50 ವರ್ಷಗಳ ನಂತರ ರಾಹುವಿನ ನಕ್ಷತ್ರ ಸಂಚಾರ: ಈ ಮೂರು ರಾಶಿಯವರಿಗೆ ಜಾಕ್‌ಪಾಟ್ ಹೊಡೆಯಲಿದೆ!
ಉತ್ತರ ಭಾದ್ರಪದ ನಕ್ಷತ್ರ ಶನಿದೇವನ ನಕ್ಷತ್ರವಾಗಿದೆ. ರಾಹು ಮತ್ತು ಶನಿಯು ಸ್ನೇಹಪರವಾಗಿಲ್ಲದಿದ್ದರೂ ರಾಹುವಿನ ಈ ನಕ್ಷತ್ರ ಸಂಕ್ರಮಣವು ಕೆಲವು ರಾಶಿಗಳಿಗೆ ಅದೃಷ್ಟವನ್ನು ನೀಡುತ್ತದೆ. ಆ ರಾಶಿಯವರ ಆರ್ಥಿಕ ಪರಿಸ್ಥಿತಿಯು ಸುಧಾರಿಸಲಿದೆ. ಇದೀಗ ರಾಹು ಉತ್ತರ ಭಾದ್ರಪದ ನಕ್ಷತ್ರಕ್ಕೆ ತೆರಳಿದ್ದು, ಯಾರಿಗೆ ಅದೃಷ್ಟ ತರಲಿದೆ ಎಂಬುದರ ಬಗ್ಗೆ ತಿಳಿಯಿರಿ...
ರಾಹುವಿನ ನಕ್ಷತ್ರ ಸಂಚಾರ ವೃಷಭ ರಾಶಿಯವರ ಆದಾಯದಲ್ಲಿ ಹೆಚ್ಚಳ ನೀಡುತ್ತದೆ. ಕೆಲಸ & ವ್ಯವಹಾರದಲ್ಲಿ ಅನಿರೀಕ್ಷಿತ ಪ್ರಗತಿ ಕಾಣಬಹುದು. ಕೆಲವರಿಗೆ ಉದ್ಯೋಗ ಬದಲಾವಣೆಗೆ ಅವಕಾಶಗಳಿರುತ್ತವೆ. ಆದರೆ ಈ ಬದಲಾವಣೆಯು ಜೀವನದಲ್ಲಿ ಉತ್ತಮ ಫಲಿತಾಂಶ ತರುತ್ತದೆ. ವ್ಯಾಪಾರಸ್ಥರು ಆರ್ಥಿಕ ಲಾಭ ತರುವ ಹೊಸ ಒಪ್ಪಂದ ಮಾಡಿಕೊಳ್ಳಬಹುದು. ವ್ಯಾಪಾರ ವಿಸ್ತರಣೆಯಾಗುವ ಸಾಧ್ಯತೆ ಇರುತ್ತದೆ. ಉದ್ಯೋಗಾಕಾಂಕ್ಷಿಗಳಿಗೆ ಅಂದುಕೊಂಡ ಉದ್ಯೋಗ ದೊರೆಯಲಿದೆ.
ರಾಹುವಿನ ನಕ್ಷತ್ರ ಸಂಚಾರವು ಮಿಥುನ ರಾಶಿಯವರಿಗೆ ಉತ್ತಮ ಲಾಭ ತರುತ್ತದೆ. ಈ ಸಮಯದಲ್ಲಿ ನಿಮ್ಮ ಆದಾಯ ಹೆಚ್ಚಲಿದೆ. ನಿಮ್ಮ ಕೆಲಸ ಬದಲಾಯಿಸಲು ಬಯಸಿದರೆ, ಈ ಅವಧಿಯಲ್ಲಿ ಪ್ರಯತ್ನಿಸಿರಿ. ಕೆಲಸದಲ್ಲಿ ನೀವು ಉತ್ತಮ ಫಲಿತಾಂಶ ಪಡೆಯುತ್ತೀರಿ. ಕೆಲವರಿಗೆ ಹೊಸ ಉದ್ಯೋಗಾವಕಾಶ ಸಿಗಲಿವೆ. ಈ ಅವಧಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಸಿಗುತ್ತದೆ. ವಿವಾಹಿತರಿಗೆ ಸಂತಾನ ಭಾಗ್ಯ ದೊರಕಲಿದೆ.
ಮಕರ ರಾಶಿಯ 3ನೇ ಮನೆಯಲ್ಲಿ ರಾಹು ಮತ್ತು 2ನೇ ಮನೆಯಲ್ಲಿ ಶನಿ ಇದ್ದಾರೆ. ರಾಹುವಿನ ಈ ನಕ್ಷತ್ರ ಸಂಕ್ರಮದಿಂದ ಮಕರ ರಾಶಿಯವರ ಧೈರ್ಯ ಹೆಚ್ಚುತ್ತದೆ. ನಿಮ್ಮ ಕೆಲಸ ತೃಪ್ತಿಕರವಾಗಿರುತ್ತದೆ & ಲಾಭದಾಯಕವಾಗಿರುತ್ತದೆ. ವ್ಯಾಪಾರಿಗಳಿಗೆ ಅನಿರೀಕ್ಷಿತ ಲಾಭ ದೊರೆಯಲಿದೆ. ಬಹಳ ದಿನಗಳಿಂದ ಬೇರೆಡೆ ಸಿಲುಕಿರುವ ಹಣ ಕೈಗೆ ಸಿಗಲಿದೆ. ಸ್ನೇಹಿತರಿಂದ ನಿಮಗೆ ಉತ್ತಮ ಬೆಂಬಲ ದೊರೆಯಲಿದೆ. ಉದ್ಯೋಗಿಗಳಿಗೆ ಬಡ್ತಿ ದೊರೆಯುವ ಸಾಧ್ಯತೆ ಇರುತ್ತದೆ.