ಸೆಟ್ ನಲ್ಲಿ ಬಂದ ಅವಮಾನಕರ ಮಾತಿನ ವಿರುದ್ದ ಸೆಟೆದು ನಿಂತ ಕ್ರೇಜಿ ಕ್ವೀನ್!ಶೂಟಿಂಗ್ ನಿಲ್ಲಿಸಿ ಹೊರ ನಡೆದ ರಕ್ಷಿತಾ ಪ್ರೇಮ್
)
ರಕ್ಷಿತಾ ಮಾತು ನೇರಾ ನೇರ. ಅವರ ಮಾತಿನಲ್ಲಿ ಶುಗರ್ ಕೋಟಿಂಗ್ ಅನ್ನುವುದು ಇಲ್ಲವೇ ಇಲ್ಲ. ಇದ್ದದ್ದನ್ನು ಇದ್ದ ಹಾಗೆ ನೇರಾ ನೇರ ಮಾತನಾಡುವ ಇವರ ಈ ಗುಣದಿಂದಲೇ ಬಹಳಷ್ಟು ಮಂದಿಗೆ ಇಷ್ಟವಾಗುತ್ತಾರೆ.
)
ಇವರು ಒಂದು ರೀತಿ ರೆಬೆಲ್ ರಾಣಿ. ಯಾರದ್ದೇ ಮಾತು ಅಥವಾ ನಡವಳಿಕೆ ಇಷ್ಟ ಆಗಿಲ್ಲ ಎಂದಾದರೆ ಖಡಕ್ ಆಗಿ ಉತ್ತರ ನೀಡುವ ಎದೆಗಾರ್ತಿ. ಇದನ್ನು ಕಾರ್ಯಕ್ರಮದಲ್ಲಿ ತೀರ್ಪು ನೀಡುವ ಸಂದರ್ಭದಲ್ಲಿಯೂ ಗಮನಿಸಬಹುದು.
)
ಸೆಟ್ ನಲ್ಲಿ ಆಡಿರುವ ಮಾತುಗಳಿಂದ ಆದ ಅವಮಾನದ ವಿರುದ್ದ ಸೆಟೆದು ನಿಂತವರು ರಕ್ಷಿತಾ. ಈ ಘಟನೆ ತನ್ನ ಜೀವನದಲ್ಲಿ ಎಂದಿಗೂ ಮರೆಯುವುದಕ್ಕೆ ಸಾಧ್ಯವೇ ಇಲ್ಲ ಎನ್ನುತ್ತಾರೆ ಕ್ರೇಜಿ ಕ್ವೀನ್.
ತಂದೆ ತೀರಿಕೊಂಡ ಮೂರನೇ ದಿನಕ್ಕೆ ಶೂಟಿಂಗ್ ಗೆ ತೆರಳಿದ ವೇಳೆ ನಿರ್ದೇಶಕರೊಬ್ಬರು ಆಡಿದ ಮಾತು ರಕ್ಷಿತಾ ಮನಸ್ಸಿಗೆ ನಾಟಿದೆ. ತಂದೆ ತೀರಿಕೊಂಡರೆ ನಾವೇನು ಶೂಟಿಂಗ್ ನಿಲ್ಲಿಸಬೇಕಾ? ನಿರ್ಮಾಪಕರ ಹಣ ಹೋಗುತಾ ಇಲ್ಲವಾ ಎಂದು ಜರಿದಿದ್ದಾರೆ ನಿರ್ದೇಶಕ.
ಈ ಮಾತುಗಳನ್ನು ಕೇಳಿ ಅಲ್ಲಿ ನಿಲ್ಲುವುದಕ್ಕೆ ರಕ್ಷಿತಾಗೆ ಸಾಧ್ಯವಾಗಲೇ ಇಲ್ಲ. ಏನೇ ಆದರೂ, ಒಂದು ದಿನವೂ ಶೂಟಿಂಗ್ ಅನ್ನು ಅರ್ಧಕ್ಕೆ ಬಿಟ್ಟು ತೆರಳದ ರಕ್ಷಿತಾ, ಆ ದಿನ ಮಾತ್ರ ಸೆಟ್ ನಿಂದ ಅರ್ಧಕ್ಕೆ ಹೊರತು ಬಿಡುತ್ತಾರೆ.
ನಿರ್ಮಾಪಕರಿಗೆ ಫೋನ್ ಮಾಡಿ ನನಗೆ ಶೂಟಿಂಗ್ ಮಾಡಲು ಆಗುತ್ತಿಲ್ಲ.ನಾನು ಸೆಟ್ ನಿಂದ ಹೊರಡುತ್ತಿದ್ದೇನೆ ಎಂದು ನೇರವಾಗಿ ಹೇಳಿ ಸೆಟ್ ನಿಂದ ಹೊರ ನಡೆದೇ ಬಿಡುತ್ತಾರೆ.