ರಾಖಿ ಸಾವಂತ್ʼಗೆ ಇದ್ದಕ್ಕಿದ್ದಂತೆ ಆಗಿದ್ದೇನು? ರಾತ್ರೋ ರಾತ್ರಿ ಆಸ್ಪತ್ರೆಗೆ ದಾಖಲಾದ್ರಾ!!

Wed, 15 May 2024-10:58 am,

ಕಿರುತೆರೆ ನಟಿ ಹಾಗೂ ‘ಬಿಗ್ ಬಾಸ್’ ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದ ರಾಖಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗುತ್ತಿದೆ. 

ರಾಖಿ ಗಂಭೀರ ಹೃದಯ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬ ವಿಚಾರ ವೈರಲ್‌ ಆಗಿದೆ. ಈ ಸುದ್ದಿ ಅಭಿಮಾನಿಗಳನ್ನು ಬೆಚ್ಚಿ ಬೀಳಿಸಿದೆ.

ಆಸ್ಪತ್ರೆಯಲ್ಲಿ ಬೆಡ್‌ ಮೇಲೆ ರಾಖಿ ಸಾವಂತ್ ಮಲಗಿರುವ ಕೆಲವು ಫೋಟೋಗಳು ವೈರಲ್‌ ಆಗಿವೆ. ರಾಖಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಹಾಸಿಗೆಯ ಮೇಲೆ ಮಲಗಿರುವ ಫೋಟೋ ಇದಾಗಿದೆ. 

ಒಂದು ಬೆರಳಿಗೆ ಆಕ್ಸಿಮೀಟರ್ ಅನ್ನು ಜೋಡಿಸಲಾಗಿದೆ ಮತ್ತು ಇನ್ನೊಂದು ಕೈಗೆ ಸಲೈನ್‌ ಹಚ್ಚಿದ್ದಾರೆ. ಒಂದು ಚಿತ್ರದಲ್ಲಿ ನರ್ಸ್ ಅವರ ಬಿಪಿ  ಪರೀಕ್ಷಿಸುತ್ತಿದ್ದಾರೆ.

ಈ ಚಿತ್ರಗಳನ್ನು ನೋಡಿದ ನಂತರ ಎಲ್ಲರೂ ರಾಖಿ ಸಾವಂತ್‌ ಆರೋಗ್ಯದ ಬಗ್ಗೆ ಚಿಂತಿತರಾಗಿದ್ದಾರೆ. ರಾಖಿಗೆ ಹೃದಯ ಸಂಬಂಧಿ ಸಮಸ್ಯೆಯಿದ್ದು, ಈ ಹಿನ್ನೆಲೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗ್ತಿದೆ. 

ರಾಖಿ ಸಾವಂತ್‌ ಬೇಗ ಗುಣಮುಖರಾಗಲೆಂದು ಅವರ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಅದೇ ಸಮಯದಲ್ಲಿ, ಕೆಲವು ಬಳಕೆದಾರರು ಇದನ್ನು ಗಿಮಿಕ್ ಎಂದು ಕರೆಯುತ್ತಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link