Rakul Preet Singh: ಗುಲಾಬಿ ಬಣ್ಣದ ಸೀರೆಯಲ್ಲಿ ಮಿಂಚಿದ ಗಿಲ್ಲಿ ನಟಿ: ತಾಳಿ ಭಾರವಾಯ್ತಾ ಎಂದ ನೆಟ್ಟಿಗರು!
ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಗುಲಾಬಿ ಹಾಗೂ ಬಿಳಿ ಬಣ್ಣದ ಚೆಕ್ಸ್ ಸೀರೆಯನ್ನು ಧರಸಿ ಅದಕ್ಕೆ ವೈಟ್ ಸ್ಲೀವ್ ಲೆಸ್ ಬ್ಲೌಸ್ ಧರಸಿಕೊಂಡು ಫೋಟೋಗಳಿಗೆ ವಿಭಿನ್ನವಾಗಿ ಪೋಸ್ ನೀಡಿದ್ದಾರೆ.
ನಟಿ ರಕುಲ್ ಪ್ರೀತ್ ಸಿಂಗ್ ಸೀರೆಗೆ ಸೂಟ್ ಆಗುವಂತೆ ಬ್ಲ್ಯಾಕ್ ಮೆಟಲ್ ಜುಮಕಿ, ದಪ್ಪನೆಯ ಬಳೆಗಳು ಹಾಗೂ ಉಂಗುರವನ್ನು ಹಾಕಿಕೊಂಡು ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ.
ಬಹುಭಾಷಾ ನಟಿ ರಕುಲ್ ಪ್ರೀತ್ ಸಿಂಗ್ ಈ ಫೋಟೋಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಇದಕ್ಕೆ ಎರಡು ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದ್ದಾರೆ.
ರಕುಲ್ ಪ್ರೀತ್ ಸಿಂಗ್ ಫೋಟೋಗಳು ವೈರಲ್ ಆಗುತ್ತಿದ್ದಂತೆ, ತಾಳಿ ತೆಗೆದಿಟ್ಟು, ಹಣೆಗೆ ಕುಂಕುಮವೂ ಧರಿಸದರೆ ಖಾಲಿ ನೆತ್ತಿ, ಖಾಲಿ ಕತ್ತಿನಲ್ಲಿ ಕಾಣಿಸಿಕೊಂಡಿದಕ್ಕೆ ಸೋಶಿಯಲ್ ಮಿಡಿಯಾದಲ್ಲಿ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.
ನಟಿ ರಕುಲ್ ಫೋಟೊಗಳನ್ನು ನೋಡಿದ ನೆಟ್ಟಿಗರು ಮದುವೆಯಾಗಿ ಜಸ್ಟ್ 2 ತಿಂಗಳಷ್ಟೇ ಆಗಿದೆ. ಮಾಂಗಲ್ಯ ಕಳಚೋಕೆ ಇಷ್ಟೊಂದು ಅರ್ಜೆಂಟಾ. ಆ ತಾಳಿಯೂ ನಿಮಗೆ ಭಾರವಾಗುತ್ತಾ ಎಂದು ಪ್ರಶ್ನೆ ಮಾಡಿದ್ದಾರೆ.
ರಕುಲ್ ಪ್ರೀತ್ ಸಿಂಗ್ ಫೆಬ್ರವರಿಯಲ್ಲಿ ಬಾಲಿವುಡ್ ನಟ ಹಾಗೂ ನಿರ್ಮಾಪಕರಾದ ಜಾಕಿ ಭಗ್ನಾನಿ ಅವರನ್ನು ಗೋವಾ ಬೀಚ್ ಸಮೀಪದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದಾರೆ.