Ram Mandir inauguration: ರಾಮಮಂದಿರದ ಅಂಚೆ ಚೀಟಿ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

Thu, 18 Jan 2024-5:20 pm,

ಪ್ರಧಾನಿ ಮೋದಿಯವರು ಗುರುವಾರ ರಾಮಮಂದಿರದ ಸ್ಮರಣಾರ್ಥ ಹೊರತಂದಿರುವ ಅಂಚೆ ಚೀಟಿಗಳು ಮತ್ತು ಭಗವಾನ್ ರಾಮನ ಕುರಿತ ಅಂಚೆಚೀಟಿಗಳ ಪುಸ್ತಕವನ್ನು ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, ಈ ಅಂಚೆ ಚೀಟಿಗಳು ಭವಿಷ್ಯದ ಪೀಳಿಗೆಗೆ ಇತಿಹಾಸ ಮತ್ತು ರಾಮಮಂದಿರದ ಕುರಿತ ಐತಿಹಾಸಿಕ ಮಾಹಿತಿ ತಲುಪಿಸಲಿವೆ ಎಂದು ಹೇಳಿದ್ದಾರೆ.

ಈ ಅಂಚೆ ಚೀಟಿಗಳು ಕೇವಲ ಕಾಗದದ ತುಣುಕುಗಳು ಅಥವಾ ಕಲಾಕೃತಿಗಳಲ್ಲ. ಇವು ರಾಮಾಯಣ ಕುರಿತ ತಮ್ಮದೇಯಾದ ವಿಶಿಷ್ಟ ಗುರುತುಗಳನ್ನು ಹೊಂದಿವೆ ಎಂದು ಹೇಳಿದ್ದಾರೆ.

ಬಿಡುಗಡೆ ಮಾಡಲಾಗಿರುವ ಅಂಚೆ ಚೀಟಿಗಳಿಂದ ಯುವಕರು ಬಹಳಷ್ಟು ಕಲಿಯಲಿದ್ದಾರೆ. ಅಂಚೆ ಚೀಟಿಯಲ್ಲಿ ರಾಮಚರಿತ ಮಾನಸದ ಶ್ಲೋಕವಿದೆ. ದೇಶಕ್ಕೆ ಸಕಾರಾತ್ಮಕ ಸಂದೇಶ ನೀಡುವ ಸೂರ್ಯನ ಚಿತ್ರವಿದೆ. ಅಲ್ಲದೇ ಸರಯು ನದಿಯ ಚಿತ್ರಣವೂ ಇದರಲ್ಲಿದೆ. ಇದರೊಂದಿಗೆ ಭಗವಾನ್ ರಾಮನ, ಪಂಚತಂತ್ರದ ತತ್ತ್ವವನ್ನು ಆಲ್ಬಮ್‍ನಲ್ಲಿ ಚಿಕಣಿ ರೂಪದಲ್ಲಿ ಚಿತ್ರಿಸಲಾಗಿದೆ  ಎಂದ ಪ್ರಧಾನಿ ಮೋದಿ ತಿಳಿಸಿದ್ದಾರೆ.

ಇಂದು ಬಿಡುಗಡೆಯಾಗಿರುವ 6 ಸ್ಮರಣಾರ್ಥ ಅಂಚೆಚೀಟಿಗಳು ಅಯೋಧ್ಯೆಯಲ್ಲಿನ ರಾಮಮಂದಿರ, ಗಣೇಶ, ಹನುಮಾನ್, ಜಟಾಯು, ಕೇವತ್ರಾಜ್ ಮತ್ತು ಶಬರಿಯನ್ನು ಒಳಗೊಂಡಿವೆ. ಪ್ರತಿಯೊಂದೂ ಭಗವಾನ್ ರಾಮನಿಗೆ ಸಂಬಂಧಿಸಿದ ವಿಚಾರಗಳನ್ನು ತಿಳಿಸುತ್ತವೆ.

ಇದಲ್ಲದೇ ಭಗವಾನ್ ರಾಮನ ಕುರಿತ 48 ಪುಟಗಳ ಪುಸ್ತಕದಲ್ಲಿ ಅಮೆರಿಕ, ನ್ಯೂಜಿಲ್ಯಾಂಡ್, ಸಿಂಗಾಪುರ, ಕೆನಡಾ ಮತ್ತು ಕಾಂಬೋಡಿಯಾ ಸೇರಿದಂತೆ 20ಕ್ಕೂ ಹೆಚ್ಚು ದೇಶಗಳು ಹೊರಡಿಸಿರುವ ಅಂಚೆಚೀಟಿಗಳನ್ನು ಒಳಗೊಂಡಿದೆ. ಇವೆಲ್ಲಾ ದೇಶಗಳ ನಡುವಿನ ಗಡಿಗಳನ್ನೂ ಮೀರಿ ಸಂಪರ್ಕ ಸಾಧಿಸಲು ಸಹಕಾರಿಯಾಗುತ್ತದೆ ಎಂದು ಮೋದಿ ತಿಳಿಸಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link