ಕಿಡ್ನಿ ಸ್ಟೋನ್ ಕರಗಿಸುವ ಶಕ್ತಿಯುತ ಹಣ್ಣು.. ದೃಷ್ಟಿ ದೋಷಕ್ಕೆ ಮದ್ದು, ವರ್ಷಕ್ಕೊಮ್ಮೆ ತಿಂದರೂ ಸಾಕು ಮುದುಕರಾದರೂ ಕನ್ನಡಕ ಬರುವುದಿಲ್ಲ !
ರಂಬುಟಾನ್ ಹಣ್ಣು ನೋಡಲು ಕೆಂಪಾಗಿ ಮುಳ್ಳು ಮುಳ್ಳಾಗಿರುತ್ತದೆ. ಇದರ ಒಳಗೆ ಬಿಳಿ ಜೆಲ್ಲಿ ತರಹದ ಪಲ್ಪ ಇರುತ್ತದೆ. ಈ ಹಣ್ಣು ಮಲೇಷ್ಯಾ ಮತ್ತು ಇಂಡೋನೇಷ್ಯಾದಲ್ಲಿ ಹೆಚ್ಚಾಗಿ ದೊರೆಯುವುದು.
ಇದರಲ್ಲಿ ಕಬ್ಬಿಣ, ಆ್ಯಂಟಿಆಕ್ಸಿಡೆಂಟ್‌ಗಳು, ಕಾರ್ಬೋಹೈಡ್ರೇಟ್‌ಗಳು, ಖನಿಜಗಳು, ಕ್ಯಾಲ್ಸಿಯಂ, ರಂಜಕ, ವಿಟಮಿನ್‌ಗಳು B3, ಪ್ರೋಟೀನ್‌ನಂತಹ ವಿವಿಧ ಪೋಷಕಾಂಶಗಳು ಸಮೃದ್ಧವಾಗಿವೆ.
ರಂಬುಟಾನ್ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಅಸ್ತಮಾ ಬರದಂತೆ ತಡೆಯಲು ಸಹಕಾರಿ.
ಕಣ್ಣಿನ ಆರೋಗ್ಯಕ್ಕೆ ಸಾಕಷ್ಟು ಪ್ರೋಜನಕಾರಿಯಾಗಿದೆ. ರಂಬುಟಾನ್ ಹಣ್ಣಿನಲ್ಲಿ ಫೈಬರ್ ಸಮೃದ್ಧವಾಗಿದೆ. ಇದು ಮಲಬದ್ಧತೆ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ರಂಬುಟಾನ್ ಹಣ್ಣಿನಲ್ಲಿ ನೀರಿನಂಶ ಅಧಿಕವಾಗಿದೆ. ಕಿಡ್ನಿ ಸ್ಟೋನ್ ಕರಗಿಸಲು ಈ ಹಣ್ಣು ಸಹಕಾರಿಯಾಗಿದೆ. ರಂಬುಟಾನ್ ವಿಟಮಿನ್ ಸಿ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತಾರೆ.
ವಿಟಮಿನ್‌ಗಳು ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ಚರ್ಮದ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡುತ್ತವೆ. ಚರ್ಮದ ಸುಕ್ಕುಗಳನ್ನು ತಡೆಯುತ್ತದೆ ಮತ್ತು ಅಕಾಲಿಕ ವಯಸ್ಸಾಗುವುದನ್ನು ತಡೆಯುತ್ತದೆ.
ರಂಬುಟಾನ್ ಹಣ್ಣು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದರೂ, ಗರ್ಭಿಣಿಯರು, ಮಧುಮೇಹಿಗಳು ಮತ್ತು ಅಧಿಕ ರಕ್ತದೊತ್ತಡ ಹೊಂದಿರುವವರು ಈ ಹಣ್ಣನ್ನು ಸೇವಿಸಬಾರದು.
ಈ ಹಣ್ಣಿನ ಸೀಸನ್ ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಇರುತ್ತದೆ. ರಂಬುಟಾನ್ ಹಣ್ಣು ಕೆಂಪು ಅಥವಾ ಹಳದಿ ಬಣ್ಣದಲ್ಲಿ ಇರುತ್ತದೆ.
ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.