Ramachari Kannada Serial: ನಿಜ ಜೀವನದಲ್ಲಿ ʼರಾಮಾಚಾರಿʼ ತಂದೆ ಕೂಡ ದೊಡ್ಡ ಸೆಲೆಬ್ರಿಟಿ.. ಅಪ್ಪ ಮಗ ಇಬ್ಬರೂ ಮಹಾನ್‌ ಕಲಾವಿದರು!!

Thu, 11 Apr 2024-1:17 pm,

ಚಾರು-ರಾಮಾಚಾರಿ ಜೋಡಿ ಪ್ರೇಕ್ಷಕರಿಗೆ ಮೋಡಿ ಮಾಡಿದೆ.. ಈ ಸಿರೀಯಲ್‌ ನೋಡುವವರ ಸಂಖ್ಯೆಯೂ ಹೆಚ್ಚಾಗಿದೆ.. ಈ ಧಾರವಾಹಿಯ ನಾಯಕನ ಪಾತ್ರದಲ್ಲಿ ನಟಿಸುತ್ತಿರುವವರ ಹೆಸರು ಋತ್ವಿಕ್‌.. ಆದರೆ ಇವರ ಹಿನ್ನಲೆ ಬಗ್ಗೆ ಕೆಲವು ಜನರಿಗೆ ಮಾತ್ರ ತಿಳಿದಿದೆ.. ಅಪ್ಪ ಅಮ್ಮನ ಒತ್ತಾಯದ ಮೇರೆಗೆ ಬಣ್ಣದ ಲೋಕಕ್ಕೆ ಕಾಲಿಟ್ಟ ಪ್ರತಿಭೆ ರಿತ್ವಿಕ್..‌ ರಾಮಾಚಾರಿ ಸಿರೀಯಲ್‌ ಪಾತ್ರಕ್ಕಾಗಿ ಸಾಷಕ್ಟು ಅಭ್ಯಾಸಗಳನ್ನು ತೊರೆದ ಹಾರ್ಡ್‌ವರ್ಕ್ರ್‌ ಇವರು..   

ಬಣ್ಣದ ಲೋಕಕ್ಕೆ ಎಂಟ್ರಿಕೊಡುವ ಮುನ್ನ ಸಾಕಷ್ಟು ತಯಾರಿಗಳು ಬೇಕಾಗುತ್ತವೆ.. ಜೊತೆಗೆ ಅದೃಷ್ಟವೂ ಬೇಕು.. ಇದರೊಂದಿಗೆ ಕುಟುಂಬದ ಯಾರಾದರೂ ಇಂಡಸ್ಟ್ರಿಯಲ್ಲಿರಬೇಕು ಎನ್ನುತ್ತಾರೆ.. ಆದರೆ ಈ ಇದು ಎಲ್ಲರ ಜೀವನದಲ್ಲೂ ವರ್ಕ್‌ಔಟ್‌ ಆಗುವುದಿಲ್ಲ.. ಎಷ್ಟೋ ನಟ-ನಟಿಯರ ಮಕ್ಕಳು ಯಶಸ್ಸು ಸಿಗದೇ ಬಣ್ಣದ ಲೋಕವನ್ನೇ ಬಿಟ್ಟು ಹಿಂದೆ ಸರಿದವರಿದ್ದಾರೆ..   

ಅದೇ ರೀತಿ ರಾಮಾಚಾರಿ ನಟ ರಿತ್ವಿಕ್‌ ತಂದೆ ಕೂಡ ಸಿನಿಮಾ ಇಂಡಸ್ಟ್ರಿಯಲ್ಲಿದ್ದಾರೆ.. ಆದರೆ ಈ ಬಗ್ಗೆ ಅವರು ಎಲ್ಲಿಯೂ ಹೇಳಿಕೊಂಡಿಲ್ಲ.. ಹೌದು ತಮ್ಮ ಸ್ವಂತ ಬುದ್ದಿಯಿಂದಲೇ ಸಿನಿರಂಗದಲ್ಲಿ ಬೆಳೆಯಬೇಕು ಎನ್ನುವುದು ಈ ನಟನ ಆಸೆಯಾಗಿತ್ತು. ಹೀಗಾಗಿ ಆಡಿಷನ್ಕೊಟ್ಟು ಸೆಲೆಕ್ಟ್‌ ಆಗಿ ಸದ್ಯ ಕನ್ನಡಿಗರ ಮನೆಮಾತಾಗಿದ್ದಾರೆ.  

ನಟ ರಿತ್ವಿಕ್‌ ಅವರ ತಂದೆಯ ಹೆಸರು ಪ್ರವೀಣ್..‌ ಇವರು ಕನ್ನಡ ಸಿನಿಮಾ ರಂಗದಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ.. ನಿರ್ದೇಶಕನಾಗಿ, ನಿರ್ಮಾಪಕನಾಗಿ, ಹಲವು ಸಿನಿಮಾಗಳನ್ನು ಕನ್ನಡ ಸಿನಿರಂಗಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ವಿಶೇಷವೆಂದರೇ ಇವರು ರಾಷ್ಟ್ರಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದಾರೆ..   

ಆದರೆ ಕನ್ನಡ ಸಿನಿರಂಗದಲ್ಲಿ ಇವರ ಪರಿಚಯ ಕಡಿಮೆ.. ಏಕೆಂದರೆ ಅವರು ಎಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ.. ತಾವು ತಮ್ಮ ಕೆಲಸ ಎನ್ನುವಂತೆ ಸರಳ ಜೀವನ ನಡೆಸುತ್ತಿದ್ದಾರೆ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link