ರಣಬೀರ್‌ ಕಪೂರ್‌ ಕಾಸ್ಮೆಟಿಕ್‌ ಸರ್ಜರಿ ಮಾಡಿಸಿದ್ರಾ..‌ ವೈರಲ್‌ ಫೋಟೋ ಕಂಡು ಬೆರಗಾದ ಫ್ಯಾನ್ಸ್‌ !?

Sun, 28 Apr 2024-7:33 am,

ಬಾಲಿವುಡ್ ನಟ ರಣಬೀರ್ ಕಪೂರ್ ಅವರ 2016 ರಲ್ಲಿ ತೆಗೆದ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಈ ಫೋಟೋದಲ್ಲಿ ರಣಬೀರ್ ಲುಕ್ ಈಗಿನಂತಿಲ್ಲ. 2024 ರ ಫೋಟೋದಲ್ಲಿ ರಣಬೀರ್‌ ಕಪೂರ್‌ ಅವರ ಲುಕ್‌ ಸಿಕ್ಕಾಪಟ್ಟೆ ಚೇಂಜ್‌ ಆಗಿದೆ. 

ರಣಬೀರ್‌ ಕಪೂರ್‌ ಮೊದಲಿಗಿಂತ ಮುಖದಲ್ಲಿ ಬದಲಾಗಿದ್ದಾರೆ. ಸಣ್ಣಗಿದ್ದ ಮುಖ ಫಿಟ್‌ ಆಗಿ ಹ್ಯಾಂಡಸಮ್‌ ಆಗಿ ಕಾಣುತ್ತಿದೆ. ಅವರ ಎದೆಭಾಗದಲ್ಲಿಯೂ ಬದಲಾವಣೆ ಕಾಣುತ್ತಿದೆ. ಈ ಫೋಟೋಗಳಲ್ಲಿ 8 ವರ್ಷಗಳಲ್ಲಿ ರಣಬೀರ್ ಅವರ ಲುಕ್ ಎಷ್ಟು ಬದಲಾಗಿದೆ ಎಂಬುದನ್ನು ನೋಡಬಹುದು. 

ರಣಬೀರ್‌ ಕಪೂರ್‌ ಸಖತ್‌ ಫಿಟ್‌ ಆಗಿದ್ದಾರೆ. ಬಾಡಿ ಬಿಲ್ಡ್‌ ಮಾಡಿದ್ದಾರೆ. ಇದನ್ನು ನೋಡಿದ ಕೆಲವರು ರಣಬೀರ್‌ ಇಷ್ಟೊಂದು ಬದಲಾಗಲು ಕಾರಣ ಕಾಸ್ಮೆಟಿಕ್‌ ಸರ್ಜರಿ ಇರಬಹುದೇನೋ ಎಂದು ಮಾತನಾಡುತ್ತಿದ್ದಾರೆ ಎನ್ನಲಾಗಿದೆ. 

ರಣಬೀರ್ ಕಪೂರ್ ಕೂದಲಿನ ಸರ್ಜರಿ ಮಾಡಿಸಿದ್ದಾರೆ ಎಂದು ಕೆಲವರು ಹೇಳುತ್ತಾರೆ. ಇದು ಅವರ ಹೊಸ ಫೋಟೋದಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಹಳೆಯ ಫೋಟೋದಲ್ಲಿ ಅಸಮವಾಗಿದ್ದ ಹೇರ್‌ ಲೈನ್ ಸ್ಪಷ್ಟವಾಗಿ ಗೋಚರಿಸುತ್ತದೆ. ಹೊಸ ಫೋಟೋಗಳಲ್ಲಿ ಕೂದಲಿನ ಹೇರ್‌ ಲೈನ್‌ ನೇರವಾಗಿದೆ. 

ರಣಬೀರ್‌ ಕಪೂರ್‌ ಕೂಡ ನಟಿಯರಂತೆ ಕಾಸ್ಮೆಟಿಕ್‌ ಸರ್ಜರಿ ಮಾಡಿಸಿರಬಹುದು ಎಂಬ ಅನುಮಾನ ಅನೇಕರಲ್ಲಿ ಮೂಡಿದೆ. ಆದರೆ‌ ವರದಿಯ ಪ್ರಕಾರ, ರಣಬೀರ್‌ ಕಪೂರ್ ಜಿಮ್‌ ಮತ್ತು ಸ್ಟ್ರಿಕ್ಟ್‌ ಡಯೆಟ್‌ ಪಾಲಿಸಿ ಈ ರೀತಿ ಫಿಟ್‌ ದೇಹ ಪಡೆದಿದ್ದಾರೆ ಎನ್ನಲಾಗಿದೆ.

ರಣಬೀರ್ ಕಪೂರ್ ಶೀಘ್ರದಲ್ಲೇ ನಿತೀಶ್ ತಿವಾರಿ ಅವರ ಮಹಾಕಾವ್ಯ 'ರಾಮಾಯಣ'ದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭಗವಾನ್ ರಾಮನ ಪಾತ್ರದಲ್ಲಿ ನಟಿಸಲಿದ್ದು, ಇದರಲ್ಲಿ ಸಾಯಿ ಪಲ್ಲವಿ ತಾಯಿ ಸೀತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link