ಧಾರಾವಾಹಿಯಲ್ಲಿ ಅಣ್ಣ-ತಂಗಿ; ನಿಜಜೀವನದಲ್ಲಿ ಗಂಡ-ಹೆಂಡತಿ! ಅಣ್ಣಾ... ಅಂತ ಕರೆದವನನ್ನೇ ಪ್ರೀತಿಸಿ ಮದುವೆಯಾದ ಕನ್ನಡದ ಪ್ರಖ್ಯಾತ ನಟಿ
ಸದ್ಯ ಕನ್ನಡದಲ್ಲಿ ಸಾಕಷ್ಟು ಧಾರಾವಾಹಿಗಳು ಪ್ರಸಾರವಾಗುತ್ತಿದೆ. ಅದರಲ್ಲಿ ಅತಿ ಹೆಚ್ಚು ಜನಮನ್ನಣೆ ಪಡೆದಿರುವ ಧಾರಾವಾಹಿಯ ಪಟ್ಟಿಯಲ್ಲಿ ಶ್ರೀರಸ್ತು ಶುಭಮಸ್ತು ಕೂಡ ಒಂದಾಗಿದೆ. ಈ ಧಾರಾವಾಹಿಯಲ್ಲಿ ಕೌಟುಂಬಿಕ ಮೌಲ್ಯ, ಸಂಬಂಧಗಳ ಬೆಲೆಯ ಬಗ್ಗೆ ಅಚ್ಚುಕಟ್ಟಾಗಿ ಬಿಂಬಿಸಲಾಗುತ್ತಿದೆ.
ಇನ್ನು ಈ ಸೀರಿಯಲ್‌ನಲ್ಲಿ ಪೂರ್ಣಿ ಪಾತ್ರದಲ್ಲಿ ನಟಿಸುತ್ತಿರುವ ಲಾವಣ್ಯ ಎಲ್ಲರಿಗೂ ತಿಳಿದೇ ಇದೆ. ಇವರ ಪತಿ ಯಾರೆಂದು ಸಹ ಒಂದಷ್ಟು ಜನರಿಗೆ ತಿಳಿದಿದೆ. ಇಂದು ವರದಿಯಲ್ಲಿ ಇವರಿಬ್ಬರ ಪ್ರೀತಿ, ಪ್ರೀತಿ ಬಳಿಕ ಲಾವಣ್ಯ ಹಾಕಿದ್ದ ಕಂಡೀಷನ್ ಏನೆಂಬುದನ್ನು ತಿಳಿಯೋಣ.
2022ರಲ್ಲಿ ಸಪ್ತಪದಿ ತುಳಿದಿದ್ದ ಈ ಜೋಡಿ ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್‌ಗಳನ್ನು ಆಗಾಗ್ಗೆ ಹಾಕುತ್ತಿರುತ್ತಾರೆ. 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಪೂರ್ಣಿಮಾ ಪಾತ್ರವನ್ನು ನಿರ್ವಹಿಸುತ್ತಿರುವ ನಟಿ ಲಾವಣ್ಯ ಮತ್ತು ಅಮೃತಧಾರೆ ಸೀರಿಯಲ್‌ನಲ್ಲಿ ಜೀವ ಪಾತ್ರಕ್ಕೆ ಬಣ್ಣ ಹಚ್ಚಿದ್ದ ಶಶಿ ಅವರು ಇದಕ್ಕೂ ಮುನ್ನ 'ರಾಜಾ-ರಾಣಿ' ಎಂಬ ಧಾರಾವಾಹಿಯಲ್ಲಿ ನಟಿಸಿದ್ದರು.
ಆ ಧಾರಾವಾಹಿಯಲ್ಲಿ ಇವರಿಬ್ಬರದ್ದು ಅಣ್ಣ-ತಂಗಿ ಪಾತ್ರ. ಆದರೆ ಅಲ್ಲಿಂದಲೇ ಅವರ ಪ್ರೇಮ ಚಿಗುರೊಡೆದಿತ್ತು. ಇನ್ನು ಈ ಜೋಡಿ ʼಸಹವಾಸ ದೋಷʼ ಎಂಬ ಕಿರುಚಿತ್ರದಲ್ಲೂ ಒಟ್ಟಿಗೆ ನಟಿಸಿದ್ದರು.
ಈ ಜೋಡಿಯ ಪ್ರೇಮಕಥೆ ತುಂಬಾ ಡಿಫರೆಂಟ್ ಆಗಿದೆ. ಇವರಿಬ್ಬರೂ ಕಿರುತೆರೆ ಮೂಲಕ ಪರಿಚಯವಾಗಿ ಸ್ನೇಹಿತರಾಗಿದ್ದರು. ಶಶಿಗೆ ಲಾವಣ್ಯ ಮೇಲೆ ಲವ್ ಆಗಿ ನಂತರ ಪ್ರಪೋಸ್ ಮಾಡಿದ್ದಾರೆ. ಅಷ್ಟೇ ಅಲ್ಲ, ಲಾವಣ್ಯ ಉತ್ತರಕ್ಕೆ ಕಾಯದ ಶಶಿ, ಅವರ ಪೋಷಕರಿಗೆ ವಿಷಯ ತಿಳಿಸಿ ಮದುವೆಗೆ ಒಪ್ಪಿಗೆ ಪಡೆದಿದ್ದಾರೆ. ಆದ್ರೆ ಕೊರೊನಾ ಕಾರಣದಿಂದ ಇವರಿಬ್ಬರ ಮದುವೆ ಕೊಂಚ ತಡವಾಗಿ ನಡೆದಿತ್ತು.
ಇನ್ನು ಮದುವೆಯಾದ ನಂತರ ಶಶಿ ಅವರಿಗೆ ಎರಡು ಕಂಡೀಷನ್ ಹಾಕಿದ್ದರಂತೆ ಲಾವಣ್ಯ. ಈ ಬಗ್ಗೆ ಸ್ವತಃ ಅವರೇ ಹೇಳಿದ್ದಾರೆ. ಜೊತೆಗೆ ಈ ಕಂಡೀಷನ್‌ಗೆ ಒಪ್ಪಿಕೊಂಡರೆ ಮಾತ್ರ ಮಕ್ಕಳು ಮಾಡಿಕೊಳ್ಳಲು ಒಕೆ.. ಇಲ್ಲಾಂದ್ರೆ ಇಲ್ಲ ಎಂದು ಹೇಳಿದ್ದರಂತೆ.
ಸಂದರ್ಶನ ನಡೆಯುವ ಸಮಯದಲ್ಲಿ, ಲಾವಣ್ಯ ಮತ್ತು ಶಶಿ ಇನ್ನೂ ಹನಿಮೂನ್‌ಗೆ ಹೋಗಿರಲಿಲ್ಲ. ಅಷ್ಟೇ ಅಲ್ಲ, ಅದಕ್ಕೂ ಮುನ್ನ ಎರಡು ಬಾರಿ ಪ್ಲಾನ್ ಕ್ಯಾನ್ಸಲ್ ಆಗಿತ್ತಂತೆ. ಇನ್ನು ಹನಿಮೂನ್‌ಗೆ ಮನಾಲಿ ಮತ್ತು ವಿದೇಶಕ್ಕೆ ಕರೆದುಕೊಂಡು ಹೋದ ನಂತರವೇ ಪೋಷಕರಾಗಿ ಬಡ್ತಿ ಪಡೆಯಲು ಸಾಧ್ಯ ಎಂದು ಲಾವಣ್ಯ ಕಂಡಿಷನ್ ಹಾಕಿದ್ರು ಅಂತ ಸ್ವತಃ ಅವರೇ ಹೇಳಿಕೊಂಡಿದ್ದಾರೆ.