RCBಗೆ ಕಪ್ ಗೆಲ್ಲಿಸಿಕೊಡಲೆಂದು ತನ್ನ ಮದ್ವೆಯನ್ನೇ ಮುಂದೂಡಿದ ಸ್ಟಾರ್ ಬ್ಯಾಟ್ಸ್’ಮನ್! ಯಾರು ಗೊತ್ತಾ ಆ ಛಲಗಾರ?
ಪ್ರಸ್ತುತ ಐಪಿಎಲ್ 17ನೇ ಸೀಸನ್’ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ಲೇ ಆಫ್ ಪ್ರವೇಶಿಸಿದೆ.
ಕೇವಲ ಒಂದು ಶೇಕಡ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಫಾಫ್ ಡು ಪ್ಲೆಸಿಸ್ ನೇತೃತ್ವದ ತಂಡ, ಸದ್ಯ ಪ್ಲೇಆಫ್ ಎಂಟ್ರಿ ಪಡೆದಿದೆ.
ಈ ಜರ್ನಿಯಲ್ಲಿ ಪ್ರತಿಯೊಬ್ಬ ಆಟಗಾರನೂ ಸಹ ತಮ್ಮ ಅಮೂಲ್ಯ ಕೊಡುಗೆ ನೀಡಿರುವುದು ಎಲ್ಲರಿಗೂ ತಿಳಿದ ಸಂಗತಿ.
ಆದರೆ ಈ ಆಟಗಾರ ಮಾತ್ರ ತಮ್ಮ ಜೀವನವನ್ನೇ ಮುಡಿಪಾಗಿಟ್ಟು, ಆರ್ ಸಿ ಬಿ ಚೊಚ್ಚಲ ಕಪ್ ಗೆಲ್ಲಲಿ ಎಂಬ ಆಶಯದಿಂದ ತನ್ನ ಮದುವೆಯನ್ನೇ ಮುಂದೂಡಿ ತಂಡಕ್ಕಾಗಿ ಆಡುತ್ತಿದ್ದಾನೆ.
ಅಷ್ಟಕ್ಕೂ ಆತ ಬೇರಾರು ಅಲ್ಲ, ರಜತ್ ಪಾಟೀದಾರ್. ರಜತ್ ಹುಟ್ಟಿದ್ದು ಜೂನ್ 01, 1993ರಲ್ಲಿ. ಮಧ್ಯಪ್ರದೇಶದಲ್ಲಿ ಜನಿಸಿದ ಇವರು, ಬಲಗೈ ಬ್ಯಾಟರ್. ದೇಶಿ ಕ್ರಿಕೆಟ್‌ನಲ್ಲಿ ಮಧ್ಯಪ್ರದೇಶ ಹಾಗೂ ಐಪಿಎಲ್’ನಲ್ಲಿ ಆರ್ ಸಿ ಬಿ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಅಂದಹಾಗೆ ರಜತ್ ಪಾಟೀದಾರ್ ಐಪಿಎಲ್ ಪ್ಲೇ ಆಫ್’ನಲ್ಲಿ ಶತಕ ಸಿಡಿಸಿದ ಭಾರತದ ಮೊದಲ ಅನ್‌ಕ್ಯಾಪ್ಡ್ ಆಟಗಾರ.
2022ರ ಐಪಿಎಲ್ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದ ರಜತ್ ಪಾಟೀದಾರ್, ಅದೇ ವರ್ಷ ಮೇ 09ರಂದು ರತ್ನಂ ಎಂಬಾಕೆಯನ್ನು ವರಿಸಲು ನಿರ್ಧರಿಸಿದ್ದರು. ಆದರೆ RCBಯಿಂದ ದಿಢೀರ್ ಕರೆ ಬಂದ ಹಿನ್ನೆಲೆಯಲ್ಲಿ ಮದುವೆಯನ್ನೇ ಮುಂದೂಡಿದ್ದಾರೆ.
ಇನ್ನು ಈ ಸೀಸನ್’ನಲ್ಲಿ ಆರ್ ಸಿ ಬಿ ಪ್ಲೇಆಫ್ ಪ್ರವೇಶಿಸಲು ರಜತ್ ಪ್ರಮುಖ ಕಾರಣಕರ್ತ.