ಫ್ಯಾನ್ಸ್ಗೆ ಗುಡ್ನ್ಯೂಸ್ ನೀಡಿದ `ರಾಮಾಚಾರಿ` ನಟಿ ಚಾರು ಉರ್ಫ್ ಮೌನ ಗುಡ್ಡೆಮನೆ..!
ಕಿರುತೆರೆಯಲ್ಲಿ ಅವಕಾಶ ಪಡೆಯಲು ಕಿರುತೆರೆ ಬಹಳ ಸೂಕ್ತವಾದ ವೇದಿಕೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಕಿರುತೆರೆಯ ಸುರಸುಂದರಿ ಚಾರು ಅಲಿಯಾಸ್ ಮೌನ ಗುಡ್ಡೆಮನೆ (Mouna Guddemane) ಲೇಟೆಸ್ಟ್ ಉದಾಹರಣೆ.
‘ರಾಮಾಚಾರಿ’ ಧಾರವಾಹಿ ಮೂಲಕ ಮನೆಮನೆ ಮಾತಾಗಿದ್ದ ಕುಡ್ಲ ಕುವರಿ ಮೌನ ಗುಡ್ಡೆಮನೆ ಈಗ ‘ಕುಲದಲ್ಲಿ ಕೀಳ್ಯಾವುದೋ’ ಎನ್ನುವ ಸಿನಿಮಾ ಮೂಲಕ ಬಿಗ್ ಸ್ಕ್ರೀನ್ ಗೆ ಎಂಟ್ರಿ ಪಡೆದುಕೊಂಡಿದ್ದಾರೆ.
ಮೌನ ಗುಡ್ಡೆಮನೆ ಕಿರುತೆರೆಯಲ್ಲಿ ಚಾರು ಎಂದೇ ಹೆಸರುವಾಸಿ. ಚೂರು ಚೂರು ಹೆಸರು ಮಾಡಿದ ‘ರಾಮಾಚಾರಿ’ಚಾರು ಸೀರಿಯಲ್ ನಿಂದ ಸಿನಿಮಾಕ್ಕೆ ಸರ್ರನೆ ಜಾರಿದ್ದಾರೆ.
‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾದಲ್ಲಿ ಚಾರು ಅಲಿಯಾಸ್ ಮೌನಗೌಡ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಮಡೆನೂರು ಮನುಗೆ ಹೀರೋಯಿನ್.
ತಾವು ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಬಗ್ಗೆ ಇನ್ಸ್ಟ್ರಾಗ್ರಾಮ್ ಪೋಸ್ಟ್ ಹಾಕಿರುವ ಮೌನ, ‘ನನ್ನ ಕನಸುಗಳು ನನಸಾಗಲು ನಿಮ್ಮ ಆಶೀರ್ವಾದ ಮತ್ತು ಪ್ರೀತಿ ಬೇಕು. ನನ್ನ ಮೊದಲ ಸಿನಿ ಪ್ರಯಾಣಕ್ಕೆ ಬೆಂಬಲ ನೀಡಿ’ ಎಂದು ಕೇಳಿಕೊಂಡಿದ್ದಾರೆ.
‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾವನ್ನು ರಾಮನಾರಾಯಣ್ ನಿರ್ದೇಶಿಸುತ್ತಿದ್ದಾರೆ. ಸಂತೋಷ್ ಕುಮಾರ್ ಎ.ಕೆ. ಮತ್ತು ವಿದ್ಯಾ ನಿರ್ಮಾಣ ಮಾಡುತ್ತಿದ್ದಾರೆ. ಮೌನ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ಅಭಿಮಾನಿಗಳು ಶುಭಕೋರಿದ್ದಾರೆ.