`ಅರಣ್ಯದೊಳ್‌ ಮಾಯಾಲೋಕ` : ಮಿಂಚುಹುಳು ಸೃಷ್ಟಿಸಿದ ಪ್ರಪಂಚವಿದು...

Fri, 06 May 2022-5:11 pm,

ಈ ಅಪರೂಪದ ದೃಶ್ಯ ಕಂಡುಬಂದಿದ್ದು, ತಮಿಳುನಾಡಿನ ಅಣ್ಣಾಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ. ಮರಗಳ ಮೇಲೆ ಕುಳಿತಿರುವ ಗಂಡು ಮಿಂಚುಹುಳುಗಳು ಸಂಭಾವ್ಯ ಸಂಗಾತಿಗಳನ್ನು ಹುಡುಕಲು ಈ ಬೆಳಕಿನ ಪ್ರದರ್ಶನಗಳನ್ನು ಮಾಡುತ್ತವೆ ಎಂಬುದು ಅಧ್ಯಯನದ ಮೂಲಕ ತಿಳಿದುಬಂದಿದೆ. 

ಜಗತ್ತಿನಲ್ಲಿ 2,000ಕ್ಕೂ ಹೆಚ್ಚು ಜಾತಿಯ ಮಿಂಚುಹುಳುಗಳಿವೆ. ಎಟಿಆರ್‌ನಲ್ಲಿ ಕಂಡುಬರುವ ಮಿಂಚುಹುಳುಗಳು ಅಬ್ಸ್‌ಕಾಂಡಿಟಾ ಜಾತಿಗೆ ಸೇರಿದವಾಗಿವೆ. ಇವು ಹೊಸ ಜಾತಿಯಾಗಿರಬಹುದು ಎಂದು ಸಹ ವಿಜ್ಞಾನಿಗಳು ಹೇಳುತ್ತಾರೆ. ಇವುಗಳನ್ನು ಸರಿಯಾಗಿ ಗುರುತಿಸಲು ವಿವರವಾದ ಸಂಶೋಧನೆ ಮತ್ತು ಡಿಎನ್​ಎ ಅನುಕ್ರಮದ ಅಗತ್ಯವಿದೆ. 

ಐಎಫ್‌ಎಸ್‌ ಅಧಿಕಾರಿ ರಾಮಸುಬ್ರಮಣ್ಯಂ ಅವರ ನೇತೃತ್ವದಲ್ಲಿ ಉಪನಿರ್ದೇಶಕರಾದ ಎಂ.ಜಿ.ಗಣೇಶನ್, ಅರಣ್ಯ ಅಧಿಕಾರಿಗಳು, ವಿಜ್ಞಾನಿಗಳು ಮತ್ತು ಸಂರಕ್ಷಣಾ ತಜ್ಞರ ತಂಡವು ಈ ಮಿಂಚುಹುಳುಗಳ ಬಗ್ಗೆ ಅಧ್ಯಯನ ಮಾಡಬೇಕು ಎಂದು ಹೊರಟಿದ್ದ ಸಂದರ್ಭದಲ್ಲಿ ಈ ದೃಶ್ಯ ಕ್ಯಾಮರಾ ಕಣ್ಣಿಗೆ ಬಿದ್ದಿದೆ. 

ದೇಶದಲ್ಲಿ ಕೆಲವು ಕಡೆಗಳಲ್ಲಿ ಮಾತ್ರ ಕಾಣಸಿಗುವ ಈ ಮಿಂಚುಹುಳುಗಳು ಮಹಾರಾಷ್ಟ್ರ ಮತ್ತು ತಮಿಳುನಾಡಿನ ಪರಂಬಿಕುಲಂ ಮತ್ತು ನೆಲ್ಲಿಯಂಪತಿಯ ಕೆಲವು ಸ್ಥಳಗಳಲ್ಲಿ ಹೆಚ್ಚಾಗಿವೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link