ನಡೆಸಿದ ಸಂವಾದದಲ್ಲಿ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದಾರೆ.

"ನೀವು ತುಂಬಾ ಸ್ಮಾರ್ಟ್ ಆಗಿದ್ದೀರ. ಆದ್ರೆ ಮದುವೆಯ ಬಗ್ಗೆ ಏಕೆ ಯೋಚಿಸಲಿಲ್ಲ?" ಎಂದು ಮಹಿಳೆಯೊಬ್ಬರು ರಾಹುಲ್ ಅವರಿಗೆ ಪ್ರಶ್ನೆಯನ್ನು ಕೇಳಿದ್ರು.

ಈ ಪ್ರಶ್ನೆಗೆ ಉತ್ತರಿಸಿದ ಅವರು, "ಏಕೆಂದರೆ ನಾನು ನನ್ನ ಕೆಲಸದಲ್ಲಿ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಸಂಪೂರ್ಣವಾಗಿ ಸಿಕ್ಕಿಹಾಕಿಕೊಂಡಿದ್ದೇನೆ" ಎಂದು ಹೇಳಿದರು.

ಇದಾದ ಬಳಿಕ ತಮ್ಮ ನೆಚ್ಚಿನ ಭಕ್ಷ್ಯಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹಾಗಲಕಾಯಿಯನ್ನು ಹೊರತುಪಡಿಸಿ ಎಲ್ಲವೂ ಇಷ್ಟ ಎಂದಿದ್ದಾರೆ,

ZEENEWS TRENDING STORIES

By continuing to use the site, you agree to the use of cookies. You can find out more by Tapping this link