ಮಕರ ಸಂಕ್ರಾಂತಿಯಂದೇ ಅದ್ಭುತ ರಾಜಯೋಗಗಳು… ಈ ರಾಶಿಗಳಿಗೆ ಹಣ, ಕೀರ್ತಿ ಜೊತೆ ಸರ್ಕಾರಿ ನೌಕರಿ ಸಿಕ್ಕೇಸಿಗುತ್ತೆ!

Tue, 09 Jan 2024-11:13 pm,

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಜನಾದ ಸೂರ್ಯನು ಒಂದು ನಿರ್ದಿಷ್ಟ ಅವಧಿಯ ನಂತರ ರಾಶಿಗಳನ್ನು ಬದಲಾಯಿಸುತ್ತಾನೆ. ಇದನ್ನು ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಜನವರಿ 15, 2024 ರಂದು ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ.

ಮಕರ ರಾಶಿಗೆ ಸೂರ್ಯನ ಪ್ರವೇಶವನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಈ ವರ್ಷದ ಮಕರ ಸಂಕ್ರಾಂತಿ ಬಹಳ ವಿಶೇಷವಾಗಿದೆ, ಏಕೆಂದರೆ 77 ವರ್ಷಗಳ ನಂತರ ಈ ವರ್ಷ ರವಿಯೊಂದಿಗೆ ವರೀಯನ ಯೋಗವು ರೂಪುಗೊಳ್ಳುತ್ತಿದೆ. ಇದರೊಂದಿಗೆ 5 ವರ್ಷಗಳ ನಂತರ ಸೋಮವಾರದಂದೇ ಮಕರ ಸಂಕ್ರಾತಿ ಬರುತ್ತಿದೆ.

ಮಕರ ಸಂಕ್ರಾಂತಿಯ ದಿನದಂದು ಇಂತಹ ಯೋಗ ರೂಪುಗೊಳ್ಳುವ ಮೂಲಕ ಕೆಲ ರಾಶಿಯ ಜನರಿಗೆ ವಿಶೇಷ ಪ್ರಯೋಜನಗಳು ಸಿಗಲಿವೆ.

ಮೇಷ ರಾಶಿ: ಮಕರ ಸಂಕ್ರಾಂತಿಯು ಮೇಷ ರಾಶಿಯ ಜನರು ಕೈಗೊಳ್ಳುವ ಪ್ರತಿಯೊಂದು ಕೆಲಸದಲ್ಲೂ ಯಶಸ್ಸಿನ ಜೊತೆಗೆ ಆರ್ಥಿಕ ಲಾಭವನ್ನು ನೀಡಲಿದೆ. ಉದ್ಯೋಗಿಗಳು ತಮ್ಮ ಶ್ರಮದ ಫಲವನ್ನು ಪಡೆಯುತ್ತಾರೆ. ಇದರೊಂದಿಗೆ ಸರ್ಕಾರಿ ಉದ್ಯೋಗಾವಕಾಶಗಳು ಲಭ್ಯವಾಗಬಹುದು. ವಿದೇಶದಲ್ಲಿ ಕೆಲಸ ಮಾಡುವ ನಿಮ್ಮ ಕನಸು ಕೂಡ ನನಸಾಗಬಹುದು.

ಸಿಂಹ ರಾಶಿ: ಸೂರ್ಯ ರಾಶಿ ಮಕರ ಸಂಕ್ರಾಂತಿಯಂದು ಸಿಂಹ ರಾಶಿಯವರು ವಿಶೇಷ ಆಶೀರ್ವಾದವನ್ನು ಪಡೆಯುತ್ತಾರೆ. ವೃತ್ತಿ ಕ್ಷೇತ್ರದಲ್ಲಿ  ಅಪಾರ ಯಶಸ್ಸಿನೊಂದಿಗೆ ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ. ವ್ಯಾಪಾರದಲ್ಲಿಯೂ ಲಾಭ ಬರುವ ಸಾಧ್ಯತೆಗಳಿವೆ.

ಮೀನ ರಾಶಿ: ಮಕರ ಸಂಕ್ರಾಂತಿಯು ಮೀನ ರಾಶಿಯ ಜನರಿಗೆ ಅದ್ಭುತ ಜೀವನವನ್ನು ನೀಡಲಿದೆ. ವ್ಯವಹಾರದ ಬಗ್ಗೆ ಮಾತನಾಡುವುದಾದರೆ, ಹಣದ ವಿಷಯದಲ್ಲಿ ಸಾಕಷ್ಟು ಲಾಭವನ್ನು ಪಡೆಯುತ್ತೀರಿ. ಉತ್ತಮ ಆರ್ಥಿಕ ಲಾಭ ದೊರೆಯಲಿದೆ.

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ) 

ZEENEWS TRENDING STORIES

By continuing to use the site, you agree to the use of cookies. You can find out more by Tapping this link