Railway Stocks: ವೇಗವಾಗಿ ಮುನ್ನುಗ್ಗುತ್ತಿರುವ ರೈಲ್ವೆ ಸ್ಟಾಕ್ಸ್; IRFC, RVNL, IRCTC ಷೇರು ಭಾರೀ ಜಿಗಿತ !

Fri, 19 Jan 2024-6:10 pm,

ರೈಲ್ವೆ ಮೂಲ ಸೌಕರ್ಯಗಳ ಅಭಿವೃದ್ಧಿ ಸಂಸ್ಥೆಯಾದ ‘ರೈಲ್ ವಿಕಾಸ್ ನಿಗಮ್ ಲಿಮಿಟೆಡ್’ ಷೇರು ಶುಕ್ರವಾರ 19.99% ಏರಿಕೆಯಾಗುವ ಮೂಲಕ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿತು. ದಿನದ ವಹಿವಾಟಿನ ಗರಿಷ್ಠ ಪ್ರಮಾಣ 292.30 ರೂ. ತಲುಪಿದ ಈ ಷೇರು ಕಳೆದ ಒಂದೇ ತಿಂಗಳಿನಲ್ಲಿ 69.84% ಏರಿಕೆ ಕಂಡಿದೆ.  

ಭಾರತೀಯ ರೈಲ್ವೆ ಫೈನಾನ್ಸ್‌ ಕಾರ್ಪೋರೇಷನ್ ಲಿಮಿಟೆಡ್ ಷೇರು ಶುಕ್ರವಾರ 9.98%ನಷ್ಟು ಏರಿಕೆಯಾಗುವ ಮೂಲಕ ಹೂಡಿಕೆದಾರರಿಗೆ ಭರ್ಜರಿ ಲಾಭ ತಂದುಕೊಟ್ಟಿದೆ. 52 ವಾರಗಳ ಗರಿಷ್ಠ 160.85 ರೂ. ತಲುಪಿದ ಈ ಷೇರು ಕಳೆದ ಒಂದೇ ತಿಂಗಳಿನಲ್ಲಿ 73.99% ಏರಿಕೆ ಕಂಡಿದೆ.

ಇರ್ಕಾನ್ ಇಂಟರ್ನ್ಯಾಷನಲ್ ಲಿಮಿಟೆಡ್ ಷೇರು ಸಹ ಶುಕ್ರವಾರ 11.59%ನಷ್ಟು ಏರಿಕೆಯಾಗುವ ಮೂಲಕ ಹೂಡಿಕೆದಾರರ ಜೇಬು ತುಂಬಿಸಿದೆ. 52 ವಾರಗಳ ಗರಿಷ್ಠ 230.85 ರೂ. ತಲುಪಿದ ಈ ಷೇರು ಕಳೆದ ಒಂದೇ ತಿಂಗಳಿನಲ್ಲಿ 39.78%ರಷ್ಟು ಏರಿಕೆ ಕಂಡಿದೆ.

ರೈಲ್‌ಟೆಲ್ ಕಾರ್ಪೊರೇಶನ್ ಆಫ್ ಇಂಡಿಯಾ ಲಿಮಿಟೆಡ್ ಷೇರು ಸಹ ಶುಕ್ರವಾರ 6.56% ಏರಿಕೆ ಕಂಡಿದೆ. ಈ ಷೇರು 52 ವಾರಗಳ ಗರಿಷ್ಠ ಮಟ್ಟ 395.90 ರೂ. ತಲುಪಿದ್ದು, ಕಳೆದ ಒಂದೇ ತಿಂಗಳಿನಲ್ಲಿ 33.73%ರಷ್ಟು ಏರಿಕೆ ಕಂಡಿದೆ.

ರೈಟ್ಸ್ ಲಿಮಿಟೆಡ್ ಷೇರು ಕೂಡ ಶುಕ್ರವಾರ 6.46% ಏರಿಕೆ ಕಾಣುವ ಮೂಲಕ ಹೂಡಿಕೆದಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ. 52 ವಾರಗಳ ಗರಿಷ್ಠ ಮಟ್ಟ 584 ರೂ. ತಲುಪಿರುವ ಈ ಷೇರು, ಕಳೆದ ಒಂದೇ ತಿಂಗಳಿನಲ್ಲಿ 14.47% ರಷ್ಟು ಲಾಭ ತಂದುಕೊಟ್ಟಿದೆ.

IRCTC ಷೇರು ಸಹ ಶುಕ್ರವಾರ 6.10% ಏರಿಕೆ ಕಾಣುವ ಮೂಲಕ ಹೂಡಿಕೆದಾರರಿಗೆ ಬಂಪರ್ ಲಾಭ ತಂದುಕೊಟ್ಟಿತು. 52 ವಾರಗಳ ಗರಿಷ್ಠ ಮಟ್ಟ 988.80 ರೂ. ತಲುಪಿದ ಈ ಷೇರು ಕಳೆದ ಒಂದೇ ತಿಂಗಳಿನಲ್ಲಿ 20.69% ರಿಟರ್ನ್ಸ್ ನೀಡಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link