Ramachari Kannada Serial: ರಾಮಾಚಾರಿ ಸೀರಿಯಲ್ ನಟ ರಿತ್ವಿಕ್ ನಿಜವಾದ ಪ್ರೇಯಸಿ ಯಾರು ಗೊತ್ತಾ? ಚಾರುಗಿಂತ ಸಖತ್ ಕ್ಯೂಟ್ ಈಕೆ!
ರಾಮಾಚಾರಿ ಪಾತ್ರದಿಂದ ಸಾಕಷ್ಟು ಕನ್ನಡ ಕಿರುತೆರೆ ಅಭಿಮಾನಿಗಳನ್ನು ಸಂಪಾದಿಸಿರುವ ರಿತ್ವಿಕ್.. ಈ ಧಾರವಾಹಿಯಲ್ಲಿನ ಅವರ ಅದ್ಭುತ ಅಭಿನಯಕ್ಕೆ ಮಾರು ಹೋಗದವರೇ ಇಲ್ಲ..
ರಾಮಾಚಾರಿ ಸಿರೀಯಲ್ ಮೂಲಕ ಕನ್ನಡಾಭಿಮಾನಿಗಳ ಮನಗೆದ್ದ ಈ ನಟನಿಗೆ ಲವರ್ ಇದ್ದಾರಾ ಎನ್ನುವುದು ಸಾಕಷ್ಟು ಪ್ರೇಕ್ಷಕರ ದೊಡ್ಡ ಪ್ರಶ್ನೆಯಾಗಿತ್ತು.. ಹಾಗಾದ್ರೆ ರಾಮಾಚಾರಿಗೆ ನಿಜವಾಗಿಯೂ ಲವರ್ ಗರ್ಲ್‌ಫ್ರೇಂಡ್ ಇದ್ದಾರಾ? ಇಲ್ಲವಾ? ಇಲ್ಲಿ ತಿಳಿಯೋಣ..
ನಟ ರಿತ್ವಿಕ್ ಅವರಿಗೆ ಲವರ್ ಇದ್ದರಂತೆ.. ಹೌದು ರಾಮಾಚಾರಿ ಸಿರೀಯಲ್‌ಗೆ ಎಂಟ್ರಿ ಕೊಡುವ ಮುನ್ನ ಇವರಿಗೆ ಗರ್ಲ್‌ಫ್ರೆಂಡ್ ಇದ್ದರಂತೆ.. ಆದರೆ ಕಾರಣಾಂತರಗಳಿಂದ ಬ್ರೇಕಪ್ ಆಗಿದೆ ಎಂದು ಸ್ವತಃ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು..
ರಾಮಾಚಾರಿ ಸಿರೀಯಲ್‌ನಲ್ಲಿ ಸ್ಪಷ್ಟವಾಗಿ ಕನ್ನಡ ಮಾತನಾಡುವುದು, ಮಾತಿನ ಶೈಲಿ, ಎಲ್ಲವೂ ಪ್ರೇಕ್ಷಕರಿಗೆ ತುಂಬಾನೇ ಇಷ್ಟವಾಗಿದೆ.. ರಿತ್ವಿಕ್ ರಾಮಾಚಾರಿ ಪಾತ್ರಕ್ಕೆ ಹೇಳಿಮಾಡಿಸಿದಂತಿದ್ದಾರೆ ಎನ್ನುತ್ತಾರೆ ಅಭಿಮಾನಿಗಳು..
ಇನ್ನು ನಟ ರಿತ್ವಿಕ್ ಅವರು ಮೂಲತಃ ಮೈಸೂರಿನವರು.. ವಿಶೇಷ ಏನಪ್ಪಾ ಅಂದ್ರೆ ಇವರು ಮಂಡ್ಯ ರಮೇಶ್ ಅವರ ಅಪ್ಪಟ ಶಿಷ್ಯ.. ಅವರ ಶಾಲೆಯಲ್ಲೇ ನಟನಾ ತರಬೇತಿ ಪಡೆದ ರಿತ್ವಿಕ್ ತಂದೆ ಹಾಗೂ ತಾಯಿಯ ಒತ್ತಾಯಕ್ಕೆ ರಂಗಭೂಮಿಗೆ ಕಾಲಿಟ್ಟು.. ಸದ್ಯ ರಾಮಾಚಾರಿ ಸಿರೀಯಲ್ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.
ಸದ್ಯ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಸಿರೀಯಲ್ ಅಪಾರ ಅಭಿಮಾನಿಗಳನ್ನು ಗಳಿಸುವುದಲ್ಲದೇ ನಟ ರಿತ್ವಿಕ್ ಕೂಡ ಬಣ್ಣದ ಲೋಕದಲ್ಲಿ ತಮ್ಮದೇ ಆದ ಹೆಸರು ಸೃಷ್ಟಿಸಿಕೊಂಡಿದ್ದಾರೆ..