ರಂಗಾಯಣ ರಘು ಪತ್ನಿ ಕೂಡ ಕನ್ನಡದ ಖ್ಯಾತ ನಟಿ... ಮಗಳಂತೂ ಸಿಕ್ಕಾಪಟ್ಟೆ ಫೇಮಸ್!
ಸ್ಯಾಂಡಲ್‌ವುಡ್ ಹಾಸ್ಯ ನಟ ರಂಗಾಯಣ ರಘು ಅವರ ನಟನೆ ಮೆಚ್ಚದವರಿಲ್ಲ. ರಂಗಾಯಣ ರಘು ನಿಜವಾದ ಹೆಸರು ಕೊತ್ತೂರು ಚಿಕ್ಕರಂಗಪ್ಪ ರಘುನಾಥ್ ಅಲಿಯಾಸ್ ಕೆ.ಸಿ.ರಘುನಾಥ್.
ರಂಗಾಯಣದಲ್ಲಿ ಸೇರಿಕೊಂಡ ಬಳಿಕ ಇವರ ಹೆಸರು ರಂಗಾಯಣ ರಘು ಎಂದೇ ಖ್ಯಾತಿ ಪಡೆಯಿತು. ರಂಗಾಯಣ ರಘು ಪೋಷಕ ನಟನಾಗಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.
ನಟ ರಂಗಾಯಣ ರಘು ಪತ್ನಿ ಮಂಗಳ. ಇವರೂ ಕೂಡ ರಂಗಭೂಮಿ ಕಲಾವಿದೆ ಮತ್ತು ನಟಿ. ರಘು ಮತ್ತು ಮಂಗಳ ಪ್ರೀತಿಸಿ ಮದುವೆಯಾದವರು.
ನಟಿ ಮಂಗಳ ಅವರು ಸಂಚಾರಿ ಥಿಯೇಟರ್ ಕೂಡಾ ನಡೆಸುತ್ತಾರೆ. ರಂಗಾಯಣ ರಘು ಪತ್ನಿ ಮಂಗಳ ನಾಟಕಗಳಲ್ಲಿ ನಟಿಸಿ ಥೇಯೆಟರ್ ಆರ್ಟಿಸ್ಟ್ ಆಗಿ ಖ್ಯಾತಿ ಪಡೆದಿದ್ದಾರೆ. ನಾಟಕ ಆಯೋಜಿಸಿ ಖುದ್ದು ತಾವೇ ನಿರ್ದೇಶನ ಕೂಡಾ ಮಾಡುತ್ತಾರೆ.
ನಟ ರಂಗಾಯಣ ರಘು ಪುತ್ರಿ ಚುಕ್ಕಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದಾರೆ. ನಾಟಕಗಳನ್ನು ನಿರ್ದೇಶಿಸುತ್ತಾರೆ. ಥೇಯೆಟರ್ ಆರ್ಟಿಸ್ಟ್ ಆಗಿ ಖ್ಯಾತಿ ಪಡೆದಿದ್ದಾರೆ.