ಬಿಗ್ ರಿವೀಲ್..!! ರಿಷಬ್ ಶೆಟ್ಟಿ ಅವರನ್ನು ಬೇಟಿಯಾದ ರಾಣಾ ದಗ್ಗುಬಾಟಿ.. ಕಾರಣ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ
Rana daggubati: ರಿಷಬ್ ಶೆಟ್ಟಿ... ಸದ್ಯ ಈ ಹೆಸರು ನ್ಯಾಷನಲ್ ಲೆವೆಲ್ ಅಲ್ಲಿ ಫೇಮಸ್ ಆಗಿದೆ, ಕೇವಲ ಒಂದೆ ಒಂದು ಸಿನಿಮಾದ ಮೂಲಕ ಕನ್ನಡದ ನಟ ರಿಷಬ್ ಶೆಟ್ಟಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ, ಆದರೆ ಇದೀಗ ಹೊರಬಿದ್ದಿರುವ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು, ಈ ಸಿನಿಮಾ ರಿಲೀಸ್ ಆಗಿ ಇದೀಗ ಎರಡು ವರ್ಷ ಕಳೆದರೂ ಈ ಸಿನಿಮಾದ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ.
ಕಾಂತಾರ ಸಿನಿಮಾ ಸಿನಿ ರಂಗವನ್ನೆ ಬೆಚ್ಚಿ ಬೀಳಿಸಿದ ಸಿನಿಮಾ, ಇದನ್ನು ನೋಡಿ ಈ ರೀತಿ ಕೂಡ ಸಿನಿಮಾ ಮಾಡಬಹುದಾ ಎಂದು ಹಲವರು ಬಾಯಿ ಮೇಲೆ ಕೈ ಇಟ್ಟುಕೊಂಡಿದ್ದರು. ಅಷ್ಟೆ ಯಾಕೆ ವಿಶ್ವದೆಲ್ಲೆಡೆ ಪ್ರೇಕ್ಷಕರು ಸಿನಿಮಾ ನೋಡಿ ವ್ಹಾ... ಎಂದಿದ್ದರು.
ಈ ಒಂದು ಸಿನಿಮಾ ರಿಷಬ್ ಶೆಟ್ಟಿ ಅವರ ರೇಂಜ್ ಅನ್ನೆ ಬದಲಿಸಿ ಬಿಟ್ಟಿದೆ, ಒಂದು ಸಿನಿಮಾದ ಮೂಲಕ ಶೆಟ್ರು ಸಾಲು ಸಾಲು ಅವಾರ್ಡ್‌ಗಳನ್ನು ಬಾಚಿಕೊಂಡಿದ್ದಾರೆ. ಅಷ್ಟೆ ಯಾಕೆ ರಾಷ್ಟ್ರ ಪ್ರಶಸ್ತಿಯನ್ನೂ ಕೂಡ ಮುಡಿಗೇರಿಸಿಕೊಂಡಿದ್ದಾರೆ.
ಈ ಸಿನಿಮಾದ ನಂತರ ಈ ಸಿನಿಮಾದ ಸೀಕ್ವೆಲ್ ಆಗಿ ಕಾಂತಾರ ಚಾಪ್ಟರ್ 1 ಸಿನಿಮಾ ತೆರೆಗೆ ಬರಲು ಸಜ್ಜಾಗುತ್ತಿದೆ, ಸಿನಿಮಾದ ಶೂಟಿಂಗ್ ಈಗಾಗಲೆ ಆರಂಭಗೊಂಡಿದ್ದು, ಸಿನಿಮಾದ ರಿಲೀಸ್ ಯಾವಾಗ ಎಂದು ಪ್ರೇಕ್ಷಕರು ಎದುರು ನೋಡುತ್ತಿದ್ದಾರೆ.
ಈ ಸಿನಿಮಾ ಗೆಲುವಿನ ನಂತರ ರಿಷಬ್ ಶೆಟ್ಟಿ ಅವರ ರೇಂಜ್ ಬದಲಾಗಿದೆ, ನಟನನ್ನು ಹುಡುಕುತ್ತಾ ಟಾಲಿವುಡ್, ಕಾಲಿವುಡ್, ಬಾಲಿವುಡ್ ಇಂಡಸ್ಟ್ರಿಯ ಸ್ಟಾರ್ಸ್ ಬರುತ್ತಿದ್ದಾರೆ.
ಕಳೆದ ತಿಂಗಳಷ್ಟೆ ಜೂ. ಎನ್‌ಟಿಆರ್ ಅವರು ರಿಷಬ್ ಶೆಟ್ಟಿಯವರನ್ನು ಬೇಟಿ ಮಾಡಲು ಆಗಮಿಸಿದ್ದರು. ರಿಷಬ್ ಶೆಟ್ಟಿ ಅವರು ಎನ್‌ಟಿಆರ್ ಅವರಿಗೆ ಕರ್ನಾಟಕದ ಹಲವು ಜಾಗಗಳು ಹಾಗೂ ಆಹಾರವನ್ನು ಪರಿಚಯಿಸಿದ್ದರು.
ಇದೀಗ ಟಾಲಿವುಡ್‌ನ ಮತ್ತೊಬ್ಬ ಸ್ಟಾರ್ ರಾಣಾ ದಗ್ಗುಬಾಟಿ ಅವರು ರಿಷಬ್ ಶೆಟ್ಟಿ ಅವರನ್ನು ಬೇಟಿ ಮಾಡಲು ಬಂದಿದ್ದಾರೆ, ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಜನರು ರಾಣಾ ಅವರು ಕೂಡ ಕಾಂತಾರಾ ಚಾಪ್ಟರ್ 1 ಸಿನಿಮಾದಲ್ಲಿ ನಟನೆ ಮಾಡಲಿದ್ದಾರೆ, ಆದ್ದರಿಂದ ಅವರನ್ನು ಬೇಟಿ ಮಾಡಲು ಬಂದಿದ್ದಾರೆ ಎಂದು ಊಹಿಸಿದ್ದರು.
ಆದರೆ, ರಾಣಾ ದಗ್ಗಬಾಟಿ ಅವರು ರಿಷಬ್ ಶೆಟ್ಟಿಯವರನ್ನು ಬೇಟಿ ಮಾಡಲು ಬಂದಿರುವುದೇನೋ ನಿಜ, ಆದರೆ ಈ ಭೇಟಿ ಕಾಂತಾರ ಸಿನಿಮಾದ ಕಾರಣಕ್ಕಲ್ಲ, ಹೊರತಾಗಿ ಸಂದರ್ಶನದ ಕಾರಣಕ್ಕಾಗಿ.
ಹೌದು, ರಾಣಾ ತಗ್ಗುಬಾಟಿ ಅವರು ಒಟಿಟಿಯ ಸಂದರ್ಶನಕ್ಕಾಗಿ ಹಲವರು ಸ್ಟಾರ್‌ಗಳನ್ನು ಬೇಟಿಯಾಗಿ ಸಂದರ್ಶನವನ್ನು ಮಾಡುತ್ತಾರೆ, ಇದೇ ರೀತಿ ಅವರು ಇದೀಗ ರಿಷಬ್ ಶೆಟ್ಟಿ ಅವರನ್ನು ಸಂದರ್ಶನ ಮಾಡಲು ಅವರ ಬೇಟಿ ಮಾಡಿದ್ದಾರೆ.
ಆದರೆ, ಅಭಿಮಾನಿಗಳು ರಿಷಬ್ ಶೆಟ್ಟಿ ಅವರೊಂದಿಗೆ ರಾಣಾ ದಗ್ಗುಬಟಿ ಅವರ ಫೋಟೋವನ್ನು ನೋಡಿದ ತಕ್ಷಣ ರಾಣಾ ಅವರು ಕೂಡ ಕಾಂತಾರ ಸಿನಿಮಾದಲ್ಲಿ ನಟಿಸುತ್ತಾರೆ, ಎಂದು ಕುಷಿ ಪಟ್ಟಿದ್ದರು. ಆದರೆ ಇದೀಗ ಈ ಸುದ್ದಿ ಹುಸಿಯಾಗಿದ್ದು, ಅಭಿಮಾನಿಗಳಲ್ಲಿ ನಿರಾಸೆ ಮೂಡಿದೆ.