ಈ ಸ್ಟಾರ್ ಹೀರೋಯಿನ್ ಅನ್ನು ಹುಚ್ಚರಂತೆ ಪ್ರೀತಿಸಿದ್ದರಂತೆ ಸೂಪರ್ಸ್ಟಾರ್ ರಜನಿಕಾಂತ್! ಮದುವೆ ಪ್ರಸ್ತಾಪಕ್ಕೆ ಹೋದಾಗ ಆಗಿದ್ದೇನು ಗೊತ್ತಾ?
Rajinikanth love story: ನಟ ರಜನಿಕಾಂತ್ ಅವರಿಗೆ ಶ್ರೀದೇವಿ ಅವರಿಗೆ ಇದ್ಪ್ರೀತಿಯ ಬಗ್ಗೆ ಕೇವಲ ಕೆಲವರಿಗೆಷ್ಟೆ ಗೊತ್ತಿದೆ. ನಟ ಬಾಲಿವುಡ್ ಬ್ಯೂಟಿಯನ್ನು ಹುಚ್ಚನಂತೆ ಪ್ರೀತಿಸಿದ್ರು ಅಷ್ಟೆ ಅಲ್ಲ ನಟಿಯನ್ನು ಮದುವೆ ಮಾಡಿ ಕೊಡುವಂತೆ ಅವರ ತಾಯಿ ಬಳಿ ಸಹ ಕೇಳಿಕೊಂಡಿದ್ದರಂತೆ.
ಕಾಲಿವುಡ್ ಇಂಡಸ್ಟರಿಯಲ್ಲಿ ಇಂದು ರಜನಿಕಾಂತ್ ಆಗಿ ಸದ್ದು ಮಾಡುತ್ತಿರುವ ತಲೈವಾ ಮೂಲತಃ ಕರ್ನಾಟಕದವು. ಬಾಲ್ಯದಿಂದಲೂ ನಟನಾಗಬೇಕೆಂಬ ಕನಸ್ಸಿನಿಂದ ಸಿನಿಮಾ ಇಂಡಸ್ಟರಿಗೆ ಕಾಲಿಟ್ಟಿದ್ದ ನಟ, ಶಾಲೆ ಮುಗಿಸಿ ಬಸ್ ಕಂಡಕ್ಟರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದರು.
ಹೀಗೆ ಬಸ್ ಕಂಡಕ್ಟರ್ ಆಗಿ ಅಷ್ಟೆ ಅಲ್ಲದೆ ಹಲವು ಕೆಲಸಗಳಲ್ಲಿ ಕೆಲಸ ಮಾಡಿದ್ದ ನಟ ರಜನಿಕಾಂತ್ ಅವರಿಗೆ, ಸಿನಿಮಾ ಕೈ ಹಿಡಿದಿತ್ತು, ಅವರು ನಟಿಸಿದ್ದ ಮೊದಲನೆ ಸಿನಿಮಾದಲ್ಲಿಯೇ ನಟ ಸಕ್ಸಸ್ ಕಂಡಿದ್ದರು.
ನಟ ರಜನಿಕಾಂತ್ ಹಲವಾರು ನಟಿಯರೊಂದಿಗೆ ತೆರೆ ಹಂಚಿಕೊಂಡು ಸೈ ಎನಿಸಿಕೊಂಡಿದ್ದಾರೆ, ಅದರಲ್ಲೂ ನಟಿ ಶ್ರೀದೇವಿ ಅವರ ಜೊತೆ ರಜನಿಕಾಂತ್ ಅವರ ಕೆಮಿಸ್ಟ್ರಿ ಅಮತೂ ಅಭಿಮಾನಿಗಲ ಮನಸ್ಸಿನಲ್ಲಿ ವಿಶೇಷವಾಗಿ ನೆಲೆಯೂರಿತ್ತು.
ನಟ ರಜನಿಕಾಂತ್ ಹಾಗೂ ಶ್ರೀದೇವಿ ಜೊತೆಯಾಗಿ ಹಿಂದಿ ತಮಿಳು ತೆಲುಗು ಸೇರಿದಂತೆ 19 ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಇಬ್ಬರ ಸಂಬಂಧ ತುಂಬಾ ವಿಶೇಷವಾಗಿತ್ತು, ನಟಿಯ ತಾಯಿಯ ಜೊತೆ ಸೂಪರ್ಸ್ಟಾರ್ ಒಳ್ಳೆ ಆತ್ಮೀಯತೆಯನ್ನು ಕೂಡ ಹೊಂದಿದ್ದರು.
ಶ್ರೀದೇವಿಯವರು ರಜನಿಕಾಂತ್ ಅವರಿಗಿಂತಲೂ 13 ವರ್ಷ ಚಿಕ್ಕವರಾಗಿದ್ದರೂ, ನಟನಿಗೆ ನಟಿಯ ಕುರಿತು ವಿಶೇಷವಾದ ಕಾಳಜಿ ಇತ್ತು, ನಟಿಯನ್ನು ಮದುವೆಯಾಗುವುದಾಗಿ ಸೂಪರ್ಸ್ಟಾರ್ ಶ್ರೀದೇವಿಯವರ ತಾಯಿಯ ಬಳಿ ಪ್ರಸ್ತಾಪ ಮುಂದಿಟ್ಟುದ್ದರು ಎಂದು ಬಾಲಚಂದರ್ ಅವರು ಸಂದರ್ಶನ ಒಂದರಲ್ಲಿ ಹೇಲಿಕೊಂಡಿದ್ದಾರೆ.
ನಟಿ ಶ್ರೀದೇವಿ ಅವರಿಗೆ ನಟನ ಮೇಲೆ ಯಾವ ರೀತಿಯ ಅನಿಸಿಕೆ ಇತ್ತು ಎಂಬುದು ಗೊತ್ತಿಲ್ಲ ಆದರೆ, ನಟ ಮಾತ್ರ ಆಕೆಯನ್ನು ಹುಚ್ಚನಂತೆ ಪ್ರೀತಿಸುತ್ತಿದ್ದರಂತೆ.
ಹೀಗೆ ರಜನಿಕಾಂತ್ ಅವರು ಶ್ರೀದೇವಿ ಅವರ ಮನೆಗೆ ಮದುವೆ ಪ್ರಸ್ತಾಪ ಮಾಡಲೆಂದು ಹೋದಾಗ ತಕ್ಷಣ ಅವರ ಮನೆಯಲ್ಲಿ ವಿದ್ಯುತ್ ಕಡಿತವಾಗಿತ್ತಂತೆ, ಇದನ್ನು ಅಪಶಕುನವೆಂದು ತಿಳಿದು ನಟ ರಜನಿಕಾಂತ್ ಮದುವೆ ಪ್ರಸ್ತಾಪ ಮಾಡದೆ ಮನೆಗೆ ವಾಪಸ್ ಆಗಿದ್ದರಂತೆ. ಹೀಗೆ ಒಂದು ವೇಳೆ ನಟ ಅಂದು ಮದುವೆ ಪ್ರಸ್ತಾಪವನ್ನು ಮುಂದಿಟ್ಟಿದ್ದರೆ, ನಟಿ ಹಾಗೂ ರಜನಿಕಾಂತ್ ಅವರು ಮದುವೆಯಾಗುತ್ತಿದ್ದರೇನೋ. ವಿಧಿಯೇ ಅವರ ಬದುಕಲ್ಲಿ ಅವರ ಪ್ರೇಮಕಥೆಯಲ್ಲಿ ಇಂತಹದ್ದೊಂದು ಆಟವಾಡಿ ಇವರಿಬ್ಬರನ್ನು ದೂರ ಮಾಡಿಬಿಟ್ಟಿತ್ತೇನೋ ಅನಿಸುತ್ತದೆ.