ಇವರೇ ನೋಡಿ ಅಮೃತಧಾರೆ `ಗೌತಮ್ ` ರಾಜೇಶ್ ನಟರಂಗ ಪತ್ನಿ ಮತ್ತು ಪುತ್ರಿ ! ಮಗಳು ಬಹು ಭಾಷಾ ನಟಿ !

Fri, 08 Dec 2023-3:40 pm,

 ರಾಜೇಶ್ ನಟರಂಗ  ಯಾರಿಗೆ ತಾನೇ ಗೊತ್ತಿಲ್ಲ, ಕನ್ನಡ ಚಿತ್ರರಂಗದಲ್ಲಿ ಬಹಳ ಹೆಸರು ಮಾಡಿದ ಕಲಾವಿದ.  

ಕನ್ನಡ ಸಿನಿಮಾ, ಧಾರವಾಹಿಗಳಲ್ಲಿ ನಟಿಸಿದ್ದಾರೆ. ಮಾಯಾ ಮೃಗ ಧಾರಾವಾಹಿ ಮೂಲಕ ಕರ್ನಾಟಕದ ಮನೆ ಮನಗಳನ್ನು ಗೆದ್ದಿದ್ದಾರೆ.   

ಟಪೋರಿ, ಆನಂದ ನಿಲಯ, ಮೊಗ್ಗಿನ ಮನಸು, ಜಸ್ಟ್ ಮಾತ್ ಮಾತಲ್ಲಿ, ಆಪ್ತರಕ್ಷಕ, ನಾನು ನನ್ನ ಕನಸು, ಆರಕ್ಷಕ, ಕಡ್ಡಿಪುಡಿ, ಗಜಕೇಸರಿ, ಕಿಲ್ಲಿಂಗ್ ವೀರಪ್ಪನ್, ಹ್ಯಾಪಿ ಬರ್ತಡೇ, ಕವಚ, ಫಾರ್ಚುನರ್, ಆಯುಷ್ಮಾನ್ ಭವ, ಕಟ್ಟು ಕಥೆ, ಆಪರೇಷನ್ ಅಲಮೇಲಮ್ಮ, ಕಾಫಿ ತೋಟ, ನೂರೊಂದು ನೆನಪು  ಚಿತ್ರಗಳಲ್ಲಿ ನಟಿಸಿದ್ದಾರೆ.   

ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆಯ ಗೌತಮ್ ಅಲಿಯಾಸ್ ಗುಂಡಪ್ಪನಾಗಿ ಎಲ್ಲರ ಮನ ಗೆದ್ದಿದ್ದಾರೆ.   

ರಾಜೇಶ್ ಅವರಿಗೆ ಒಬ್ಬಳು ಮಗಳಿದ್ದಾಳೆ. ಹೆಸರು ಧ್ವನಿ. ಅವರೂ ಕೂಡಾ ಅದ್ಭುತ ಕಲಾವಿದೆ. ಅಪ್ಪನ ಹಾಗೆ ಮಗಳು ಕೂಡಾ ಸಿನಿಮಾ ರಂಗದಲ್ಲಿ ಮಿಂಚುತ್ತಿದ್ದಾರೆ. 

ಬಿಯಾಂಡ್ ದಿ ಕ್ಲೌಡ್ ಎನ್ನುವ ಬಾಲಿವುಡ್ ಚಿತ್ರದಲ್ಲಿ ಬಾಲನಟಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.   

ಪಾಚುವುಂ ಅದ್ಭುತ ವಿಲಕ್ಕುಂ ಮಲಯಾಳಂ ಚಿತ್ರದಲ್ಲಿ ನಟಿಸಿ ತನ್ನ ಅದ್ಭುತ ಪ್ರತಿಭೆಯನ್ನು ತೋರಿಸಿದ್ದಾರೆ.   

ಒಟ್ಟಿನಲ್ಲಿ ಮುದ್ದಿನ ಮಡದಿ ಮತ್ತು ಅಕ್ಕರೆಯ ಪುತ್ರಿಯೊಂದಿನ ಮುದ್ದಾದ ಸಂಸಾರ ರಾಜೇಶ್  ನಟರಂಗ ಅವರದ್ದು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link