ಮೂರು ರಾಶಿಗಳಲ್ಲಿ ಅಪರೂಪದ ರಾಜಯೋಗ! ಧನ ಧಾನ್ಯ ಹರಿಸುವಳು ಧನ ಲಕ್ಷ್ಮೀ, ಸಿರಿ ಸಂಪತ್ತಿಗೆ ಕೊರತೆಯಾಗದಂತೆ ಕಾಯುವಳು ಮಹಾಲಕ್ಷ್ಮೀ

Wed, 02 Aug 2023-9:40 am,

ವೈದಿಕ ಜ್ಯೋತಿಷ್ಯದಲ್ಲಿನ ಐದು ಪ್ರಯೋಜನಕಾರಿ ಯೋಗಗಳಲ್ಲಿ ಒಂದು ರುಚಕ್ ಯೋಗ. ಈ ಯೋಗವು ಪಂಚ ಮಹಾಪುರುಷ ಯೋಗದ ಒಂದು ಅಂಶವಾಗಿದೆ. ಮಂಗಳ ಗ್ರಹವು ಮೇಷ, ವೃಶ್ಚಿಕ ಅಥವಾ ಮಕರ ರಾಶಿಯಲ್ಲಿದ್ದಾಗ ಮತ್ತು ಚಂದ್ರನಿಂದ ಮೊದಲ, ನಾಲ್ಕನೇ, ಏಳನೇ ಅಥವಾ ಹತ್ತನೇ ಮನೆಯಲ್ಲಿದ್ದಾಗ, ಈ ಯೋಗವು ರೂಪುಗೊಳ್ಳುತ್ತದೆ. ಈ ಯೋಗವು ವ್ಯಕ್ತಿಯ ಜೀವನದ ಮೇಲೆ ಅನುಕೂಲಕರ ಪರಿಣಾಮವನ್ನು ಬೀರುತ್ತದೆ.  

ಯಾರ ಜಾತಕದಲ್ಲಿ ಈ ಯೋಗ ಇರುತ್ತದೆಯೋ ಅವರು ಕ್ರೀಡಾಪಟುಗಳು,   ಉನ್ನತ ಶ್ರೇಣಿಯ ಮಿಲಿಟರಿ ಅಥವಾ ಆಡಳಿತ ಸಿಬ್ಬಂದಿ ಹೀಗೆ ಯಾವುದಾದರೊಂದು ಉನ್ನತ ಸ್ಥಾನಕ್ಕೆ ಏರುತ್ತಾರೆ. ಅವರ ಜಾತಕದಲ್ಲಿ ರೂಪುಗೊಂಡ ರುಚಕ್ ರಾಜಯೋಗದಿಂದ ಅಗಾಧ ಯಶಸ್ಸು ಪಡೆಯುತ್ತಾರೆ.

ಈ ರಾಜಯೋಗವು ವೃಷಭ ರಾಶಿಯವರಿಗೆ ಉತ್ತಮ ಯಶಸ್ಸನ್ನು ತರುತ್ತದೆ.  ಹಣಕಾಸಿನ ಲಾಭವಾಗುವುದು. ವೈಭವ ಹೆಚ್ಚಾಗಿ ಭೌತಿಕ ಸೌಕರ್ಯಗಳನ್ನು ಆನಂದಿಸುವುದು ಸಾಧ್ಯವಾಗುತ್ತದೆ.  ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ಮತ್ತು ಸಮೃದ್ಧಿಗೆ ಕಾರಣವಾಗುತ್ತದೆ. ವೃಷಭ ರಾಶಿಯವರು ರಾಜಯೋಗದ ಪ್ರಭಾವದ ಸಮಯದಲ್ಲಿ ಧನಾತ್ಮಕ ಫಲಿತಾಂಶಗಳು, ಆರ್ಥಿಕ ಸ್ಥಿರತೆ ಮತ್ತು ವರ್ಧಿತ ಖ್ಯಾತಿಯನ್ನು ಪಡೆಯುತ್ತಾರೆ.

ಸಿಂಹ ರಾಶಿಯವರ ಬಾಳಲ್ಲಿ ಆರ್ಥಿಕ ಯಶಸ್ಸು ಮತ್ತು ಸಂಭಾವ್ಯ ವಿತ್ತೀಯ ಸಂಪತ್ತು ಒದಗಿ ಬರುವುದು. ಇದು ಹಣಕಾಸಿನ ಸಾಧನೆ, ವೃತ್ತಿಪರ ಪ್ರಗತಿ ಮತ್ತು ಸಾಮಾಜಿಕ ಪ್ರಗತಿಯ ನಿರೀಕ್ಷೆಗಳೊಂದಿಗೆ ಸಿಂಹ ರಾಶಿಯವರಿಗೆ ಅನುಕೂಲಕರ ಹಂತವಾಗಿದೆ.

ಮಕರ ರಾಶಿಯವರು ಸಮೃದ್ದಿ ಕಾಣುವ ಕಾಲವಿದು.  ಚಿಂತನಶೀಲತೆ ಮತ್ತು ನಾಯಕತ್ವದ ಸಾಮರ್ಥ್ಯಗಳು ಹೆಚ್ಚಾದಂತೆ ತಮ್ಮ ವೃತ್ತಿಜೀವನದಲ್ಲಿ ಮುನ್ನಡೆಯುತ್ತಾರೆ. ಆರ್ಥಿಕವಾಗಿಯೂ ಸಮೃದ್ಧರಾಗಿರುತ್ತಾರೆ. ಕಠಿಣ ಪರಿಶ್ರಮವು ಫಲ ನೀಡುತ್ತದೆ.  

ಸೂಚನೆ:  ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link