ಮುಖೇಶ್-ನೀತಾ ಅಂಬಾನಿ ಮದುವೆಯ ಅಪರೂಪದ ಫೋಟೋಸ್
)
ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿಯವರ ಲವ್ ಸ್ಟೋರಿ ಯಾವುದೇ ಸಿನಿಮಾ ಪ್ರೇಮಕತೆಯಿಂದ ಕಡಿಮೆ ಇಲ್ಲ. ನೀತಾ ಅಂಬಾನಿಯವರಿಗೆ ಶಾಸ್ಟ್ರೀಯ ನೃತ್ಯ ಎಂದರೆ ಪಂಚಪ್ರಾಣ. ಒಂದರ್ಥದಲ್ಲಿ ಈ ನೃತ್ಯವೇ ಅವರು ಅಂಬಾನಿ ಕುಟುಂಬದ ಸೊಸೆಯಾಗಲು ಕಾರಣವಾಯಿತು ಎಂತಲೂ ಹೇಳಬಹುದು.
)
ಸುಮಾರು 38 ವರ್ಷಗಳ ಹಿಂದೆ ನೀತಾ ಅವರು ನವರಾತ್ರಿ ಸಮಯದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ನೃತ್ಯ ಮಾಡಿದ್ದರು. ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಧೀರೂಭಾಯಿ ಅಂಬಾನಿ ಮತ್ತು ಕೋಕಿಲಾಬೆನ್ ನೀತಾ ಅವರ ನೃತ್ಯ ಕಂಡು ಮನಸೋತಿದ್ದರು ಎನ್ನಲಾಗಿದೆ.
)
ನೃತ್ಯ ಕಾರ್ಯಕ್ರಮದಲ್ಲಿ ನೀತಾ ಅವರ ನೃತ್ಯಕ್ಕೆ ಮನಸೋತಿದ್ದ ಧೀರೂಭಾಯಿ ಅಂಬಾನಿ ಮತ್ತು ಕೋಕಿಲಾಬೆನ್ ಕಾರ್ಯಕ್ರಮದ ಬಳಿಕ ಮನೆಗೆ ಹೋಗಿ ನೀತಾ ಅವರ ಮನೆಗೆ ಕರೆ ಮಾಡಿದ್ದರಂತೆ. ಧೀರೂಭಾಯಿ ತನ್ನನ್ನು ಫೋನ್‌ನಲ್ಲಿ ಪರಿಚಯಿಸಿಕೊಂಡಾಗ ನೀತಾ ನಂಬಲಾರದೆ ರಾಂಗ್ ನಂಬರ್ ಎಂದು ಹೇಳಿ ಕರೆಯನ್ನು ನಿಷ್ಕ್ರಿಯಗೊಳಿಸಿದ್ದರಂತೆ. ಆದರೆ, ಇದರಿಂದ ವಿಚಲಿತರಾಗದ ಧೀರೂಭಾಯಿ ಕೂಡ ಹಲವು ಬಾರಿ ಕರೆ ಮಾಡದ್ದರು. ಇತ್ತ ನೀತಾ ನಿಜವಾಗಿಯೂ ಧೀರೂಭಾಯಿ ಅಂಬಾನಿಯೇ ಮಾತನಾಡುತ್ತಿರುವುದಾ ಎಂದು ನಂಬಲು ಕೊಂಚ ಸಮಯವೇ ಬೇಕಾಯಿತಂತೆ.
ಕುಟುಂಬದವರ ಮಾತುಕತೆ ಬಳಿಕ ಮುಖೇಶ್ ಅಂಬಾನಿ ನೀತಾ ಅಂಬಾನಿಯವರಿಗೆ ಅತಿರಂಚಿತ ಶೈಲಿಯಲ್ಲಿ ಪ್ರಪೋಸ್ ಮಾಡಿದ್ದರು ಎಂದು ಹೇಳಲಾಗುತ್ತದೆ. ಒಮ್ಮೆ ನೀತಾ ಅವರನ್ನು ಲಾಂಗ್ ಡ್ರೈವ್ ಕರೆದೊಯ್ದಿದ್ದ ಮುಖೇಶ್ ಅಂಬಾನಿ, ಸಿಗ್ನಲ್ ನಲ್ಲಿಯೇ ಕಾರು ನಿಲ್ಲಿಸಿ ಅವರಿಗೆ ಪ್ರಪೋಸ್ ಮಾಡಿದ್ದರಂತೆ. ಸಿಗ್ನಲ್ ಗ್ರೀನ್ ಲೈಟ್ ತೋರಿದರೂ ಮುಖೇಶ್ ಕಾರು ಮಾತ್ರ ಅಲುಗಾಡಲಿಲ್ಲ. ಹಿಂದಿನಿಂದ ಇತರ ವಾಹನಗಳು ಹಾರ್ನ್ ಮಾಡಲು ಆರಂಭಿಸಿದ್ದವು. ನೀತಾ ಮುಖೇಶ್ ಅಂಬಾನಿಯವರನ್ನು ಮುಂದೆ ಸಾಗಲು ತಿಳಿಸಿದರೂ ಕೂಡ ಮುಖೇಶ್ ಮಾತ್ರ ತನಗೆ ಉತ್ತರ ಸಿಗದೇ ಮುಂದೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಖಡಕ್ ಆಗಿ ಹೇಳಿದ್ದರಂತೆ...
ನೀತಾ ಮುಖೇಶ್ ಅಂಬಾನಿಯವರ ಪ್ರೋಪೊಸಲ್ ಗೆ ಹೌದು ಎಂದು ಹೇಳಿದ ಬಳಿಕವೇ ಮುಖೇಶ್ ಮುಂದೆ ಸಾಗಿದರು ಎಂದು ಹೇಳಲಾಗುತ್ತದೆ. ಈ ಜೋಡಿ ಇಂದು ಜಗತ್ತಿಗೆ ಅತ್ಯುತ್ತಮ ಜೋಡಿಗಳಲ್ಲಿ ಒಂದಾಗಿದೆ.