Rashi Parivartan : ಸೂರ್ಯ, ಗುರು ಸೇರಿದಂತೆ ಪಂಚ ಗ್ರಹಗಳ ರಾಶಿ ಪರಿವರ್ತನೆ; ಯಾವ ರಾಶಿಗಳ ಮೇಲಾಗಲಿದೆ ಪ್ರಭಾವ

Fri, 02 Apr 2021-4:17 pm,

ಗ್ರಹಗಳ ರಾಜಕುಮಾರ ಎಂದು ಕರೆಯಲ್ಪಡುವ ಬುಧ ಗ್ರಹವು ಏಪ್ರಿಲ್ ತಿಂಗಳ ಮೊದಲ ದಿನದಂದು ರಾಶಿಚಕ್ರವನ್ನು ಬದಲಾಯಿಸಿದೆ. ಅಂದರೆ ಏಪ್ರಿಲ್ 1ರಂದು ಬುಧ ಕುಂಭ ರಾಶಿಯಿಂದ ಹೊರಟು ಮೀನ ರಾಶಿ ಪ್ರವೇಶಿಸಿದೆ. ಏಪ್ರಿಲ್16ರವರೆಗೆ ಬುಧ ಗ್ರಹ ಮೀನ ರಾಶಿಯಲ್ಲಿರುತ್ತದೆ. ಈ ಗ್ರಹದ ಸ್ಥಾನ ಪಲ್ಲಟ  ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತವೆ.

 ಏಪ್ರಿಲ್ 6, 2021 ರ ಮಂಗಳವಾರದಂದು ಗುರು ಗ್ರಹ ಕೂಡಾ ಮಕರ ರಾಶಿಯಿಂದ ಕುಂಭ ರಾಶಿ ಪ್ರವೇಶಿಸುತ್ತಾನೆ. ಸೆಪ್ಟೆಂಬರ್ 14 ರವರೆಗೆ ಕುಂಭ ರಾಶಿಯಲ್ಲಿಯೇ ಗುರು ಉಳಿಯಲಿದ್ದಾನೆ. ನಂತರ, ಮತ್ತೆ ವಕ್ರ ಅವಸ್ಥೆಯಲ್ಲಿ ಗುರು ಮಕರ ರಾಶಿಗೆ ಮರಳಲಿದ್ದಾನೆ. ಅಲ್ಲಿ ನವೆಂಬರ್ 20 ರವರೆಗೆ ಇರುತ್ತಾನೆ. ಇದಾದ ನಂತರ, ಮತ್ತೆ ಕುಂಭ ರಾಶಿ ಪ್ರವೇಶಿಸಲಿದ್ದಾನೆ. ಈ ವರ್ಷ ಗುರು ಒಟ್ಟು ಮೂರು ಬಾರಿ ತನ್ನ ಸ್ಥಾನವನ್ನು ಬದಲಾಯಿಸಿಕೊಳ್ಳಲಿದ್ದಾನೆ. 

ಭೌತಿಕ ಸುಖ ಸೌಲಭ್ಯಗಳನ್ನು ಕರುಣಿಸುವ ಶುಕ್ರ ಗ್ರಹವು ಏಪ್ರಿಲ್ 10 ರ ಶನಿವಾರ ತನ್ನ ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ. ಶುಕ್ರಗ್ರಹ ಮೀನ ರಾಶಿಯಿಂದ ಮೇಷ ರಾಶಿಗೆ ಪ್ರವೇಶಿಸಲಿದ್ದಾನೆ.  ಮೇಷ ರಾಶಿಯಲ್ಲಿ  ಮೇ 4, 2021 ರವರೆಗೆ ಇರುತ್ತಾನೆ. ಇದರ ನಂತರ, ವೃಷಭ ರಾಶಿ ಪ್ರವೇಶಿಸುತ್ತಾನೆ. ಶುಕ್ರನ ಸ್ಥಾನಪಲ್ಲಟ ಎಲ್ಲ ರಾಶಿ ಗಳ ಮೇಲೆ ಪರಿಣಾಮ ಬೀರಲಿದೆ. 

ಗ್ರಹಗಳ ಸೇನಾಪತಿ ಎಂದು ಕರೆಯಲ್ಪಡುವ ಮಂಗಳ ಏಪ್ರಿಲ್ 14 ರಂದು ರಾಶಿಚಕ್ರವನ್ನು ಬದಲಾಯಿಸಲಿದೆ. ಮಂಗಳವು ಪ್ರಸ್ತುತ ವೃಷಭ ರಾಶಿಯಲ್ಲಿದ್ದು, ಏಪ್ರಿಲ್ 14 ರಂದು ಮಿಥುನ ರಾಶಿ ಪ್ರವೇಶಿಸಲಿದ್ದಾನೆ.  ಮಂಗಳ, ಕೋಪ, ಶಕ್ತಿ, ಧೈರ್ಯ, ಯುದ್ಧ ಇತ್ಯಾದಿಗಳಿಗೆ ಕಾರಣವಾಗುವ ಗ್ರಹವೆಂದು ಪರಿಗಣಿಸಲಾಗಿದೆ. ಪ್ರತಿ ಒಂದೂವರೆ ತಿಂಗಳಿಗೊಮ್ಮೆ ಮಂಗಳ ರಾಶಿಚಕ್ರವನ್ನು ಬದಲಾಯಿಸುತ್ತದೆ.

ಮಂಗಳನ ಜೊತೆಗೆ, ಸೂರ್ಯ ಕೂಡ ಏಪ್ರಿಲ್ 14 ರಂದು ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ . ಸೂರ್ಯನು ಪ್ರಸ್ತುತ ಮೀನ ರಾಶಿಯಲ್ಲಿದ್ದು, ಮೇಷ ರಾಶಿ ಪ್ರವೇಶಿಸಲಿದ್ದಾನೆ. ಈ ದಿನವನ್ನು ಮೇಷ ಸಂಕ್ರಾಂತಿ ಎಂದು ಕರೆಯಲಾಗುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link