ಇದ್ದಕ್ಕಿದ್ದಂತೆ ಚಾಂದಿನಿ ಚೌಕ್‌ನಲ್ಲಿ ಕಾಣಿಸಿಕೊಂಡ ರಾಹುಲ್ ಗಾಂಧಿ
ಭಾರತ್ ಜೋಡೋ ಯಾತ್ರೆ ಮೂಲಕ ಇಡೀ ಭಾರತದಾದ್ಯಂತ ಪಾದಯಾತ್ರೆ ನಡೆಸಿದ್ದ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕ ರಾಹುಲ್ ಗಾಂಧಿ ಇದ್ದಕ್ಕಿದ್ದಂತೆ ದೆಹಲಿಯ ಪ್ರಸಿದ್ಧ ಮಾರುಕಟ್ಟೆಗಳಲ್ಲಿ ಒಂದೆನಿಸಿಕೊಂಡಿರುವ ಚಾಂದಿನಿ ಚೌಕ್‌ನಲ್ಲಿ ಕಾಣಿಸಿಕೊಂಡರು. ಈ ಸಂದರ್ಭದಲ್ಲಿ ಅಲ್ಲಿನ ಝಲಕ್ ಹೇಗಿತ್ತು ಎಂಬುದನ್ನೂ ಈ ಫೋಟೋ ಗ್ಯಾಲರಿಯಲ್ಲಿ ನೋಡೋಣ...
ನಿನ್ನೆ(ಏಪ್ರಿಲ್ 18, 2023) ರಾತ್ರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚಾಂದಿನಿ ಚೌಕ್‌ನಲ್ಲಿ ಅಪಾರ ಜನಸಾಗರದ ನಡುವೆ ಕಾಣಿಸಿಕೊಂಡರು. ಈ ಸಂದರ್ಭದಲ್ಲಿ ಅವರು ನೀಲಿ ಬಣ್ಣದ ಟೀ ಶರ್ಟ್ ಧರಿಸಿದ್ದರು.
ರಂಜಾನ್ ರಾತ್ರಿ ಹಠಾತ್ತನೆ ಚಾಂದಿನಿ ಚೌಕ್‌ನಲ್ಲಿ ರಾಹುಲ್ ಗಾಂಧಿ ಕಾಣಿಸಿಕೊಂಡಾಗ ಅಲ್ಲಿದ್ದ ಜನಸ್ತೋಮ, ಅದರಲ್ಲೂ ಯುವಕರು ಹರ್ಷಚಿತ್ತರಾದಂತೆ ಕಾಣಿಸಿಕೊಂಡರು. ಈ ಸಂದರ್ಭದಲ್ಲಿ ಕೈ ಬೀಸಿ ಅವರು ತಮ್ಮ ಸಂತಸವನ್ನು ವ್ಯಕ್ತಪಡಿಸಿದರು. ತನ್ನನ್ನು ಕಂಡು ಹರ್ಷಚಿತ್ತರಾದ ಯುವಕರಿಗೆ ನಿರಾಸೆ ಮಾಡದ ರಾಹುಲ್ ಗಾಂಧಿ ಅವರೊಂದಿಗೆ ಮಾತನಾಡಿದ್ದು, ಮಾತ್ರವಲ್ಲ, ಸೆಲ್ಫಿ ಕೂಡ ಕ್ಲಿಕ್ಕಿಸಿಕೊಂದರು.
ಚಾಂದಿನಿ ಚೌಕ್ ಬಳಿಕ ಬೆಂಗಾಲಿ ಮಾರುಕಟ್ಟೆಗೆ ತೆರೆಳಿದ ರಾಹುಲ್ ಗಾಂಧಿ ಅಲ್ಲಿನ ಪ್ರಸಿದ್ಧ ಸ್ಟ್ರೀಟ್ ಫುಡ್ ಗೋಲ್ಗಪ್ಪೆಯನ್ನು ಸಹ ಸವಿದರು.
ಇನ್ನೂ ಬೆಂಗಾಲಿ ಮಾರುಕಟ್ಟೆಯಲ್ಲೂ ಸಹ ಸಾರ್ವಜನಿಕರೊಂದಿಗೆ ಸ್ನೇಹಪರತೆಯಿಂದ ಕಾಣಿಸಿಕೊಂಡ ರಾಹುಲ್ ಗಾಂಧಿ ಅವರೊಂದಿಗೆ ಮಾತುಕತೆಯನ್ನು ನಡೆಸಿದರು. ಇದರೊಂದಿಗೆ ರಾಹುಲ್ ಗಾಂಧಿ ತಮ್ಮ ಸರಳ ಸ್ವಭಾವ, ವ್ಯಕ್ತಿತ್ವಕ್ಕೆ ಮತ್ತೊಂದು ನಿದರ್ಶನ ನೀಡಿದ್ದಾರೆ ಎನ್ನುತ್ತಾರೆ ಅವರ ಅಭಿಮಾನಿಗಳು.