ನಾವಿಬ್ರು ಅಣ್ಣ-ತಂಗಿ ಅಂತ ಊರೆಲ್ಲಾ ಹೇಳಿಕೊಂಡು ಬಂದ ಈ ನಟಿ ಕೊನೆಗೆ ಆತನಿಂದಲೇ ಮದುವೆಗೆ ಮುನ್ನ ಗರ್ಭಿಣಿಯಾದ್ಳು... ಇದೆಂಥಾ ವಿಧಿಯಾಟ!!
ಇತ್ತೀಚಿನ ದಿನಗಳಲ್ಲಿ ಡಿವೋರ್ಸ್ ಸುದ್ದಿ ಸಿನಿರಂಗದಲ್ಲಿ ಭಾರೀ ಸುದ್ದಿಯಾಗುತ್ತಿದೆ. ಸಿನಿಮಾ ಕ್ಷೇತ್ರ ಮಾದರಿಯಾಗುವ ಬದಲು ಇನ್ನೇನನ್ನೋ ಸಮಾಜಕ್ಕೆ ಹೇಳಹೊರಟಂತಿದೆ. ಇನ್ನೊಂದೆಡೆ ಅಕ್ರಮ ಸಂಬಂಧವೆಂಬ ಭೂತ ಅನೇಕ ಸೆಲೆಬ್ರಿಟಿಗಳ ಬದುಕನ್ನು ಕತ್ತಲಾಗಿಸಿದೆ. ಆದರೆ ಈ ಪಿಡುಗು ಇಂದು ಮೊನ್ನೆಯದಲ್ಲ. ಬಹಳಷ್ಟು ವರ್ಷಗಳಿಂದಲೇ ಸಿನಿಮಾರಂಗದಲ್ಲಿ ಕೇಳಿಬರುತ್ತಿರುವ ಸುದ್ದಿ.
ಅಕ್ರಮ ಸಂಬಂಧಗಳಿಂದ ಅದೆಷ್ಟೋ ಮನೆ ಮುರಿದಿವೆ. ಇದಕ್ಕೆ ತಕ್ಕ ಉದಾಹರಣೆ ಎಂದರೆ ಶ್ರೀದೇವಿ ಮಾಡಿದ ಅದೊಂದು ತಪ್ಪು ಕೆಲಸ. ಈಕೆ ತನ್ನ ಸ್ನೇಹಿತೆಯ ಗಂಡನ ಜೊತೆಯೇ ಸಂಬಂಧ ಬೆಳೆಸಿ, ಮದುವೆಗೂ ಮುನ್ನ ಗರ್ಭಿಣಿಯಾಗಿದ್ದಳು. ಅಷ್ಟಕ್ಕೂ ಈ ವಿಚಾರ ತಿಳಿದಾಗ, ಶ್ರೀದೇವಿಯವರನ್ನು ಮನೆ ಮುರಿದವಳು ಎಂದು ಹೀಯಾಳಿಸಿದ್ದರಂತೆ.
ಅತಿಲೋಕ ಸುಂದರಿಯಾಗಿದ್ದ ಶ್ರೀದೇವಿ ಮದುವೆಯಾಗಿದ್ದು ಬೋನಿ ಕಪೂರ್ ಅವರನ್ನು. ಆದರೆ ಬೋನಿ ಕಪೂರ್ ಅವರಿಗೆ ಅದಾಗಲೇ ಮದುವೆಯಾಗಿತ್ತು. ಅಷ್ಟೇ ಅಲ್ಲ, ಬೋನಿ ಅವರ ಮಡದಿ ಮತ್ತು ಶ್ರೀದೇವಿ ಸ್ನೇಹಿತೆಯರು. ಇದೇ ಕಾರಣದಿಂದ ಶ್ರೀದೇವಿಯವರನ್ನು ತಮ್ಮ ಮನೆಯಲ್ಲೇ ಇರಿಸಿಕೊಂಡಿದ್ದರಂತೆ ಮೋನಾ.
ಆದರೆ ಕೊನೆಗೆ ಆಗಿದ್ದು ಮೋನಾ ಬದುಕು ಅಲ್ಲೋಲ ಕಲ್ಲೋಲ. ತನ್ನ ಸ್ನೇಹಿತೆ ಎಂದು ಆಶ್ರಯ ಕೊಟ್ಟಿದ್ದಾಕೆಗೆ ಮಹಾಮೋಸವೇ ನಡೆದಿತ್ತು. ಇನ್ನೊಂದೆಡೆ ಮಿಥುನ್ ಚಕ್ರವರ್ತಿ ಜೊತೆ ಸಂಬಂಧದಲ್ಲಿದ್ದ ಶ್ರೀದೇವಿ ಅವರ ಮುಂದೆ ಬೋನಿ ಕಪೂರ್‌ಗೆ ಅಣ್ಣ ಎನ್ನುತ್ತಾ ರಾಖಿ ಕಟ್ಟಿದ್ರಂತೆ. ಅನೇಕ ಸ್ಥಳಗಳಲ್ಲಿ ಅದೇ ರೀತಿ ಹೇಳಿಕೊಂಡಿದ್ದರು ಎನ್ನಲಾಗಿದೆ. ಆದರೆ ಕೊನೆಗೆ ಅಣ್ಣ ಎನ್ನುತ್ತಿದ್ದವನಿಂದಲೇ ಮದುವೆಗೆ ಮುನ್ನ ಗರ್ಭಿಣಿಯಾಗಿದ್ರು ನಟಿ ಶ್ರೀದೇವಿ. ಮೊ
ದಕ್ಷಿಣ ಸಿನಿರಂಗದಿಂದ ಬಾಲಿವುಡ್... ಬಾಲಿವುಡ್‌ನಿಂದ ಪ್ಯಾನ್ ಇಂಡಿಯಾ... ಹೀಗೆ ಹಂತ ಹಂತವಾಗಿ ಸಕ್ಸಸ್‌ಫುಲ್ ನಾಯಕಿಯಾಗಿದ್ದರೂ ಸಹ ಶ್ರೀದೇವಿಯವರನ್ನು ಅವರ ಅತ್ತೆ ಅಂದರೆ ಬೋನಿ ಕಪೂರ್ ಅವರ ತಾಯಿ ಒಪ್ಪಿಕೊಂಡಿರಲಿಲ್ಲವಂತೆ. ಮೋನಾ ಜೊತೆ ಬೋನಿ ಡಿವೋರ್ಸ್ ಪಡೆದ ಬಳಿಕ, ಶ್ರೀದೇವಿ ನಮ್ಮ ಮನೆ ಮುರಿದವಳು ಎಂದು ಹೇಳಿದ್ದರಂತೆ ಬೋನಿ ಅವರ ತಾಯಿ. ಇದಕ್ಕೆ ಸಂಬಂಧಿಸಿದ ಅನೇಕ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಲಭ್ಯವಿದೆ.
ಒಂದೊಮ್ಮೆ ರಾಮ್ ಗೋಪಾಲ್ ವರ್ಮಾ ಕೂಡ ಬೋನಿ ಕಪೂರ್ ತಾಯಿ ಬಗ್ಗೆ ಹೇಳಿಕೆ ನೀಡಿದ್ದರು. ರಾಮ್ ಗೋಪಾಲ್ ವರ್ಮಾ ಪ್ರಕಾರ, ಬೋನಿ ಕಪೂರ್ ಅವರ ತಾಯಿ, ತಮ್ಮ ಮಗ ಮತ್ತು ಶ್ರೀದೇವಿ ಸಂಬಂಧದ ಬಗ್ಗೆ ತಿಳಿದಾಗ ಗರಂ ಆಗಿದ್ದರು. ಅಷ್ಟೇ ಅಲ್ಲದೆ, ಶ್ರೀದೇವಿ ಮೇಲೆ ಕೈ ಮಾಡಿದ್ದರು ಎಂದಿದ್ದಾರೆ.
ಅಷ್ಟೇ ಅಲ್ಲದೆ ವರ್ಮಾ ಅವರು ಪತ್ರವೊಂದರಲ್ಲಿ ಹೀಗೆ ಬರೆದಿದ್ದಾರೆ; "ಜಗತ್ತಿನಲ್ಲಿ ಲಕ್ಷಾಂತರ ಜನರು ಬಯಸಿದ ಮಹಿಳೆ ಒಬ್ಬಂಟಿಯಾಗಿದ್ದಳು. ಒಬ್ಬರನ್ನು ಹೊರತುಪಡಿಸಿ ಜಗತ್ತಿನಲ್ಲಿದ್ದ ಎಲ್ಲರೂ ಆಕೆಗೆ ಕಡಿಮೆ ಎನಿಸಿದ್ದರು. ಬೋನಿಯ ತಾಯಿ ಆಕೆಯನ್ನು ʼಹೋಮ್ ಬ್ರೇಕರ್ʼ (ಮನೆ ಮುರಿದವಳು) ಎಂದು ಬಿಂಬಿಸಿದ್ದರು. ಬೋನಿಯ ಮೊದಲ ಪತ್ನಿ ಮೋನಾಗೆ ಮಾಡಿದ್ದ ಅನ್ಯಾಯಕ್ಕೆ ಪಂಚತಾರಾ ಹೋಟೆಲ್ ಲಾಬಿಯಲ್ಲೇ ಸಾರ್ವಜನಿಕವಾಗಿ ಶ್ರೀದೇವಿ ಹೊಟ್ಟೆಗೆ ಹೊಡೆದಿದ್ದ ಬೋನಿ ತಾಯಿ" ಎಂದು ಬರೆದಿದ್ದಾರೆ.