ಮೊದಲ ನೋಟದಲ್ಲೇ ಪ್ರೀತಿ ಆಗಿಲ್ಲ, ಈಗಲೂ... ಆಲಿಯಾ ಬಗ್ಗೆ ರಣಬೀರ್ ಸೆನ್ಸೇಷನಲ್ ಕಾಮೆಂಟ್! ವಿಚ್ಛೇದನ ಫಿಕ್ಸ್?!
ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಕೆಲವು ವರ್ಷಗಳ ಡೇಟಿಂಗ್ ನಂತರ ಏಪ್ರಿಲ್ 14, 2022 ರಂದು ವಿವಾಹವಾದರು. ಈ ಕ್ಯೂಟ್ ಜೋಡಿ 2022 ಮುದ್ದಾದ ಹೆಣ್ಣು ಮಗು ರಾಹಾಗೆ ಜನ್ಮ ನೀಡಿದ್ರು.. ವರದಿಯ ಪ್ರಕಾರ ಆಲಿಯಾ ಹಾಗೂ ರಣಬೀರ್ ನಡುವಿನ ವಯಸ್ಸಿನ ಅಂತರ 11 ವರ್ಷ.
ನಿಖಿಲ್ ಕಾಮತ್ ಅವರ ಪಾಡ್‌ಕಾಸ್ಟ್‌ನಲ್ಲಿ, ರಣಬೀರ್ ಆಲಿಯಾ ಜೊತೆಗಿನ ದಾಂಪತ್ಯ ಹೇಗಿದೆ ಎನ್ನುವುದರ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ಕಾಮೆಂಟ್‌ಗಳನ್ನು ಮಾಡಿದ್ದಾರೆ..
“ನಾನು ತುಂಬಾ ಅದೃಷ್ಟಶಾಲಿ, ನಾನು ತುಂಬಾ ಆಪ್ತ ಸ್ನೇಹಿತೆಯಾಗಿರುವವನನ್ನು ಮದುವೆಯಾದೆ. ನಿಜ ಹೇಳಬೇಕೆಂದರೇ ನಮ್ಮಿಬ್ಬರಿಗೆ ಮೊಲದ ನೋಟದಲ್ಲೇ ಪ್ರೀತಿಯಾಗಿಲ್ಲ.."
"ನಾವೀಬ್ಬರೂ ಮೊದಲು ಬೆಸ್ಟ್ ಫ್ರೆಂಡ್ಸ್ ಆಗಿ ಆಮೇಲೆ ಪ್ರೇಮಿಗಳಾಗಿದೆವು.. ಅವಳು ಈಗಲೂ ನನ್ನ ಬೆಸ್ಟ್ ಫ್ರೆಂಡ್ ಎಂದರೇ ತಪ್ಪಾಗುವುದಿಲ್ಲ.. ಅದರಲ್ಲಿ ನಾನು ನಿಜವಾಗಿಯೂ ಅದೃಷ್ಟಶಾಲಿ" ಎಂದಿದ್ದರು..
ಅಲ್ಲದೇ "ಆಲಿಯಾ ನನಗಿಂತ ತುಂಬಾ ಚಿಕ್ಕವಳು.. ನಮ್ಮಿಬ್ಬರ ನಡುವಿನ ವಯಸ್ಸಿನ ಅಂತರ 11 ವರ್ಷ ಹೀಗಾಗಿ ಆಕೆ ಹೆಚ್ಚಾಗಿ ತಮಾಷೆ ಮಾಡಿಕೊಂಡೆ ನನ್ನೊಂದಿಗಿರುತ್ತಾಳೆ"
"ಆಲಿಯಾ ನಾನು ಮೊದಲು ಭೇಟಿಯಾಗಿದ್ದು ಅವಳಿಗೆ 9 ವರ್ಷ ವಯಸ್ಸಿದ್ದಾಗ.. ಆಗ ನನಗೆ 20 ವರ್ಷ.. ಆ ಪುಟ್ಟ ಹುಡುಗಿಯನ್ನು ಮದುವೆಯಾಗುತ್ತೇನೆ ಎಂದು ಊಹಿಸಿಯೂ ಇರಲಿಲ್ಲ.. ಅವಳೆಂದರೇ ನನಗೆ ತುಂಬಾ ಇಷ್ಟ.. ಅವಳೊಂದಿಗೆ ನನ್ನ ಸಮಯವನ್ನು ಕಳೆಯಲು ಇಷ್ಟಪಡುತ್ತೇನೆ" ಎಂದು ನಟ ರಣಬೀರ್ ಹೇಳಿಕೊಂಡಿದ್ದರು..