ಸೀತಾರಾಮ ಸೀರಿಯಲ್ ನ ರಾಮನ ನಿಜ ಜೀವನದ ಸೀತೆ ಇವರೇ! ಗಗನ್ ಚಿನ್ನಪ್ಪ ರಿಯಲ್ ಲೈಫ್ ಹೀಗಿದೆ !
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೀತಾರಾಮ ಧಾರವಾಹಿ ಜನ ಮೆಚ್ಚುಗೆ ಗಳಿಸಿದೆ. ಟಿ ಆರ್ ಪಿ ಲಿಸ್ಟ್ ನಲ್ಲಿಯೂ ಹೆಚ್ಚು ವೀಕ್ಷಕರನ್ನು ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಧಾರವಾಹಿಯಲ್ಲಿ ರಾಮನಾಗಿ ಮಿಂಚುತ್ತಿರುವ ಇವರ ನಿಜವಾದ ಹೆಸರು ಗಗನ್ ಚಿನ್ನಪ್ಪ. ಕೊಡಗು ಮೂಲದವರು.
ಸೀರಿಯಲ್ ನಲ್ಲಿ ಕಂಪನಿಯ ಮಾಲೀಕನಾಗಿ, ಆಗರ್ಭ ಶ್ರೀಮಂತನಾಗಿರುವ ಇವರು ನಿಜ ಜೀವನದಲ್ಲಿ ಹೇಗಿದ್ದಾರೆ ಗೊತ್ತಾ ?
ಸಿನಿಮಾರಂಗಕ್ಕೆ ಬರುವ ಮೊದಲು ಎರಡು ವರ್ಷ ಓಮಾನ್‌ನಲ್ಲಿ ಬಳಿಕ ಒಂದು ವರ್ಷ ಅಬುದಾಬಿಯಲ್ಲಿ ಕೆಲಸ ಮಾಡಿದ್ದರು. .
2014ರಲ್ಲಿ ಫೋಟೋ ಶೂಟ್ ಮಾಡಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರಂತೆ. ಅಲ್ಲಿಂದ ಇವರಿಗೆ ಆಫರ್ ಮೇಲೆ ಆಫರ್ ಬಂತು.
.ಆಫರ್ ಬರುವ ರಭಸ ನೋಡಿದ ಗಗನ್, ವಿದೇಶದ ಕೆಲಸ ಬಿಟ್ಟು ಮತ್ತೆ ಬೆಂಗಳೂರಿಗೆ ವಾಪಾಸಾದರು. ಆದರೆ ಸಿನಿಮಾ, ಧಾರಾವಾಹಿಗಳಲ್ಲಿ ಆಫರ್ ಬಂದಷ್ಟು ಸರಾಗವಾಗಿ ನಟನೆಗೆ ಅವಕಾಶ ಸಿಗಲಿಲ್ಲ.
ಭಾಷೆ ಸರಿಯಿಲ್ಲ ಅನ್ನೋ ಕಾರಣಕ್ಕೆ ರಿಜೆಕ್ಟ್ ಮಾಡುತ್ತಿದ್ದರು. ಬಳಿಕ ಬೇಸತ್ತ ಗಗನ್ ಕಾಸಿಗಾಗಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದಾರೆ.
ಆಗಲೇ ಮತ್ತೆ ಸಿನಿಮಾದಲ್ಲಿ ಅವಕಾಶ. ಆದರೆ ಚಿತ್ರೀಕರಣವಾದ ಸಿನಿಮಾ ಬಿಡುಗಡೆಯಾಗಲೇ ಇಲ್ಲ.
ನಂತರ ಸಿಕ್ಕಿದ್ದೇ ಮಂಗಳಗೌರಿ ಮದುವೆ ಸೀರಿಯಲ್‌ನಲ್ಲಿ ಅವಕಾಶ, ಇದಾದ ಬಳಿಕ ಮಿನಿ ಬಿಗ್ ಬಾಸ್ ನಲ್ಲಿಯೂ ಕಾಣಿಸಿಕೊಂಡರು.
ಇದೀಗ ಸೀತಾರಾಮ ಧಾರವಾಹಿಯ ಮುಖ್ಯ ಭೂಮಿಕೆಯಲ್ಲಿ ರಾಮನಾಗಿ ಎಲ್ಲರ ಮನೆ ಮಗನಾಗಿ ಭಾರೀ ಮೆಚ್ಚುಗೆ ಗಳಿಸಿದ್ದಾರೆ.
ಗಗನ್ ಚಿನಪ್ಪ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ದೀರ್ಘಕಾಲದ ಗೆಳತಿ ಪ್ರಾರ್ಥನಾ ಅವರೊಂದಿಗಿನ ಲವ್ ಲೈಫ್ ಬಗ್ಗೆ ಹೇಳಿಕೊಂಡಿದ್ದಾರೆ. ತನ್ನ ಗೆಳತಿಯ ಹುಟ್ಟುಹಬ್ಬದಂದು ಬರ್ತ್ ಡೇ ನೋಟ್ ಹಾಕಿದ್ದರು.