ಅತಿದೊಡ್ಡ ರಾಜಯೋಗದಿಂದ 2024ರಲ್ಲಿ ಈ ರಾಶಿಯವರಷ್ಟು ಲಕ್ಕಿ ಭೂಮಿ ಮೇಲೆ ಯಾರೂ ಇರಲ್ಲ.. ಇವರು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತೆ!

Mon, 25 Dec 2023-10:42 pm,

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗುರು ಗ್ರಹವನ್ನು ಜ್ಞಾನ, ಬುದ್ಧಿವಂತಿಕೆ, ಶಿಕ್ಷಣ ಮತ್ತು ಧರ್ಮದ ಅಂಶವೆಂದು ಪರಿಗಣಿಸಲಾಗುತ್ತದೆ. ಧನು ರಾಶಿ ಮತ್ತು ಮೀನ ರಾಶಿಯ ಅಧಿಪತಿಯೂ ಗುರು ಎಂಬ ನಂಬಿಕೆ ಇದೆ.

2023ರ ಅಂತ್ಯದಲ್ಲಿ ಅಂದರೆ ಡಿಸೆಂಬರ್ ತಿಂಗಳಲ್ಲಿ ಶಶಯೋಗ, ರುಚಕ ಯೋಗ ಮತ್ತು ಮಾಲವ್ಯ ರಾಜಯೋಗಗಳು ರೂಪುಗೊಳ್ಳುತ್ತಿವೆ. ವೈದಿಕ ಶಾಸ್ತ್ರಗಳ ಪ್ರಕಾರ ಗುರು ಮಾರ್ಗಿಯಿಂದ ಗಜಲಕ್ಷ್ಮಿ ರಾಜಯೋಗ ಮತ್ತು ಕೇಂದ್ರ ತ್ರಿಕೋನ ರಾಜಯೋಗ ಸೃಷ್ಟಿಯಾಗಲಿದೆ. ಗಜಲಕ್ಷ್ಮಿ ರಾಜಯೋಗವು ರೂಪುಗೊಂಡಾಗ ಮನೆಗೆ ಸಂತೋಷ, ಶಾಂತಿ, ಸಮೃದ್ಧಿ, ಐಶ್ವರ್ಯ ಮತ್ತು ಸಮೃದ್ಧಿ ಬರುತ್ತದೆ ಎಂಬುದು ನಂಬಿಕೆ.

ಜೊತೆಗೆ ಜ್ಯೋತಿಷಿಗಳ ಪ್ರಕಾರ ಯಾವುದೇ ರಾಶಿಯಲ್ಲಿ ಗಜಲಕ್ಷ್ಮಿ ರಾಜಯೋಗವು ರೂಪುಗೊಂಡರೆ ಆ ರಾಶಿಯಲ್ಲಿ ಶನಿಯ ಸಾಡೇಸಾತಿ ಕೊನೆಗೊಳ್ಳುತ್ತದೆ. ಸಂಪತ್ತು, ಸಮೃದ್ಧಿ ಮತ್ತು ಐಶ್ವರ್ಯ ಹೆಚ್ಚಾಗುತ್ತದೆ.

ಮೇಷ ರಾಶಿ: ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮೇಷ ರಾಶಿಯ 5 ರಾಜಯೋಗಗಳು 2024ರ ಆರಂಭದಲ್ಲಿ ಅಪಾರ ಧನಲಾಭವನ್ನು ನೀಡಲಿದೆ. ವೃತ್ತಿ ಮತ್ತು ವ್ಯವಹಾರದಲ್ಲಿ ವಿಶೇಷವಾಗಿ ಲಾಭ ಪಡೆಯುತ್ತಾರೆ. ದಾಂಪತ್ಯ ಜೀವನದಲ್ಲಿ ಸಂತೋಷ ಇರುತ್ತದೆ. ಹೊಸ ವ್ಯಾಪಾರ ಆರಂಭಿಸುವ ಸಾಧ್ಯತೆ ಇದೆ.

ಕಟಕ ರಾಶಿ: ಗಜಲಕ್ಷ್ಮಿರಾಜಯೋಗ ರಚನೆಯಿಂದ ಕರ್ಕ ರಾಶಿಯವರಿಗೆ ಶುಭವಾಗಲಿದೆ. 2024 ವರ್ಷವು ಆರ್ಥಿಕ ಲಾಭವಾಗುವ ಸಾಧ್ಯತೆ ಇದೆ. ಅಲ್ಲದೆ, ಹಣದ ಹೂಡಿಕೆಯು ಲಾಭದಾಯಕವಾಗಿರುತ್ತದೆ. ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ.

ಸಿಂಹ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸಿಂಹ ರಾಶಿಯವರಿಗೆ ಗಜಲಕ್ಷ್ಮಿ ರಾಜಯೋಗವು ಮಂಗಳಕರವಾಗಿರುತ್ತದೆ. 2024ರಲ್ಲಿ ಇವರು ಮುಟ್ಟಿದ್ದೆಲ್ಲಾ ಬಂಗಾರವಾಗುತ್ತದೆ. ಅದೃಷ್ಟ ಬೆನ್ನಿಗೆ ಇರುತ್ತದೆ. ವ್ಯಾಪಾರದಲ್ಲಿ ಯಶಸ್ಸನ್ನು ಸಾಧಿಸುವಿರಿ.

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ) 

ZEENEWS TRENDING STORIES

By continuing to use the site, you agree to the use of cookies. You can find out more by Tapping this link