ರಾಜ್‌ ಬಿ ಶೆಟ್ಟಿ ಬಾಳಲ್ಲಿ ಬಂದಿದ್ದ ಆ 3 ಹುಡುಗಿಯರು ಯಾರು ಗೊತ್ತೇ.. ಮನಸಾರೆ ಪ್ರೀತಿಸಿದರೂ ಒಬ್ಬರನ್ನೂ ಮದುವೆ ಆಗಿಲ್ಲ ಯಾಕೆ ಗೊತ್ತೇ!

Tue, 29 Oct 2024-4:44 pm,

ನಟ ರಾಜ್‌ ಬಿ ಶೆಟ್ಟಿ 37 ವರ್ಷ ವಯಸ್ಸಾದರೂ ಇನ್ನೂ ಯಾಕೆ ಮದುವೆಯಾಗಿಲ್ಲ ಎಂಬುದು ಹಲವರ ಪ್ರಶ್ನೆ. ರಾಜ್‌ ಬಿ ಶೆಟ್ಟಿ ಲವ್‌ ಲೈಫ್‌ ಬಗ್ಗೆ ಕುತೂಹಲಕಾರಿ ಸಂಗತಿ ಇಲ್ಲಿದೆ.

ಸೌತ್‌ ಸಿನಿರಂಗದಲ್ಲೇ ಸಾಕಷ್ಟು ಹೆಸರು ಮಾಡಿರುವ ರಾಜ್‌ ಬಿ ಶೆಟ್ಟಿ ಕೂಡ ಪ್ರೀತಿಯಲ್ಲಿ ಬಿದ್ದವರು. ರಾಜ್‌ ಬಿ ಶೆಟ್ಟಿ ಲವ್‌ ಲೈಫ್‌ ಬಗ್ಗೆ ಕುತೂಹಲಕಾರಿ ಸಂಗತಿ ಇಲ್ಲಿದೆ. ತನಗೂ ಲವ್‌ ಆಗಿತ್ತು ಎಂಬ ಸಂಗತಿಯನ್ನ ಒಂದು ಸಂದರ್ಶನದಲ್ಲಿ ರಾಜ್‌ ಬಿ ಶೆಟ್ಟಿ ಹೇಳಿದ್ದರು.

ನಟ ರಾಜ್‌ ಬಿ ಶೆಟ್ಟಿ ಸಹ ಒಂದು ಕಾಲದಲ್ಲಿ ಪ್ರೀತಿಸಿದವರು. ಆರು ವರ್ಷ ಪ್ರೀತಿಸಿದ ಹುಡುಗಿಯನ್ನು ಕಳೆದುಕೊಂಡ ನೋವು ಅವರ ಮನಸ್ಸಲ್ಲಿ ಇನ್ನೂ ಇದೆ.  

ರಾಜ್‌ ಬಿ ಶೆಟ್ಟಿ ಡಿಗ್ರಿ ಓದುವಾಗ ಒಂದು ಹುಡುಗಿಯನ್ನು ಪ್ರೀತಿಸಿದ್ದರಂತೆ. ಆರು ವರ್ಷ ಪ್ರೀತಿಯಲ್ಲಿದ್ದರಂತೆ. ಆರು ವರ್ಷದ ಬಳಿಕ ಬ್ರೇಕಪ್‌ ಆಗಿದೆಯಂತೆ. 

ಕಾಲೇಜಲ್ಲಿ ಒಂದು ಹುಡುಗಿಯನ್ನು ಪ್ರೀತಿಸಿದ್ದೆ. ಅವಳಿಗೆ ಆಗಲೇ ಹೇಳಿದ್ದೆ ನೀನು ಬಿಟ್ಟು ಹೋಗುವುದಾದರೆ ಪ್ರೀತಿ ಎಲ್ಲ ಬೇಡವೆಂದು. ಆದರೆ 6 ವರ್ಷದ ಬಳಿಕ ಅವಳು ನನ್ನನ್ನು ಬಿಟ್ಟು ಹೋದಳು ಎಂದು ರಾಜ್‌ ಬಿ ಶೆಟ್ಟಿ ಹೇಳಿಕೊಂಡಿದ್ದಾರೆ. 

ಅವಳಿಗೆ ಪ್ರೀತಿ ಕೊಡೋಕೇ ನನಗೆ ಬರಲಿಲ್ಲ. ಆ ಬ್ರೇಕಪ್‌ ಬಳಿಕವೇ ನಾನು ಬೆಳೆದೆ. ನೀನು ಯೋಗ್ಯ ಅಲ್ಲ ಎಂದು ಅವಳು ತೋರಿಸಿದಳು, ಅದೇ ಬೆಳವಣಿಗೆಗೆ ಕಾರಣವಾಯ್ತು, ಹೀಗಾಗಿ ನಾನು ಅವಳನ್ನು ಗೌರವಿಸುತ್ತೇನೆ ಎಂದಿದ್ದಾರೆ.

ಆ ಬ್ರೇಕಪ್‌ ಬಳಿಕ ರಾಜ್‌ ಬಿ ಶೆಟ್ಟಿ ಬಾಳಲ್ಲಿ ಮತ್ತೊಂದು ಹುಡುಗಿ ಬಂದಿದ್ದಳು. ಆದರೆ ಆ ಸಂಬಂಧ ಕೂಡ ಅರ್ಧಕ್ಕೆ ಮುರಿದುಬಿತ್ತು. ಈಗ ಒಂದು ರಿಲೇಷನ್‌ ನಡೆಯುತ್ತಿದೆ. ಇಬ್ಬರೂ ಸೇರಿ ಜೀವನದ ಹುಡುಕಾಟ ನಡೆಸಿದ್ದೇವೆ. ಒಟ್ನಲ್ಲಿ ನಡೆಯುತ್ತಿದೆ ಎಂದು ರಾಜ್‌ ಬಿ ಶೆಟ್ಟಿ ಪ್ರೀತಿಯ ಗುಟ್ಟನ್ನು ತಿಳಿಸಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link