ಅಮೃತಧಾರೆ `ಗೌತಮ್ ` ರಾಜೇಶ್ ನಟರಂಗ ಪುತ್ರಿ ಕೂಡಾ ಹೆಸರಾಂತ ನಟಿ ! ಬಾಲಿವುಡ್ ನಲ್ಲೂ ಮಿಂಚು ಹರಿಸಿದ ಚೆಂದುಳ್ಳಿ !

Tue, 05 Mar 2024-5:21 pm,

ರಾಜೇಶ್ ನಟರಂಗ ಕನ್ನಡ ಚಿತ್ರರಂಗ ಕಂಡಿರುವ ಅದ್ಭುತ ಕಲಾವಿದ. ಕಿರು ತೆರೆ ಮಾತ್ರವಲ್ಲ ಬೆಳ್ಳಿ ತೆರೆಯಲ್ಲಿಯೂ ಕಮಾಲ್ ಮಾಡಿದ ಪ್ರತಿಭಾವಂತ. 

 ಮಾಯಾಮೃಗ ಧಾರಾವಾಹಿ ಮೂಲಕ ಕನ್ನಡಿಗರ ಮನ್ ಗೆದ್ದ ರಾಜೇಶ್ ಅನೇಕ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಟಪೋರಿ, ಆನಂದ ನಿಲಯ, ಮೊಗ್ಗಿನ ಮನಸು, ಜಸ್ಟ್ ಮಾತ್ ಮಾತಲ್ಲಿ, ಆಪ್ತರಕ್ಷಕ, ನಾನು ನನ್ನ ಕನಸು, ಆರಕ್ಷಕ, ಕಡ್ಡಿಪುಡಿ, ಗಜಕೇಸರಿ, ಕಿಲ್ಲಿಂಗ್ ವೀರಪ್ಪನ್, ಹ್ಯಾಪಿ ಬರ್ತಡೇ, ಕವಚ, ಫಾರ್ಚುನರ್, ಆಯುಷ್ಮಾನ್ ಭವ, ಕಟ್ಟು ಕಥೆ, ಆಪರೇಷನ್ ಅಲಮೇಲಮ್ಮ, ಕಾಫಿ ತೋಟ, ನೂರೊಂದು ನೆನಪು  ಇವರೂ ನಟಿಸಿರುವ ಕೆಲವು ಸಿನಿಮಾ. 

ಇದೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ನಟಿಸಿ ಗೌತಮ್ ಪಾತ್ರದ ಮೂಲಕ ಮತ್ತೆ ಕರುನಾಡಿನ ಮನೆ ಮನಗಳಲ್ಲಿ ಮಿಂಚುತ್ತಿದ್ದಾರೆ. 

ರಾಜೇಶ್ ಹೇಗೆ ಅದ್ಭುತ ಕಲಾವಿದನೋ, ಅವರ ಪುತ್ರಿ ಕೂಡಾ ಹಾಗೆಯೇ ನಟನೆಯಲ್ಲಿ ಎತ್ತಿದ ಕೈ. ಸಿನಿಮಾದಲ್ಲಿ ಫುಲ್ ಬ್ಯುಸಿ.

ಇವರ ಹೆಸರು ಧ್ವನಿ. ಹೌದು, ಧ್ವನಿ  ಬಾಲಿವುಡ್ ನಲ್ಲಿಯೂ ಮಿಂಚಿರುವ ಪ್ರತಿಭೆ. ಬಿಯಾಂಡ್ ದಿ ಕ್ಲೌಡ್ ಎನ್ನುವ ಬಾಲಿವುಡ್ ಸಿನಿಮಾದಲ್ಲಿ ಬಾಲನಟಿಯಾಗಿ ಎಲ್ಲರ ಮನಸೂರೆಗೊಳಿಸಿರುವ ಚೆಲುವೆ.   

ಇನ್ನು ಪಾಚುವುಂ ಅದ್ಭುತ ವಿಲಕ್ಕುಂ ಮಲಯಾಳಂ ಚಿತ್ರದಲ್ಲಿನ ತನ್ನ ಅಮೋಘ ಅಭಿನಯದಿಂದಾಗಿ ಎಲ್ಲರನ್ನೂ ನಿಬ್ಬೆರಗಾಗಿಸಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link