ಟ್ವಿಟ್ಟರ್ನಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆದ ರಾಹುಲ್-ಮೋದಿ ಅಪ್ಪುಗೆ! ಹೇಗೆ ಗೊತ್ತಾ??
ಲೋಕಸಭೆಯಲ್ಲಿ ಶುಕ್ರವಾರ ಕೇಂದ್ರ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಚರ್ಚೆಯ ಸಂದರ್ಭದಲ್ಲಿ ಮಾತನಾಡುತ್ತಾ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, "ನನ್ನನು ನೀವು(ಮೋದಿ) ಪಪ್ಪು ಎಂದು ಕರೆಯಬಹುದು. ನೀವು ನನ್ನನ್ನು ಬಹಳ ದ್ವೇಷಿಸಬಹುದು. ಆದರೆ, ನೀವು ನನ್ನನು ದ್ವೇಷಿಸಿದಷ್ಟೂ ನಾನು ನಿಮ್ಮನ್ನು ಪ್ರೀತಿಸುತ್ತೇನೆ ಎಂದು ಹೇಳುತ್ತಾ, ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ತೆರಳಿ, ಅವರೊಂದಿಗೆ ಹಸ್ತ ಲಾಘವ ಮಾಡಿ, ಅಪ್ಪಿಕೊಂಡಿದ್ದು ಇದೀಗ ಟ್ವಿಟ್ಟರ್'ನಲ್ಲಿ ಸಖತ್ ಟ್ರೋಲ್'ಗೆ ಒಳಗಾಗಿದೆ. ಅಷ್ಟೇ ಅಲ್ಲ, ಟ್ವಿಟ್ಟರ್ ಬಳಕೆದಾರರು ಈ ವಿಷಯದ ಕುರಿತು ಸಾಕಷ್ಟು ಹಾಸ್ಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಅದೇನು ಅಂತ ನೀವೂ ನೋಡಿ...
ರಾಹುಲ್ ಗಾಂಧಿ ಮೋದಿ ಅವರನ್ನು ಅಪ್ಪಿಕೊಳ್ಳುತ್ತಿದ್ದಂತೆಯೇ ಟ್ವಿಟ್ಟರ್ ಬಳಕೆದಾರರೊಬ್ಬರು ಬಾಲಿವುಡ್ ಖ್ಯಾತ ಚಿತ್ರ ಗ್ಯಾಂಗ್ ಆಫ್ ವಾಸೆಪುರ್'ನ ಸಂಭಾಷಣೆಯೊಂದನ್ನು ಜೋಡಿಸಿ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ಇತರ ನಾಯಕರನ್ನು ಅಪ್ಪಿಕೊಳ್ಳುತ್ತಿರುವ ಫೋಟೋಗಳನ್ನು ಹಾಕಿ ಪ್ರತಿಕ್ರಿಯಿಸಲಾಗಿದೆ.
ಮತ್ತೋರ್ವ ಟ್ವಿಟರ್ ಯೂಸರ್, ಮುನ್ನಾಭಾಯ್ ಎಂಬಿಬಿಎಸ್ ಚಿತ್ರದ ಸಂಜಯ್ ದತ್ ಅಪ್ಪಿಕೊಲ್ಲುತ್ತಿರುವ ಫೋಟೋ ಜೊತೆ ರಾಹುಲ್-ಮೋದಿ ಅಪ್ಪುಗೆ ಫೋಟೋ ಪೋಸ್ಟ್ ಮಾಡಿದ್ದಾರೆ.
ಬಾಲಿವುಡ್ ನಟ ಮತ್ತು ಬಿಜೆಪಿ ನಾಯಕ ಪರೇಶ್ ರಾವಲ್ ಹೆಸರಿನ ಅಕೌಂಟ್ನಲ್ಲಿ, ಅಮ್ಮ ಜೀವನದಲ್ಲಿ ಮತ್ತೊಬ್ಬರನ್ನು ಅಪ್ಪಿಕೊಳ್ಳುವ ಮೂಲಕ ಹೇಗೆ ಲೇವಡಿ ಮಾಡುವುದು ಎಂಬುದು ತಿಳಿಯಿತು ಎಂದಿದ್ದಾರೆ.
ಮತ್ತೊಬ್ಬರು, ಎಲ್ಲರೂ ಒಂದೇ ಎಂದು ಕೇಜ್ರಿವಾಲ್ ಹೇಳಿರುವುದು ಸರಿಯಾಗಿಯೇ ಇದೆ ಎಂದಿದ್ದಾರೆ.