ಸ್ಟಾರ್‌ ಡೈರೆಕ್ಟರ್‌ RGV ಹುಡುಕಾಡುವಂತೆ ಮಾಡಿದ ಈ ಸುಂದರಿ ಯಾರು ಗೊತ್ತೆ..?

Sat, 30 Sep 2023-7:40 pm,

ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ತಮ್ಮ ನೇರ ಮಾತು ಮತ್ತು ಹೇಳಿಕೆಯಿಂದ ಸದಾ ವಿವಾದ ಸೃಷ್ಟಿಸುತ್ತಿರುತ್ತಾರೆ.  

ಸಧ್ಯ ವರ್ಮಾ ಈ ಹುಡುಗಿ ಯಾರು ಗೊತ್ತಾ? ಗೊತ್ತಿದ್ದರೆ ಹೇಳಿ ಅಂತ ಪೋಸ್ಟ್ ಮಾಡಿ ಸುಂದರಿಯ ಹುಡುಕಾಟದಲ್ಲಿದ್ದರು. ಇದ್ದಕ್ಕಿದ್ದಂತೆ ಆ ಹುಡುಗಿ ವೈರಲ್ ಆಗಿದ್ದಳು.  

ಕೊನೆಗೂ ಆ ಹುಡುಗಿ ಯಾರು ಅಂತ ಗೊತ್ತಾಯ್ತು ಎಂದು ಆರ್‌ಜಿವಿ ಸಾಮಾಜಿಕ ಜಾಲತಾಣ ಯುವತಿಯ ಇನ್‌ಸ್ಟಾಗ್ರಾಮ್‌ ಐಡಿಯನ್ನು ಪೋಸ್ಟ್ ಮಾಡಿದ್ದರು.  

ಸೀರೆ ಧರಿಸಿ ರೀಲ್‌ ಮಾಡಿದ್ದ ಯುವತಿಯ ಅಂದಕ್ಕೆ ಮಾರು ಹೋಗಿರುವ ರಾಮ್‌ ಸಧ್ಯ ಆ ಚೆಲುವೆಯ ಜೊತೆ ಸಿನಿಮಾ ಮಾಡುವುದಾಗಿ ಹೇಳಿಕೊಂಡಿದ್ದಾರೆ.  

ಆ ಯುವತಿ ಯಾರು ಅಂತ ನೋಡೋದಾದ್ರೆ, ವೈರಲ್‌ ಆದ ಚೆಲುವೆ ಕೇರಳ ಮೂಲದ ಕಲಾವಿದೆ ಶ್ರೀಲಕ್ಷ್ಮಿ ಸತೀಶ್‌.   

ಶ್ರೀಲಕ್ಷ್ಮಿ ಪ್ರಸ್ತುತ ಸಿನಿಮಾಗಳಲ್ಲಿ ನಟಿಸಲು ಅವಕಾಶಗಳಿಗಾಗಿ ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ಸಾಮಾಜಿಕ ಮಾಧ್ಯಮದಲ್ಲಿ ರೀಲ್ಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ.  

ಹೀಗೆ ಲಕ್ಷ್ಮಿ ಹಂಚಿಕೊಂಡಿದ್ದ ವಿಡಿಯೋ ಒಂದು ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಕಣ್ಣಿಗೆ ಬಿದ್ದಿತ್ತು. ಅಲ್ಲದೆ, ಆ ರೀಲ್‌ ಹಂಚಿಕೊಂಡು ಆರ್‌ಜಿವಿ ವಿವರ ಕೇಳಿದ್ದರು.  

RGV ಹಂಚಿಕೊಂಡಿದ್ದ ವೀಡಿಯೊ ಪೋಸ್ಟ್ ವೈರಲ್ ಆಗಿ ಶ್ರೀಲಕ್ಷ್ಮಿಗೆ ತಲುಪಿತು. ಅವರು ಸಹ ಆ ಪೋಸ್ಟ್‌ ಅನ್ನು ರಿಪೋಸ್ಟ್‌ ಮಾಡಿಕೊಂಡಿದ್ದರು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link