ಬೆಡ್‌ರೂಮ್‌ಗೆ ಹೋಗದೇ ಟಾಪ್ ನಾಯಕಿಯಾಗೋದು ಕಷ್ಟ: ಖ್ಯಾತ ನಟಿ ರಮ್ಯ ಸೆನ್ಸೇಷನಲ್ ಹೇಳಿಕೆ
ಸೌತ್ ಸಿನಿಮಾ ತಾರೆ ರಮ್ಯ ಕೃಷ್ಣನ್ 1990 ರಿಂದ ಸಿನಿ ಇಂಡಸ್ಟ್ರಿಯಲ್ಲಿ ಛಾಪು ಮೂಡಿಸಿದ್ದಾರೆ. ಈಗಲೂ ಸಾಕಷ್ಟು ಜನಪ್ರಿಯರಾಗಿರುವ ನಟಿ.
ನಟಿ ರಮ್ಯ ಕೃಷ್ಣನ್ ತಮಗಾದ ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದು, ಅವರ ಸಂದರ್ಶನ ಮತ್ತೊಮ್ಮೆ ವೈರಲ್ ಆಗಿದೆ.
ಚೆನ್ನೈ ಮೂಲದ ರಮ್ಯ ಕೃಷ್ಣನ್ ತೆಲುಗು , ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ 200 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದಾರೆ.
ನಾಲ್ಕು ಫಿಲ್ಮ್ ಫೇರ್ ಪ್ರಶಸ್ತಿ, ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ, ಮೂರು ನ೦ದಿ ಪ್ರಶಸ್ತಿ ರಮ್ಯ ಕೃಷ್ಣನ್ ಮುಡಿಗೇರಿವೆ.
ಕಾಸ್ಟಿಂಗ್ ಕೌಚ್ ಚಿತ್ರರಂಗದಲ್ಲಿ ಮಾತ್ರವಲ್ಲ ಬೇರೆ ಕ್ಷೇತ್ರಗಳಲ್ಲಿಯೂ ಇರುವ ಸಾಮಾನ್ಯ ಸಮಸ್ಯೆಯಾಗಿದೆ. ಕೆಲವರು ಸುಳ್ಳು ಸುದ್ದಿಗಳನ್ನೂ ಹರಡುತ್ತಾರೆ ಎಂದು ನಟಿ ರಮ್ಯ ಕೃಷ್ಣನ್ ಹೇಳಿದ್ದಾರೆ.
ಮಹಿಳೆಯರು ಸಿನಿಮಾದಲ್ಲಿ ಸ್ಟಾರ್ ಪಟ್ಟ ಗಳಿಸಬೇಕು ಎಂದರೆ ಸಾಂದರ್ಭಿಕ ಹೊಂದಾಣಿಕೆಗಳನ್ನು ಮಾಡಿಕೊಳ್ಳಲೇಬೇಕು ಎಂದು ರಮ್ಯ ಕೃಷ್ಣನ್ ಹೇಳಿದ್ದಾರೆ.
ಇಂಡಸ್ಟ್ರಿಯಲ್ಲಿ ಸ್ಟಾರ್ ಆಗಬೇಕೆಂದರೆ ನಿರ್ದೇಶಕರು ಅಥವಾ ಹೀರೋಗಳ ಇಷ್ಟಾರ್ಥಗಳನ್ನು ಪೂರೈಸಬೇಕು, ಅವರ ಬೆಡ್ ರೂಮ್‌ಗೆ ಹೋಗಬೇಕು ಎಂದು ರಮ್ಯ ಕೃಷ್ಣನ್ ಹೇಳಿದ್ದಾರೆ.