181 ವರ್ಷಗಳ ಬಳಿಕ ರಕ್ಷಾಬಂಧನದಂದೇ ಅದ್ಭುತ ರಾಜಯೋಗ: ಈ 3 ರಾಶಿಗೆ ಸ್ವರ್ಣಕಾಲ ಶುರು! ಧನಸಂಪತ್ತು, ಕೀರ್ತಿ, ಯಶಸ್ಸು ಸಮೇತ ಸಕಲೈಶ್ವರ್ಯ ಪ್ರಾಪ್ತಿ
ರಕ್ಷಾ ಬಂಧನ ಹಬ್ಬವನ್ನು ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಅಂದಹಾಗೆ ಈ ಬಾರಿಯ ರಕ್ಷಾ ಬಂಧನದಂದು 181 ವರ್ಷಗಳ ನಂತರ ಏಳು ಯೋಗಗಳು ರೂಪುಗೊಳ್ಳುತ್ತಿವೆ. ಇನ್ನು ಈ ಯೋಗಗಳಿಂದಾಗಿ ಈ ಅವಧಿಯಲ್ಲಿ ಮಾಡುವ ಎಲ್ಲಾ ಶುಭ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ.
ಈ ಬಾರಿ ರಕ್ಷಾ ಬಂಧನದ ಹಬ್ಬವನ್ನು ಏಳು ಮಂಗಳಕರ ಯೋಗಗಳಲ್ಲಿ ಆಚರಿಸಲಾಗುತ್ತದೆ. ಜ್ಯೋತಿಷಿಗಳ ಪ್ರಕಾರ, ರಕ್ಷಾ ಸೂತ್ರವನ್ನು ಕಟ್ಟಲು ಸೂಕ್ತ ಆಗಸ್ಟ್ 19 ರಂದು ಮಧ್ಯಾಹ್ನ 1:30 ರ ನಂತರ ಶುಭಸಮಯವಿದೆ. ಇನ್ನು ಅಗತ್ಯಬಿದ್ದಲ್ಲಿ ಸಹೋದರಿಯರು ಬೆಳಿಗ್ಗೆ 9.50 ರಿಂದ 10.50 ರ ಸುಮಾರಿಗೆ ಸಹೋದರನ ಮಣಿಕಟ್ಟಿನ ಮೇಲೆ ರಾಖಿ ಕಟ್ಟಬಹುದು.
ಇನ್ನು ಈ ಶುಭದಿನದ ಅದೃಷ್ಟಶಾಲಿ ರಾಶಿಗಳು ಯಾವುವು ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ಈ ಮೂರು ರಾಶಿಗಳಿಗೆ 181 ವರ್ಷಗಳ ಬಳಿಕ ಆಗಮಿಸಿರುವ ಸಪ್ತ ಮಂಗಳ ಯೋಗಗಳು ಭಾರೀ ಪ್ರಯೋಜನವನ್ನು ತರಲಿದೆ ಎಂಬುದು ನಂಬಿಕೆ.
ಈ ಬಾರಿಯ ರಕ್ಷಾಬಂಧನ ದಿನವು ಮೇಷ ರಾಶಿಯವರಿಗೆ ಬಹಳ ವಿಶೇಷವಾಗಿರುತ್ತದೆ. ಈ ರಾಶಿಯ ವಿವಾಹಿತರಿಗೆ ಸಂತಾನ ಸುಖ ಸಿಗುತ್ತದೆ. ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಸಾಧಿಸುವ ಅನೇಕ ಅವಕಾಶಗಳಿವೆ. ಸಹೋದರ ಸಹೋದರಿಯರ ನಡುವಿನ ಬಾಂಧವ್ಯ ಮತ್ತಷ್ಟು ಹಿಗ್ಗಲಿದೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಆರೋಗ್ಯವೂ ಚೆನ್ನಾಗಿರುತ್ತದೆ. ಈ ರಾಶಿಯವರಿಗೆ ಶನಿದೇವನ ವಿಶೇಷ ಆಶೀರ್ವಾದ ಇರುತ್ತದೆ.
ಧನು ರಾಶಿಯ ಒಂಬತ್ತನೇ ಮನೆಯಲ್ಲಿ ರಾಜಯೋಗವು ರೂಪುಗೊಳ್ಳುತ್ತಿದೆ. ಹೀಗಾಗಿ ಈ ಜನರು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ವಿದೇಶಿ ಮೂಲಗಳಿಂದ ಸಾಕಷ್ಟು ಹಣವನ್ನು ಗಳಿಸಬಹುದು. ಈ ಹಬ್ಬವು ಉದ್ಯೋಗಿಗಳಿಗೆ ಬಹಳ ಅದೃಷ್ಟವೆಂದು ಸಾಬೀತುಪಡಿಸಬಹುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ. ಆರೋಗ್ಯವೂ ಉತ್ತಮವಾಗಿರುತ್ತದೆ.
ಕುಂಭ ರಾಶಿಯ ಜನರು ಭೌತಿಕ ಸಂತೋಷವನ್ನು ಪಡೆಯುತ್ತಾರೆ. ರಕ್ಷಾಬಂಧನದ ದಿನದಂದು ರೂಪುಗೊಂಡ ರಾಜಯೋಗವು ಈ ರಾಶಿಯ ಜನರ ಜೀವನದಲ್ಲಿರುವ ಸವಾಲನ್ನು ತೊಡೆದುಹಾಕಬಹುದು. ಪ್ರತಿ ಕೆಲಸದಲ್ಲೂ ಯಶಸ್ವಿಯಾಗುತ್ತೀರಿ. ಜೊತೆಗೆ ಅಪಾರ ಯಶಸ್ಸನ್ನು ಪಡೆಯಬಹುದು.
ಸೂಚನೆ: ಈ ಲೇಖನವು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ, ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ನಿಮಗೆ ನೀಡಲಾಗಿದೆ. Zee Kannada News ಇದನ್ನು ಖಚಿತಪಡಿಸುವುದಿಲ್ಲ. ಇದು ಸಂಪೂರ್ಣ ಸತ್ಯ ಎಂದು ಹೇಳಲು ಯಾವುದೇ ವೈಜ್ಞಾನಿಕ ಪುರಾವೆಗಳೂ ಇಲ್ಲ.