Indian Railway: ಹೊಸ ಎಕಾನಮಿ ಕೋಚ್ ಆರಂಭಿಸಿದ ರೈಲ್ವೆ, ಮೊದಲಿಗಿಂತ ಹೇಗೆ ಭಿನ್ನ ತಿಳಿಯಿರಿ

Fri, 25 Feb 2022-1:30 pm,

ಭಾರತೀಯ ರೈಲ್ವೇಯು 2021 ರಲ್ಲಿ AC-3 ಎಕಾನಮಿ ಕೋಚ್‌ಗಳ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಇದು ಮೂರನೇ ಎಸಿಗೆ ಹೋಲುತ್ತದೆ. ಸಾಮಾನ್ಯ ಜನರಿಗೆ ಕೈಗೆಟುಕುವ ದರದಲ್ಲಿ ಆರಾಮದಾಯಕ ಪ್ರಯಾಣ ಸೌಲಭ್ಯಗಳನ್ನು ಒದಗಿಸುವುದು ಇದರ ಉದ್ದೇಶವಾಗಿದೆ.

ಇದು ಥರ್ಡ್ ಎಸಿ ತರಹದ ಕೋಚ್ ಆಗಿದ್ದು, ಥರ್ಡ್ ಎಸಿಯಲ್ಲಿ ಪ್ರಯಾಣಿಕರಿಗೆ ನೀಡುವ ಸೌಲಭ್ಯಗಳನ್ನೇ ಈ ಕೋಚ್ ನಲ್ಲೂ ನೀಡಲಾಗಿದೆ. ಎಸಿ-3 ಕೋಚ್‌ಗಳನ್ನು ಹೊಂದಿರುವ ರೈಲಿನಲ್ಲಿ ಎಕಾನಮಿ ಕೋಚ್‌ಗಳಿಲ್ಲ, ಎಂದರೆ  ಅದನ್ನು ಥರ್ಡ್ ಎಸಿಗೆ ರಿಪ್ಲೇಸ್ ಮಾಡಲಾಗಿದೆ ಎಂದರ್ಥ.

ಈಗ ಪ್ರಶ್ನೆ ಮತ್ತು ಗೊಂದಲ ಏನೆಂದರೆ ಈ ಎರಡು ಕೋಚ್ ಗಳ ನಡುವಿನ ವ್ಯತ್ಯಾಸ ಏನು ಎನ್ನುವುದು.  AC-3 ಎಕಾನಮಿ ಕೋಚ್‌ಗಳು ಹೊಸದು ಮತ್ತು ಆಧುನಿಕ ಸೌಲಭ್ಯಗಳನ್ನು ಇದರಲ್ಲಿ ಸೇರಿಸಲಾಗಿದೆ.   ಇದನ್ನು ಮೊದಲಿಗಿಂತ ಉತ್ತಮವಾಗಿ ಮತ್ತು ವಿಭಿನ್ನ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ

AC-3 ಎಕಾನಮಿ ಎಂಬ ಹೆಸರನ್ನು AC-3 ನ ಹೊಸ ಕೋಚ್‌ಗಳಿಗೆ ನೀಡಲಾಗಿದೆ. ಥರ್ಡ್ ಎಸಿಯಲ್ಲಿ 72 ಸೀಟುಗಳು ಇರುತ್ತಿದ್ದವು.  ಆದರೆ ಎಸಿ-3 ಎಕಾನಮಿಯಲ್ಲಿ 11 ಸೀಟುಗಳನ್ನು ನೀಡಲಾಗಿದೆ. ಅನದರೆ ಈ ಕೋಚ್ ನಲ್ಲಿ  83 ಆಸನಗಳನ್ನು ನೀಡಲಾಗಿದೆ. 

ಇದಲ್ಲದೆ, ಎಸಿ-3 ಎಕಾನಮಿ ಕೋಚ್‌ನ ವಿನ್ಯಾಸದಲ್ಲಿ ಭಾರೀ  ಬದಲಾವಣೆಗಳನ್ನು ಮಾಡಲಾಗಿದೆ. ಪ್ರತಿ ಸೀಟಿನ ಪ್ರಯಾಣಿಕರಿಗೆ ಪ್ರತ್ಯೇಕವಾಗಿ ಎಸಿ ಡಕ್ ಅಳವಡಿಸಲಾಗಿದೆ. ಇದರೊಂದಿಗೆ ಬಾಟಲಿ ಸ್ಟ್ಯಾಂಡ್, ರೀಡಿಂಗ್ ಲೈಟ್ ಮತ್ತು ಪ್ರತಿ ಸೀಟಿನಲ್ಲಿ ಚಾರ್ಜ್ ಮಾಡುವ ವ್ಯವಸ್ಥೆ ಮಾಡಲಾಗಿದೆ. . ಇದುವರೆಗೆ 8 ರೈಲುಗಳಲ್ಲಿ ಈ ಬೋಗಿಗಳನ್ನು ಅಳವಡಿಸಲಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link