RCB vs CSK ನಿರ್ಣಾಯಕ ಪಂದ್ಯಕ್ಕೆ ಮಳೆ ಭೀತಿ! ಪಂದ್ಯ ಸ್ಥಗಿತವಾದರೆ ಪ್ಲೇ ಆಫ್’ಗೆ ಪ್ರವೇಶಿಸೋದು ಯಾರು? ಇಲ್ಲಿದೆ ಮಾಹಿತಿ
ಸದ್ಯ ಚೆನ್ನೈ ಸೂಪರ್ ಕಿಂಗ್ಸ್ 14 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಸನ್ ರೈಸರ್ಸ್ 14 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಸಿಎಸ್ ಕೆ ತಂಡ ಪ್ಲೇ ಆಫ್ ಸುತ್ತಿಗೆ ಹೋಗಬೇಕಾದರೆ ಬೆಂಗಳೂರು ತಂಡದ ವಿರುದ್ಧ ಲೀಗ್ ಪಂದ್ಯದಲ್ಲಿ ಗೆಲ್ಲಲೇಬೇಕು.
ಮೊದಲಾರ್ಧದಲ್ಲಿ ಸೋತರೂ ಆರ್ ಸಿ ಬಿ ಸತತ ಐದು ಪಂದ್ಯಗಳನ್ನು ಗೆದ್ದು ಪ್ಲೇ ಆಫ್ ರೇಸ್’ನಲ್ಲಿದೆ. ಇನ್ನು ಮೇ 18ರಂದು ಆರ್ ಸಿ ಬಿ ಮತ್ತು ಸಿ ಎಸ್ ಕೆ ಮಧ್ಯೆ ನಿರ್ಣಾಯಕ ಪಂದ್ಯ ನಡೆಯಲಿದೆ. ಆದರೆ ಅದೇ ದಿನದಂದು ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ತಮಿಳುನಾಡು ವೆದರ್ ಮ್ಯಾನ್ ಪ್ರದೀಪ್ ಜಾನ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ತಮಿಳುನಾಡು, ಕೇರಳ, ಪಾಂಡಿಚೇರಿ, ಬೆಂಗಳೂರಿನಲ್ಲಿ ಬೇಸಿಗೆ ಮುಂಗಾರು ಉತ್ತಮವಾಗಿ ಆರಂಭವಾಗಿದೆ. ಅದೃಷ್ಟವಶಾತ್ ಡೆಲ್ಲಿ ಮತ್ತು ಆರ್‌ಸಿಬಿ ತಂಡಗಳು ಮುಖಾಮುಖಿಯಾದಾಗ ಮಳೆ ಅಡ್ಡಿಪಡಿಸದಿದ್ದರೂ, ಪಂದ್ಯ ಮುಗಿದ ನಂತರ ಬೆಂಗಳೂರಿನ ವಿವಿಧೆಡೆ ಮಳೆಯಾಗುವ ಸಾಧ್ಯತೆ ಇದೆ.
ಅದೇ ರೀತಿ ಮೇ 18ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಿಎಸ್‌ಕೆ ಮತ್ತು ಆರ್‌ಸಿಬಿ ನಡುವಿನ ಪಂದ್ಯಕ್ಕೂ ಮಳೆಯಿಂದ ತೊಂದರೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. CSK ಗೆಲ್ಲಲೇಬೇಕಾದ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ ಬಹುಶಃ CSK ಮತ್ತು RCB ಪಾಯಿಂಟ್ ಒಂದೊಂದು ಪಡೆಯುತ್ತದೆ.
ಈ ಮೂಲಕ ಸಿ ಎಸ್ ಕೆ ತಂಡ 15 ಅಂಕಗಳನ್ನು ಪಡೆದರೆ, ಆರ್ ಸಿ ಬಿ 13 ಅಂಕ ಗಳಿಸಲಿದೆ. ಹೀಗಿರುವಾಗ ಲಕ್ನೋ ಡೆಲ್ಲಿ ಅಥವಾ ಮುಂಬೈ ವಿರುದ್ಧದ ಪಂದ್ಯಗಳಲ್ಲಿ ಒಂದನ್ನು ಸೋಲಬೇಕು. ಇದು ಸಂಭವಿಸಿದಲ್ಲಿ, ಸಿ ಎಸ್ ಕೆ ತಂಡವು ಪ್ಲೇ-ಆಫ್ ಸುತ್ತಿಗೆ ಹೋಗುತ್ತದೆ. ಬಹುಶಃ ಲಕ್ನೋ ಎರಡು ಪಂದ್ಯಗಳನ್ನು ಗೆದ್ದರೆ, ಸಿ ಎಸ್ ಕೆ ಹೊರಗುಳಿಯುತ್ತದೆ. ಲಕ್ನೋ ಪ್ಲೇ ಆಫ್’ಗೆ ಹೋಗಲಿದೆ ಎಂಬುದು ಗಮನಾರ್ಹ.