ಮುಂದಿನ 2 ದಿನ ಈ ಭಾಗಗಳಲ್ಲಿ ಕುಂಭದ್ರೋಣ ಮಳೆ! ಗುಡುಗು-ಮಿಂಚು ಜೊತೆ ಸುಳಿಗಾಳಿ ಬೀಸುವ ಮುನ್ಸೂಚನೆ
ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಪ್ರಕಾರ, ಗುಡ್ಡಗಾಡು ರಾಜ್ಯಗಳಲ್ಲಿ ಮಳೆ ಮತ್ತು ಹಿಮಪಾತದ ಅವಧಿಯು ಅಕ್ಟೋಬರ್ 13 ರಿಂದ ಅಂದರೆ ಶನಿವಾರದಿಂದ ಪ್ರಾರಂಭವಾಗುತ್ತದೆ. ಇನ್ನು ಅಕ್ಟೋಬರ್ 15-16 ರಂದು ಗರಿಷ್ಠ ಮಟ್ಟದಲ್ಲಿರುತ್ತದೆ ಎಂದು ತಿಳಿದುಬಂದಿದೆ. ಹವಾಮಾನದಲ್ಲಿನ ಈ ಬದಲಾವಣೆಯು ಅಕ್ಟೋಬರ್ 17 ರವರೆಗೆ ಇರುತ್ತದೆ..
ಯುಪಿಯ ನೋಯ್ಡಾ-ಘಾಜಿಯಾಬಾದ್\ನಲ್ಲಿ ಅಕ್ಟೋಬರ್ 12 ರಿಂದ 14 ರವರೆಗೆ ಶುಷ್ಕ ಹವಾಮಾನ ಇರುತ್ತದೆ. ಇನ್ನೊಂದೆಡೆ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಇನ್ನೂ ಎರಡು ದಿನ ಮಳೆ ಮುಂದುವರೆಯುವ ಸಾಧ್ಯತೆ ಇದೆ. ಈಗಾಗಲೇ ಕೆಲ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಕೊಡಗು, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕಳೆದ ದಿನ ದಕ್ಷಿಣ ಕನ್ನಡ ಜಿಲ್ಲೆಯ ಬಾರ್ಯದಲ್ಲಿ 106 ಮಿಮೀ ಮಳೆಯಾಗಿದ್ದು, 24 ಗಂಟೆಯಲ್ಲಿ ಅತಿ ಹೆಚ್ಚು ಮಳೆಯಾದ ಪ್ರದೇಶ ಎಂದು ಗುರುತಿಸಿಕೊಂಡಿದೆ.
ದಕ್ಷಿಣ ಕನ್ನಡ 106 ಮಿಮೀ, ಉಡುಪಿ 68 ಮಿಮೀ, ಚಿಕ್ಕಮಗಳೂರು 57.5 ಮಿಮೀ, ಧಾರವಾಡ 55.5 ಮಿಮೀ, ಉತ್ತರ ಕನ್ನಡ 36.5 ಮಿಮೀ, ಹಾಸನ 31 ಮಿಮೀ, ಚಾಮರಾಜನಗರ 25.5 ಮಿಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಿದೆ.
ಇನ್ನು ಮುಂದಿನ 2 ದಿನ ದೇಶದ ಹಲವು ರಾಜ್ಯಗಲ್ಲಿ ಕುಂಭದ್ರೋಣ ಮಳೆಯಾಗಲಿದೆ. ಬಿಹಾರ, ಜಾರ್ಖಂಡ್, ಛತ್ತೀಸ್‌ಗಢ, ಗಂಗಾನದಿ ಪಶ್ಚಿಮ ಬಂಗಾಳದ ಕೆಲವು ಭಾಗಗಳು, ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರದಲ್ಲಿ ವ್ಯಾಪಕ ಮಳೆ ಬೀಳುವ ಸಾಧ್ಯತೆ ಇದೆ.
ಅಕ್ಟೋಬರ್ 13ರ ರಾತ್ರಿ ವಾಯುಭಾರ ಕುಸಿತದ ಪರಿಣಾಮ ಪಶ್ಚಿಮ ಭಾಗದಿಂದ ಹಿಮಾಲಯದ ಕಡೆಗೆ ಮತ್ತು ಅಕ್ಟೋಬರ್ 14ರಿಂದ ವಾಯವ್ಯ ಬಾರತದ ಕಡೆಗೆ ಮುಂಗಾರು ಮಳೆ ಪಸರಿಸಲಿದೆ.