ರಣಬೀರ್-ಆಲಿಯಾ ಮದುವೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತಳು ಈ ಸುಂದರಿ..!
ಬಾಲಿವುಡ್ ತಾರೆ ಆಲಿಯಾ ಭಟ್ ಅವರ ಆತ್ಮೀಯ ಸ್ನೇಹಿತೆ ಆಕಾಂಕ್ಷಾ ರಂಜನ್ ಕಪೂರ್ ಇತ್ತೀಚೆಗೆ ತಮ್ಮ ಸ್ನೇಹಿತೆಯ ಮೆಹಂದಿ ಸಮಾರಂಭದ ಇತ್ತೀಚಿನ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರಗಳಲ್ಲಿ ನಟಿ ಆಕಾಂಕ್ಷಾ ತನ್ನ ಸ್ನೇಹಿತೆ ಆಲಿಯಾ ಭಟ್ ಅವರ ಮೆಹಂದಿ ಸಮಾರಂಭದಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಿರುವುದನ್ನು ಕಾಣಬಹುದು.
ಈ ವೇಳೆ ಆಕಾಂಕ್ಷಾ ರಂಜನ್ ಹಳದಿ ಬಣ್ಣದ ಸೀರೆಯಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದರು. ಈ ವೇಳೆ ಆಕಾಂಕ್ಷಾ ತುಂಬಾ ಸ್ಟೈಲಿಶ್ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದರು. ಈ ಚಿತ್ರದಲ್ಲಿ ನೀವು ಕರಣ್ ಜೋಹರ್ ಜೊತೆ ಆಕಾಂಕ್ಷಾ ಅವರನ್ನು ನೋಡಬಹುದು. ಕರಣ್ ಜೋಹರ್ ಜೊತೆ ಡ್ಯಾನ್ಸ್ ಮಾಡುವಾಗಲೂ ಆಕಾಂಕ್ಷಾ ರಂಜನ್ ಕಪೂರ್ ತುಂಬಾ ಅಳುತ್ತಿದ್ದರು.
ಈ ಸಂದರ್ಭದಲ್ಲಿ ಆಲಿಯಾ ಭಟ್ ತನ್ನ ಸ್ನೇಹಿತೆಗೆ ಸಮಾಧಾನ ಹೇಳಿ ಸಮಾಧಾನಪಡಿಸಿದ್ದಾರೆ. ಈ ಚಿತ್ರಗಳು ಆಲಿಯಾ ಭಟ್ ಅವರ ಮೆಹಂದಿ ಸಮಾರಂಭದ್ದಾಗಿವೆ. ನಟಿ ಆಕಾಂಕ್ಷಾ ರಂಜನ್ ಕಪೂರ್ ಅವರ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಆಗರುವ ಈ ಚಿತ್ರಗಳು ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿವೆ.
ರಣಬೀರ್ ಮತ್ತು ಆಲಿಯಾ ಮದುವೆ ಸಮಾರಂಭದಲ್ಲಿ ಆಕಾಂಕ್ಷಾ ರಂಜನ್ ಕಪೂರ್ ಬಿಕ್ಕಿ ಬಿಕ್ಕಿ ಅತ್ತಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿವೆ. ಅಷ್ಟಕ್ಕೂ ಆಲಿಯಾ ಭಟ್ ಗೆಳತಿ ಇಷ್ಟೊಂದು ಭಾವುಕಳಾದದ್ದು ಯಾಕೆ ಎಂದು ಈ ಚಿತ್ರಗಳನ್ನು ನೋಡಿ ಎಲ್ಲರೂ ಆಶ್ಚರ್ಯ ಪಡುತ್ತಿದ್ದಾರೆ.
ಆಲಿಯಾ ಭಟ್ ಸ್ನೇಹಿತೆ ಆಕಾಂಕ್ಷಾ ರಂಜನ್ ಕಪೂರ್ ಕೂಡ ರಣಬೀರ್- ಆಲಿಯಾ ಮದುವೆಯಲ್ಲಿ ಸಾಕಷ್ಟು ನೃತ್ಯ ಮಾಡಿ ಮೋಜು-ಮಸ್ತಿ ಮಾಡಿದ್ದಾರೆ. ಮದುವೆಯ ಈ ಚಿತ್ರಗಳನ್ನು ಆಕಾಂಕ್ಷಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಒಂದು ಕಡೆ ಅತ್ತಿರುವ ಫೋಟೋಗಳು ಇನ್ನೊಂದು ಕಡೆ ನೃತ್ಯ ಮಾಡಿ ಖುಷಿಯಿಂದಿರುವ ಫೋಟೋಗಳನ್ನು ನೋಡಿ ನೆಟಿಜನ್‍ಗಳು ಕನ್ಫೂಸ್ ಆಗಿದ್ದಾರೆ.